More

    ನಾಲ್ಕು ಗೋಡೆ ನಡುವಿನ ಕಥೆ-ವ್ಯಥೆ: ವಿಜಯವಾಣಿ ಸಿನಿಮಾ ವಿಮರ್ಶೆ

    • ಚಿತ್ರ: ಫೋರ್ ವಾಲ್ಸ್
    • ನಿರ್ಮಾಣ: ದಯಾನಂದ್ ನಾಯ್ಕ್​
    • ನಿರ್ದೇಶನ: ಸಜ್ಜನ್
    • ತಾರಾಗಣ: ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ, ಡಾ. ಪವಿತ್ರಾ, ಭಾಸ್ಕರ್ ನೀನಾಸಂ ಮುಂತಾದವರು

    | ಚೇತನ್ ನಾಡಿಗೇರ್ ಬೆಂಗಳೂರು

    ಬೆಳೆದು ನಿಂತ ಮೂವರು ಹೆಣ್ಮಕ್ಕಳ ಮದುವೆ ಬಗ್ಗೆ ಯೋಚಿಸಬೇಕಿದ್ದ ಶಂಕರ, ಅವರ ಮದುವೆಗೂ ತನಗೂ ಸಂಬಂಧವೇ ಇಲ್ಲದಂತೆ ಇದ್ದುಬಿಡುತ್ತಾನೆ. ಅವನು ಅಷ್ಟೊಂದು ನಿರ್ಲಿಪ್ತನಾಗಿರುವುದನ್ನು ನೋಡಿ ಎಲ್ಲರಿಗೂ ಆಶ್ಚರ್ಯ. ಬೇರೆಯವರು ಮಾತಾಡಿಕೊಳ್ಳುವುದು ಬಿಡಿ, ಅವನ ಮಗನೇ ಬಾಯಿಬಿಟ್ಟು ಕೇಳುತ್ತಾನೆ. ತಂದೆಯಾಗಿ ನಿನ್ನ ಜವಾಬ್ದಾರಿಯನ್ನು ಪೂರ್ತಿ ಮಾಡು ಎಂದು ಜಗಳ ಆಡುತ್ತಾನೆ. ಆದರೆ, ಶಂಕರನದ್ದು ಮಾತ್ರ ದಿವ್ಯ ಮೌನ. ಅವನ್ಯಾಕೆ ಹೀಗೆ?

    ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ, ಕೊನೆಯವರೆಗೂ ಕಾಯಬೇಕು. ಬರೀ ಇದೊಂದೇ ಪ್ರಶ್ನೆಯಲ್ಲ, ಆಸ್ತಿಕನಾಗಿದ್ದ ಶಂಕರ ಇದ್ದಕ್ಕಿದ್ದಂತೆ ನಾಸ್ತಿಕನಾಗುವುದು ಯಾಕೆ? ಮಕ್ಕಳ ಓದು ಮುಗಿದ ಮೇಲೆ ಅವರನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಏಕೆ? ಆತ ನಿಗೂಢವಾಗಿ ವರ್ತಿಸುವುದೇಕೆ? ಈ ಪ್ರಶ್ನೆಗಳ ಉತ್ತರಗಳೂ ಕ್ಲೈಮ್ಯಾಕ್ಸ್​ನಲ್ಲೇ ಸಿಗುತ್ತವೆ. ಅದಕ್ಕಾಗಿ ಕಾಯುವ ಮತ್ತು ಅದನ್ನು ಅರಗಿಸಿಕೊಳ್ಳುವ ವ್ಯವಧಾನ ಇರಬೇಕು ಅಷ್ಟೇ. ‘ಫೋರ್ ವಾಲ್ಸ್’ ಒಂದು ಪಕ್ಕಾ ಫ್ಯಾಮಿಲಿ ಚಿತ್ರ. ಶಂಕರ, ಅವನ ಹೆಂಡತಿ ಪಾರ್ವತಿ, ನಾಲ್ವರು ಮಕ್ಕಳ ಸುತ್ತ ಸುತ್ತುವ ಚಿತ್ರ. ಮೂರು ವಿಭಿನ್ನ ಕಾಲಘಟ್ಟದಲ್ಲಿ ನಡೆಯುವ ಚಿತ್ರ. ಬೇರೆ ಚಿತ್ರಗಳಿಗಿಂತ ವಿಭಿನ್ನವಾಗಿ ಏನೋ ಮಾಡುವುದಕ್ಕೆ ನಿರ್ದೇಶಕ ಸಜ್ಜನ್ ಪ್ರಯತ್ನ ಪಟ್ಟಿದ್ದಾರೆ. ಆದರೆ, ಚಿತ್ರದಲ್ಲಿ ಹಲವು ಕೊರತೆಗಳಿವೆ. ಹಲವು ಪ್ರಶ್ನೆಗಳೇಳುತ್ತವೆ. ಅದಕ್ಕೆ ಸೂಕ್ತವಾದ ಉತ್ತರಗಳು ಅಥವಾ ಸಮಜಾಯಿಷಿಗಳು ಸಿಗುವುದಿಲ್ಲ.

    ನಾಲ್ಕು ಗೋಡೆಗಳ ಮಧ್ಯೆ ಇರುವ ನೈಟಿಗಳ ನೋವನ್ನು ಸೂಕ್ಷ್ಮವಾಗಿ ಹೇಳುವುದಕ್ಕೆ ಸಾಧ್ಯವಾಗಿಲ್ಲ. ಚಿತ್ರದಲ್ಲಿ ಕೆಲವು ಅಂಶಗಳು ಮನಮುಟ್ಟುತ್ತವಾದರೂ, ಒಟ್ಟಾರೆ ಚಿತ್ರ ಅತಿರೇಕವಾಗಿ ಮುಗಿಯುತ್ತದೆ. ಬಹುಶಃ ಬರವಣಿಗೆ ಇನ್ನಷ್ಟು ಪಕ್ವವಾಗಿದ್ದರೆ, ಈ ಚಿತ್ರ ಇನ್ನೊಂದು ಹಂತಕ್ಕೆ ಹೋಗುತ್ತಿತ್ತೇನೋ? ಚಿತ್ರದಲ್ಲಿ ಅಚ್ಯುತ್ ಮೊದಲ ಬಾರಿಗೆ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇಡೀ ಚಿತ್ರವನ್ನು ಮುನ್ನಡೆಸುತ್ತಾರೆ. ಯಾರಿಗೂ ಹೇಳಿಕೊಳ್ಳಲಾಗದ ತೊಳಲಾಟವನ್ನು ಬಹಳ ಸೂಕ್ಷ್ಮವಾಗಿ ಅಭಿವ್ಯಕ್ತಿಗೊಳಿಸಿದ್ದಾರೆ. ಸುಜಯ್ ಶಾಸ್ತ್ರಿ, ಭಾಸ್ಕರ್ ನೀನಾಸಂ, ಡಾ. ಪವಿತ್ರಾ ತಮ್ಮ ಕೆಲಸಗಳನ್ನು ಚೆನ್ನಾಗಿ ಮಾಡಿದ್ದಾರೆ. ತಾಂತ್ರಿಕವಾಗಿ ಹೆಚ್ಚೇನೂ ಹೇಳುವಂತಿಲ್ಲ.

    ರಾಜ್ಯದ ಮತ್ತೊಂದು ಶಾಲೆಯಲ್ಲೂ ನಮಾಜ್; ಹಿಜಾಬ್ ಧರಿಸಿ ನಮಾಜ್ ಮಾಡಿದ ವಿದ್ಯಾರ್ಥಿನಿಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts