More

    62 ವರ್ಷಗಳ ಹಿಂದೆ ಕಳವಾಗಿದ್ದ ನಟರಾಜ ಮೂರ್ತಿ ನ್ಯೂಯಾರ್ಕ್​ನಲ್ಲಿ ಪತ್ತೆ!

    ಚೆನ್ನೈ: ತಮಿಳುನಾಡಿನ ದೇವಸ್ಥಾನವೊಂದರಿಂದ 62 ವರ್ಷಗಳ ಹಿಂದೆ ಕಳವು ಮಾಡಲಾಗಿದ್ದ ನಟರಾಜ ಮೂರ್ತಿ ಇದೀಗ ನ್ಯೂಯಾರ್ಕ್​​ನಲ್ಲಿ ಇರುವುದು ಪತ್ತೆಯಾಗಿದೆ. ಸಿಐಡಿ ಮೂರ್ತಿ ಘಟಕ ಈ ಮೂರ್ತಿಯ ಇರುವನ್ನು ಪತ್ತೆ ಮಾಡಿದೆ.

    ತಮಿಳುನಾಡಿನ ತಂಜಾವೂರು ಜಿಲ್ಲೆಯ 2000 ವರ್ಷಗಳ ಹಿಂದಿನ ಅರುಳ್​ಮಿಗು ವೇದಪುರೀಶ್ವರ ದೇವಸ್ಥಾನದಿಂದ 62 ವರ್ಷಗಳ ಹಿಂದೆ ಈ ನಟರಾಜ ಮೂರ್ತಿಯನ್ನು ಕಳವು ಮಾಡಲಾಗಿತ್ತು. ಸೆ. 1ರಂದು ಗ್ರಾಮಸ್ಥರೊಬ್ಬರು ನೀಡಿದ್ದ ದೂರಿನ ಮೇರೆಗೆ ಸಿಐಡಿ ಐಡಲ್ ವಿಂಗ್ ತನಿಖೆ ನಡೆಸಿದಾಗ ದೇವಸ್ಥಾನದಲ್ಲಿ ಸದ್ಯ ಇರುವ ಮೂರ್ತಿ ನಕಲಿ ಎಂಬುದು ತಿಳಿದು ಬಂದಿತ್ತು.

    ಆಗ ಅಸಲಿ ಮೂರ್ತಿ ಕಳವಾಗಿದೆ ಎಂಬುದು ಗಮನಕ್ಕೆ ಬಂದು, ಈ ಕುರಿತು ಪುದುಚೇರಿಯ ಇಂಡೋ-ಫ್ರೆಂಚ್​ ಇನ್​ಸ್ಟಿಟ್ಯೂಟ್​​ನಿಂದ ಮೂರ್ತಿಯ ಮೂಲಚಿತ್ರವನ್ನು ಪಡೆದು ಹೆಚ್ಚಿನ ತನಿಖೆ ನಡೆಸಿದಾಗ ಅಸಲಿ ಮೂರ್ತಿ ನ್ಯೂಯಾರ್ಕ್​ನ ಏಷ್ಯಾ ಸೊಸೈಟಿ ಮ್ಯೂಸಿಯಮ್​​ನಲ್ಲಿ ಇರುವುದು ತಿಳಿದುಬಂದಿತ್ತು.

    ಮ್ಯೂಸಿಯಮ್​ನ ವೆಬ್​ಸೈಟ್​ ಮೂಲಕ ಪರಿಣತರು ಮೂರ್ತಿಯನ್ನು ಪರಿಶೀಲಿಸಿದ್ದು, ಅದು ಅಸಲಿ ಎಂಬುದು ಸ್ಪಷ್ಟಪಡಿಸಿದ್ದಾರೆ. ಯುನೆಸ್ಕೊ ಒಪ್ಪಂದದ ಪ್ರಕಾರ ಆ ಮೂರ್ತಿಯನ್ನು ಮರಳಿ ಅದೇ ದೇವಸ್ಥಾನಕ್ಕೆ ತರುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ದೇವಸ್ಥಾನದಿಂದ ಇತರ ಮೂರ್ತಿಗಳೇನಾದರೂ ಕಳವಾಗಿದೆಯೇ ಎಂಬುದನ್ನು ಕೂಡ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

    18ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ!; ನಷ್ಟದಲ್ಲಿದೆ 50 ವರ್ಷಗಳ ಇತಿಹಾಸವಿರುವ ಕಂಪನಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts