More

    ಅಭಿವೃದ್ಧಿಗೆ ಕಲ್ಲು ಹಾಕಿದ ಜಲ್ಲಿ

    ಹುಬ್ಬಳ್ಳಿ: ಶಿವಮೊಗ್ಗದ ಹುಣಸೋಡು ಸ್ಪೋಟದ ನಂತರ ಕಲ್ಲು ಗಣಿಗಾರಿಕೆಗೆ ಬಿದ್ದಿರುವ ಬ್ರೇಕ್​ನಿಂದಾಗಿ ಧಾರವಾಡ ಜಿಲ್ಲೆಯಲ್ಲಿಯೂ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ.

    ಲೋಕೋಪಯೋಗಿ ಇಲಾಖೆ ವಿವಿಧೆಡೆ ನಡೆಸುತ್ತಿರುವ ಸಿಮೆಂಟ್ ರಸ್ತೆ ನಿರ್ವಣ, ವಿಜಯಪುರ- ಹುಬ್ಬಳ್ಳಿ- ಗದಗ- ಬೆಂಗಳೂರು- ಕಾರವಾರ ಹೆದ್ದಾರಿ ಸಂರ್ಪಸುವ ಅರ್ಧ ವರ್ತಳ ರಸ್ತೆ ಸೇರಿ ಎಲ್ಲ ಕಾಮಗಾರಿಗಳು ಕಳೆದ ಒಂದು ವಾರದಿಂದ ಸಂಪೂರ್ಣ ತಟಸ್ಥಗೊಂಡಿದೆ.

    ಹುಬ್ಬಳ್ಳಿಯ ವಿವಿಧೆಡೆ ನಡೆ ಯುತ್ತಿರುವ ಸ್ಮಾರ್ಟ್​ಸಿಟಿ ಯೋಜನೆಗಳ ಮೇಲೆಯೂ ಇದು ಪರಿಣಾಮ ಬೀರಿದೆ. ಅಷ್ಟೇ ಅಲ್ಲ, ಮನೆ ಹಾಗೂ ಇತರ ಖಾಸಗಿ ಕಟ್ಟಡಗಳ ನಿರ್ಮಾಣ ಕಾಮಗಾರಿಯೂ ಬಂದ್ ಆಗಿದೆ.

    ರಸ್ತೆ, ಕಟ್ಟಡ ನಿರ್ಮಾಣ ಸೇರಿ ವಿವಿಧ ಕಾಮಗಾರಿಗಳಿಗೆ ಅಗತ್ಯವಿರುವ ಜಲ್ಲಿಕಲ್ಲು ಕಳೆದ 10-15 ದಿನಗಳಿಂದ ಸಿಗುತ್ತಿಲ್ಲ. ಹೀಗಾಗಿ ಕಾಮಗಾರಿಗಳ ವೇಗಕ್ಕೆ ಬ್ರೇಕ್ ಬಿದ್ದಿದೆ.

    ಈ ಮಧ್ಯೆ ಸ್ಮಾರ್ಟ್​ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳಿಗೆ ಸ್ವಲ್ಪ ಮಟ್ಟಿನ ಜಲ್ಲಿಕಲ್ಲು ಸ್ಥಳೀಯವಾಗಿ ಸಿಗುತ್ತಿರುವುದರಿಂದ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಳ್ಳದೆ, ನಿಧಾನ ಗತಿಯಲ್ಲಿ ಸಾಗುತ್ತಿವೆ. ಪರಿಸ್ಥಿತಿ ಇದೇ ರೀತಿ ಮುಂದುವರಿದು, ಮೂರ್ನಾಲ್ಕು ದಿನಗಳಲ್ಲಿ ಜಲ್ಲಿಕಲ್ಲು ಸಿಗದೇ ಹೋದಲ್ಲಿ ಆ ಕಾಮಗಾರಿಗಳೂ ಸಂಪೂರ್ಣ ತಟಸ್ಥಗೊಳ್ಳುವುದರಲ್ಲಿ ಎರಡು ಮಾತಿಲ್ಲ.

    ಸ್ಮಾರ್ಟ್​ಸಿಟಿ ಯೋಜನೆಯಡಿ ಗೋಕುಲ ರಸ್ತೆ, ಸ್ಟೇಶನ್ ರಸ್ತೆ, ರೇಣುಕಾ ನಗರ ಸೇರಿ ವಿವಿಧೆಡೆಯ ರಸ್ತೆ ನಿರ್ವಣ, ನೆಹರು ಮೈದಾನದಲ್ಲಿ ನಡೆದಿರುವ ಕಾಮಗಾರಿ, ಚಿಟಗುಪ್ಪಿ ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣ ಸೇರಿದಂತೆ ಹಲವಾರು ಕಾಮಗಾರಿಗಳು ನಿಧಾನ ಗತಿಯಲ್ಲಿ ಸಾಗಿವೆ.

    ಸ್ಮಾರ್ಟ್​ಸಿಟಿ ಯೋಜನೆಯ ಕಾಮಗಾರಿಗಳಿಗಾಗಿ ಧಾರವಾಡ ಜಿಲ್ಲೆಯ ಅಂಚಟಗೇರಿ, ಮಿಶ್ರಿಕೋಟಿ, ಕಲಘಟಗಿ ಹಾಗೂ ಇತರ ಪ್ರದೇಶಗಳಲ್ಲಿರುವ ಕ್ವಾರಿಗಳಿಂದ ಜಲ್ಲಿಕಲ್ಲು ಖರೀದಿಸಲಾಗುತ್ತಿತ್ತು. ಆದರೆ, ಕಳೆದ ಕೆಲ ದಿನಗಳಿಂದ ಅಗತ್ಯವಿರುವಷ್ಟು ಜಲ್ಲಿಕಲ್ಲು ಪೂರೈಕೆಯಾಗುತ್ತಿಲ್ಲ.

    ಒಂದೊಂದು ಕಾಮಗಾರಿಗೆ ನಿತ್ಯ 30 ರಿಂದ 50 ಕ್ಯೂಬಿಕ್ ಮೀಟರ್ ಜಲ್ಲಿಕಲ್ಲುಗಳ ಅಗತ್ಯವಿದೆ. ಆದರೆ, ಅಗತ್ಯ ಇರುವುದಕ್ಕಿಂತ ಶೇ. 60ರಷ್ಟು ಜಲ್ಲಿಕಲ್ಲು ಕಡಿಮೆ ಸಿಗುತ್ತಿದೆ. ಇದರ ಪರಿಣಾಮ ಕಾಮಗಾರಿಗಳು ಪೂರ್ಣಗೊಳ್ಳಲು ನಿಗದಿತ ಅವಧಿಗಿಂತ ಹೆಚ್ಚಿನ ಸಮಯ ತಗಲುವುದು ಖಚಿತ.

    ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸಮರ್ಪಕ ಜಲ್ಲಿಕಲ್ಲು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದರಲ್ಲಿ ಅನುಮಾನವೇ ಇಲ್ಲ.

    ಜಲ್ಲಿಕಲ್ಲು ಪೂರೈಕೆ ಆಗದ ಕಾರಣ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ನಿಧಾನವಾಗಿ ನಡೆಯುತ್ತಿವೆ. ಈ ಅವಧಿಯಲ್ಲಿ ಕಾರ್ವಿುಕರು ಬಾರ್ ಬೆಂಡಿಂಗ್​ನಂತಹ ಬೇರೆ ಕೆಲಸಗಳಲ್ಲಿ ತೊಡಗಿದ್ದಾರೆ. ಸಂಬಂಧಿಸಿದವರು ತಕ್ಷಣ ಅಗತ್ಯ ಜಲ್ಲಿಕಲ್ಲು ಪೂರೈಕೆಗೆ ಕ್ರಮ ತೆಗೆದುಕೊಂಡರೆ, ಕೆಲಸಗಳು ವೇಗ ಪಡೆದುಕೊಳ್ಳುತ್ತವೆ.

    | ಎಸ್.ಎಚ್. ನರೇಗಲ್ಲ

    ವಿಶೇಷ ಅಧಿಕಾರಿ, ಹು-ಧಾ ಸ್ಮಾರ್ಟ್​ಸಿಟಿ ಕಂಪನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts