More

    ಟಿ20 ವಿಶ್ವಕಪ್‌ಗೆ ಇಂಗ್ಲೆಂಡ್ ತಂಡ ಪ್ರಕಟ, ಆಲ್ರೌಂಡರ್ ಬೆನ್ ಸ್ಟೋಕ್ಸ್ ಗೈರು

    ಲಂಡನ್: ಮಾನಸಿಕ ಆರೋಗ್ಯಕ್ಕಾಗಿ ಕ್ರಿಕೆಟ್‌ನಿಂದ ಅನಿರ್ದಿಷ್ಟಾವಧಿ ಬಿಡುವು ಪಡೆದಿರುವ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್, ಅಕ್ಟೋಬರ್ 17ರಿಂದ ನಡೆಯಲಿರುವ ಟಿ20 ವಿಶ್ವಕಪ್‌ನಿಂದಲೂ ಹೊರಗುಳಿದಿದ್ದಾರೆ. ಸ್ಟೋಕ್ಸ್ ಈಗಾಗಲೆ ಭಾರತ ವಿರುದ್ಧದ ಟೆಸ್ಟ್ ಸರಣಿ ಮತ್ತು ಐಪಿಎಲ್‌ನಿಂದಲೂ ದೂರ ಉಳಿದಿದ್ದಾರೆ.

    ಗುರುವಾರ ಪ್ರಕಟಗೊಂಡಿರುವ ಇಂಗ್ಲೆಂಡ್ ಟಿ20 ತಂಡದಲ್ಲಿ ‘ದಿ ಹಂಡ್ರೆಡ್’ ಕ್ರಿಕೆಟ್ ಟೂರ್ನಿಯಲ್ಲಿ ಮಿಂಚಿದ್ದ ವೇಗಿ ಟೈಮಲ್ ಮಿಲ್ಸ್ ಮತ್ತು ಎಡಗೈ ವೇಗಿ ಡೇವಿಡ್ ವಿಲ್ಲಿ ಸ್ಥಾನ ಪಡೆದಿದ್ದಾರೆ. ಮಿಲ್ಸ್ 2017ರಲ್ಲಿ ಕೊನೆಯದಾಗಿ ಇಂಗ್ಲೆಂಡ್ ಪರ ಟಿ20 ಪಂದ್ಯವಾಡಿದ್ದರು. ಮೊಣಕೈ ಶಸಚಿಕಿತ್ಸೆಯಿಂದಾಗಿ 1 ವರ್ಷ ವಿಶ್ರಾಂತಿ ಪಡೆಯಲಿರುವ ವೇಗಿ ಜೋಫ್ರಾ ಆರ್ಚರ್ ಕೂಡ ತಂಡದಲ್ಲಿಲ್ಲ. ಸ್ಪಿನ್ ಬೌಲಿಂಗ್ ಆಲ್ರೌಂಡರ್ ಮೊಯಿನ್ ಅಲಿ ಹೊರತಾಗಿ ಆದಿಲ್ ರಶೀದ್ ತಂಡದಲ್ಲಿರುವ ಏಕೈಕ ತಜ್ಞ ಸ್ಪಿನ್ನರ್ ಆಗಿದ್ದಾರೆ. ವೇಗಿ ಸಾದಿಕ್ ಮೊಹಮದ್ ಸ್ಥಾನ ಗಳಿಸಲು ವಿಲರಾಗಿದ್ದಾರೆ.

    2019ರ ಏಕದಿನ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್, ಏಕದಿನ-ಟಿ20 ಎರಡರಲ್ಲೂ ಏಕಕಾಲದಲ್ಲಿ ವಿಶ್ವ ಚಾಂಪಿಯನ್ ಆದ ಮೊದಲ ತಂಡವೆನಿಸುವ ಅವಕಾಶ ಹೊಂದಿದೆ.

    ಇಂಗ್ಲೆಂಡ್ ತಂಡ: ಇವೊಯಿನ್ ಮಾರ್ಗನ್ (ನಾಯಕ), ಮೊಯಿನ್ ಅಲಿ, ಜಾನಿ ಬೇರ್‌ಸ್ಟೋ, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಸ್ಯಾಮ್ ಕರ‌್ರನ್, ಕ್ರಿಸ್ ಜೋರ್ಡನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಟೈಮಲ್ ಮಿಲ್ಸ್, ಆದಿಲ್ ರಶೀದ್, ಜೇಸನ್ ರಾಯ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್.

    ಮೀಸಲು ಆಟಗಾರರು: ಟಾಮ್ ಕರ‌್ರನ್, ಲಿಯಾಮ್ ಡಾಸನ್, ಜೇಮ್ಸ್ ವಿನ್ಸ್.

    ಟಿ20 ವಿಶ್ವಕಪ್ ತಂಡಕ್ಕೆ ಮೆಂಟರ್ ಆದ ಬೆನ್ನಲ್ಲೇ ಧೋನಿಗೆ ಸ್ವಹಿತಾಸಕ್ತಿ ಸಂಕಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts