More

    ಡ್ಯೂಟಿ ಮುಗಿಸಿ ರಾತ್ರಿ ಬಂದವ ಮಗಳ ಬಾಯಿಗೆ ಬಟ್ಟೆ ತುರುಕುತ್ತಿದ್ದ.. ಕೈಕಾಲು ಕಟ್ಟಿ ಹೊಡೆಯುತ್ತಿದ್ದ…

    ಹಳಿಯಾಳ: ರಾತ್ರಿ ಡ್ಯೂಟಿ ಮುಗಿಸಿ ಮನೆಗೆ ಬರುತ್ತಿದ್ದ ಅಪ್ಪ ನಮ್ಮನ್ನು ಹೊಡೆಯುತ್ತಿದ್ದ. ನೋವು ತಡೆಯಲಾಗದೆ ಅಕ್ಕ ಜೋರಾಗಿ ಅಳುತ್ತಿದ್ದಳು. ಅಳುವುದು ಅಕ್ಕಪಕ್ಕದವರಿಗೆ ಕೇಳಿಸದಿರಲು ಅವಳ ಬಾಯಿಗೆ ಬಟ್ಟೆ ತುರುಕಿ, ಕೈ ಕಾಲು ಕಟ್ಟಿ ಹಾಕಿ ಹೊಡೆಯುತ್ತಿದ್ದ. ಅಕ್ಕನಿಗೆ ಹೊಡೆದಿದ್ದನ್ನು ಯಾರಿಗೂ ಹೇಳಬಾರದೆಂದು ಗದರಿಸಿ ನನಗೂ ಹೊಡೆಯುತ್ತಿದ್ದ, ರಾತ್ರಿ ಮನೆಯಿಂದ ಹೊರ ಹಾಕುತ್ತಿದ್ದ, ಮನೆಯ ಟೆರೇಸ್​ ಅಥವಾ ವರಾಂಡದಲ್ಲೇ ರಾತ್ರಿ ಕಳೆಯುತ್ತಿದ್ದೆವು. ಮನೆ ಬಿಟ್ಟು ಹೋಗುವಂತೆ ಹಿಂಸಿಸುತ್ತಿದ್ದ… ಎಂದು ಸಹೋದರ ಹೇಳುತ್ತಿದ್ದಂತೆ ಅಕ್ಕ-ತಮ್ಮ ಇಬ್ಬರೂ ಕಣ್ಣೀರು ಸುರಿಸಿದರು.

    ಇದು ತಂದೆಯಿಂದಲೇ ನಿತ್ಯ ನರಕಯಾತನೆ ಅನುಭವಿಸುತ್ತಿದ್ದ 15 ವರ್ಷದ ಬಾಲಕಿ ಮತ್ತು 14 ವರ್ಷದ ಬಾಲಕನ ಬದುಕಿನ ಕಥೆ. ಮಕ್ಕಳು ಅಭವಿಸುತ್ತಿದ್ದ ಈ ಚಿತ್ರಹಿಂಸೆ ಬಗ್ಗೆ ಕೇಳಿದ ಅಧಿಕಾರಿ ಹಾಗೂ ಸಿಬ್ಬಂದಿಯೇ ಬೆಚ್ಚಿಬಿದ್ದಿದ್ದಾರೆ. ಇದನ್ನೂ ಓದಿರಿ ಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?

    ಇವರು ಸಾರಿಗೆ ಸಂಸ್ಥೆಯ ದಾಂಡೇಲಿ ಡಿಪೋದ ನೌಕರ ಸತೀಶ ಜಾಧವ ಅವರ ಮಕ್ಕಳು. ಸತೀಶಗೆ ಎರಡನೇ ಮದುವೆಯಾಗಿದ್ದು, ಮೊದಲ ಹೆಂಡತಿಯ ಇಬ್ಬರು ಮಕ್ಕಳೊಂದಿಗೆ ಆತ ವಾಸವಾಗಿದ್ದ. ಮಕ್ಕಳಿಗೆ ನಿತ್ಯ ರಾತ್ರಿ ಚಿತ್ರಹಿಂಸೆ ನೀಡುತ್ತಿದ್ದ. ಮಕ್ಕಳ ಆಕ್ರಂದನ ಕೇಳಿ ರೋಸಿ ಹೋದ ಬಡಾವಣೆಯಲ್ಲಿನ ಸಾಮಾಜಿಕ ಸೇವಾ ಕಾರ್ಯಕರ್ತರೊಬ್ಬರು ಸಿಡಿಪಿಒ ಅವರ ಗಮನಕ್ಕೆ ತಂದಿದ್ದರು. ಸಿಡಿಪಿಒ ಇಲಾಖೆಯ ಸಿಬ್ಬಂದಿ ಬುಧವಾರ ಬಡಾವಣೆಗೆ ಭೇಟಿ ನೀಡಿ ಮಕ್ಕಳನ್ನು ಕಚೇರಿಗೆ ಕರೆತಂದು ವಿಚಾರಣೆ ನಡೆಸಿದರು.

    ರಾತ್ರಿ ಡ್ಯೂಟಿ ಮುಗಿಸಿ ಮನೆಗೆ ಬರುತ್ತಿದ್ದ ತಂದೆ ಮಲತಾಯಿಯ ಮಾತು ಕೇಳಿ ಚಿತ್ರಹಿಂಸೆ ಕೊಡುತ್ತಿದ್ದ ಬಗ್ಗೆ ಮಕ್ಕಳು ಅಧಿಕಾರಿಗಳ ಬಳಿ ಬಿಚ್ಚಿಟ್ಟರು. ತಂದೆಯ ಹೊಡೆತದಿಂದ ಶರೀರಕ್ಕೆ ಆದ ಗಾಯಗಳನ್ನೂ ತೋರಿಸಿದರು.

    ಮಲತಾಯಿ ಕೂಡ ಸರಿಯಾಗಿ ಊಟ ಕೊಡುತ್ತಿರಲಿಲ್ಲ. ಅವಳೂ ಹೊಡೆಯುತ್ತಿದ್ದಳು, ಅವಳು ಹೆರಿಗೆಗಾಗಿ ಈಗ ತವರಿಗೆ ಹೋಗಿದ್ದಾಳೆ ಎಂದು ಮಕ್ಕಳು ಹೇಳಿದರು. ಇದನ್ನೂ ಓದಿರಿ ನಿನ್ ಹೆಂಡ್ತಿಗೆ ಸೀರೆ ತರಲು ಹೋಗಿದ್ಯಾ? ರಾಸ್ಕಲ್​…: ಅಧಿಕಾರಿಗಳ ವಿರುದ್ಧ ನಾಲಿಗೆ ಹರಿಯಬಿಟ್ಟ ಮಾಧುಸ್ವಾಮಿ

    ಮಕ್ಕಳ ಕಲ್ಯಾಣ ಸಮಿತಿಯು ಈ ಶೋಷಿತ ಮಕ್ಕಳ ಕೌನ್ಸೆಲಿಂಗ್​ ಮಾಡಲಿದ್ದು, ಮಕ್ಕಳ ಪಾಲನೆ ಕಾಯ್ದೆಯಡಿ ಮುಂದಿನ ಕ್ರಮ ಕೈಗೊಳ್ಳಲಿದೆ. ಇಬ್ಬರು ಮಕ್ಕಳನ್ನು ಸಿಡಿಪಿಒ ಇಲಾಖೆ ಅಧಿಕಾರಿಗಳು ಕರೆದುಕೊಂಡು ಹೋದ ಸುದ್ದಿ ಗೊತ್ತಿದ್ದರೂ ಅದನ್ನು ವಿಚಾರಿಸುವ ಗೋಜಿಗೂ ಆ ತಂದೆ ಹೋಗಿಲ್ಲ. ಇಲಾಖೆಗೆ ಕರೆ ಮಾಡಿ ಕೇಳುವ ಸೌಜನ್ಯತೆಯನ್ನೂ ತೋರಿಲ್ಲ.

    ಆಧುನಿಕ ಯುಗದಲ್ಲಿ ಇದೊಂದು ತಲೆ ತಗ್ಗಿಸುವ ಘಟನೆ. ಮಕ್ಕಳ ಬಾಲ್ಯತನಕ್ಕೆ ಅವರ ಹಕ್ಕುಗಳನ್ನು ಕಸಿಯುವಂತಹ ಪ್ರಕರಣಗಳು ಬೇರೆ ಎಲ್ಲಿಯಾದರೂ ನಡೆಯುತ್ತಿದ್ದಲ್ಲಿ ಇಲಾಖೆಯ ಗಮನಕ್ಕೆ ತನ್ನಿ. ಸಂತ್ರಸ್ತ ಮಕ್ಕಳ ರಕ್ಷಣೆಗೆ ಸರ್ಕಾರದಿಂದ ಹಲವು ಯೋಜನೆ ಹಾಗೂ ಕಾಯ್ದೆಗಳಿವೆ
    | ಡಾ.ಲಕ್ಷ್ಮೀದೇವಿ ಎಸ್​. ಸಿಡಿಪಿಒ ಹಳಿಯಾಳ

    ಜೆಡಿಎಸ್​ ತೊರೆಯಲು ಸಾಕಷ್ಟು ಆಫರ್​ ಬಂದಿತ್ತು… ಎನ್ನುತ್ತಲೇ ದೇವೇಗೌಡರಿಗೆ ಮಾಜಿ ಶಾಸಕ ಕೊಟ್ಟ ಎಚ್ಚರಿಕೆ ಏನು?

    ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts