More

    “ಕರೊನಾ ಲಸಿಕೆ ರಫ್ತು ಕೂಡಲೇ ನಿಲ್ಲಿಸಿ” : ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಪತ್ರ

    ನವದೆಹಲಿ : ಕೆಲವು ರಾಜ್ಯಗಳಲ್ಲಿ ಕರೊನಾ ಲಸಿಕೆಯ ಅಭಾವ ಕಂಡುಬರುತ್ತಿದೆ ಎನ್ನಲಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. “ಕೂಡಲೇ ಲಸಿಕೆಯ ರಫ್ತನ್ನು ನಿಲ್ಲಿಸಿ” ಎಂದಿರುವ ಗಾಂಧಿ, ಅವಶ್ಯಕತೆ ಇರುವವರಿಗೆಲ್ಲಾ ಲಸಿಕೆ ನೀಡುವ ವ್ಯವಸ್ಥೆಯನ್ನು ತೆರೆಯಬೇಕೆಂದು ಆಗ್ರಹಿಸಿದ್ದಾರೆ.

    ಕರೊನಾ ಲಸಿಕೆಯನ್ನು ರಫ್ತು ಮಾಡುವ ಕೇಂದ್ರದ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಗಾಂಧಿ, “ಈ ಸರ್ಕಾರದ ಇತರ ಹಲವು ನಿರ್ಧಾರಗಳಂತೆ ಲಸಿಕೆಗಳ ರಫ್ತು ಕೂಡ ಓವರ್​ಸೈಟ್​ ಆಗಿದೆಯೇ ? ಅಥವಾ ನಮ್ಮ ನಾಗರೀಕರ ವೆಚ್ಚದಲ್ಲಿ ಪ್ರಚಾರವನ್ನು ಗಳಿಸುವ ಪ್ರಯತ್ನವಾಗಿದೆಯೇ ?” ಎಂದು ವ್ಯಂಗ್ಯಪೂರಿತವಾಗಿ ಪ್ರಶ್ನಿಸಿದ್ದಾರೆ. ಭಾರತವು “ಲಸಿಕೆಯ ಹಸಿವನ್ನು” ಎದುರಿಸುತ್ತಿದೆ. ಆದರೆ, 6 ಕೋಟಿಗೂ ಹೆಚ್ಚು ಪ್ರಮಾಣದಲ್ಲಿ ಲಸಿಕೆಗಳನ್ನು ರಫ್ತು ಮಾಡಲಾಗಿದೆ ಎಂದಿದ್ದಾರೆ.

    ಇದನ್ನೂ ಓದಿ: ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ: ಪೈಲಟ್​ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರು

    ವೈಜ್ಞಾನಿಕ ಸಮುದಾಯ ಮತ್ತು ಲಸಿಕೆ ತಯಾರಕರ ಪ್ರಯತ್ನಗಳು “ಕೇಂದ್ರದ ಕಳಪೆ ಅನುಷ್ಠಾನ”ದಿಂದಾಗಿ ದುರ್ಬಲಗೊಂಡಿವೆ ಎಂದು ಪತ್ರದಲ್ಲಿ ಹೇಳಿರುವ ಗಾಂಧಿ, ಸರ್ಕಾರವು ಇತರ ಲಸಿಕೆ ನೀಡುವುದನ್ನೂ ಫಾಸ್ಟ್​ ಟ್ರ್ಯಾಕ್ ಮೇಲೆ ನಡೆಸಬೇಕು ಎಂದಿದ್ದಾರೆ. ಏಪ್ರಿಲ್ 8, 2021 ರಂದು ಬರೆದಿರುವ ಪತ್ರದಲ್ಲಿ ಪ್ರಧಾನಿ ಮೋದಿ ಅವರ ಮುಂದೆ ಒಟ್ಟು ಏಳು ಬೇಡಿಕೆಗಳನ್ನು ಮಂಡಿಸಿದ್ದಾರೆ.

    ರಾಹುಲ್ ಗಾಂಧಿಯ ಬೇಡಿಕೆಗಳು:
    1) ಲಸಿಕೆ ತಯಾರಕರಿಗೆ ಉತ್ಪಾದನೆಯನ್ನು ಹೆಚ್ಚಿಸಲು ಆರ್ಥಿಕ ಬೆಂಬಲ ಒದಗಿಸುವುದು,
    2) ಕೋವಿಡ್ -19 ಲಸಿಕೆಗಳ ರಫ್ತು ನಿಲ್ಲಿಸುವುದು,
    3) ಇತರ ವ್ಯಾಕ್ಸಿನ್ ಕ್ಯಾಂಡಿಡೇಟ್​ಗಳಿಗೆ ತ್ವರಿತಗತಿಯ ಅನುಮೋದನೆ ನೀಡುವುದು,
    4) ಸಾರ್ವತ್ರಿಕ ವ್ಯಾಕ್ಸಿನೇಷನ್
    5) ಲಸಿಕೆ ಸಂಗ್ರಹಕ್ಕಾಗಿ ಕೇಂದ್ರದ ಬಜೆಟ್​ ಹಂಚಿಕೆಯನ್ನು ದ್ವಿಗುಣಗೊಳಿಸುವುದು,
    6) ಲಸಿಕೆ ಸಂಗ್ರಹಿಸುವಲ್ಲಿ ಮತ್ತು ವಿತರಿಸುವಲ್ಲಿ ರಾಜ್ಯಗಳಿಗೆ ಹೆಚ್ಚಿನ ಪಾತ್ರ ನೀಡುವುದು, ಮತ್ತು
    7) ಕರೋನವೈರಸ್ ಸಾಂಕ್ರಾಮಿಕದಿಂದ ಪೀಡಿತರಾದ ಸಮಾಜದ ದುರ್ಬಲ ವರ್ಗಗಳಿಗೆ ಆದಾಯ ಬೆಂಬಲ ನೀಡುವುದು.

    ಇದನ್ನೂ ಓದಿ: ಕರೊನಾ ಪರೀಕ್ಷೆಗೆ 200 ರೂ. ಪಡೆದ ಸರ್ಕಾರಿ ಆಸ್ಪತ್ರೆ ಡಾಕ್ಟರ್​; ಕೋಣನಕುಂಟೆ ಪಿಎಚ್‌ಸಿಯಲ್ಲಿ ಭ್ರಷ್ಟಾಚಾರ

    “ಹಲವು ರಾಜ್ಯ ಸರ್ಕಾರಗಳು ಮತ್ತೆ ಮತ್ತೆ ಲಸಿಕೆಯ ಅಭಾವದ ಬಗ್ಗೆ ಗಮನ ಸೆಳೆಯುತ್ತಿವೆ. ಆದರೆ ಅವರ ದೂರುಗಳಿಗೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತೀವ್ರವಾದ ಹೇಳಿಕೆಗಳನ್ನು ನೀಡಿ ಪ್ರತಿಕ್ರಿಯಿಸುತ್ತಿದ್ದಾರೆ. ವಿರೋಧ ಪಕ್ಷದ ಆಡಳಿತ ಇರುವ ರಾಜ್ಯಗಳನ್ನು ಗುರಿಯಾಗಿಸಿಕೊಂಡು ಈ ರೀತಿ ಮಾಡಲಾಗುತ್ತಿದೆ” ಎಂದು ರಾಹುಲ್ ಗಾಂಧಿ ಬರೆದಿದ್ದಾರೆ. (ಏಜೆನ್ಸೀಸ್)

    ಕರೊನಾ ಚಿಕಿತ್ಸೆಯಲ್ಲಿ ಬಳಸುವ ರೆಮ್​ಡೆಸಿವಿರ್ ಕಳ್ಳ ಮಾರುಕಟ್ಟೆಗೆ

    ದೇಶದಲ್ಲಿ ಶೀಘ್ರವೇ ‘ಕರೊನಾ ಕರ್ಫ್ಯೂ’!?; ಸೋಂಕು ತಡೆಗೆ ಮುಂದಾದ್ರು ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts