More

    ಡೆಡ್ಲಿ ಕರೊನಾ ಭೀತಿಯ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ, ಕನ್ನಡಿಗ ರಾಹುಲ್​ ಹೇಳಿದ್ದು ಹೀಗೆ…

    ನವದೆಹಲಿ: ಡೆಡ್ಲಿ ಕರೊನಾ ವೈರಸ್​ ಸೋಂಕಿಗೆ ದೇಶದಲ್ಲಿ ಈಗಾಗಲೇ ಎರಡು ಜೀವಗಳು ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 83ಕ್ಕೇರಿದೆ. ಸೋಂಕು ಮತ್ತಷ್ಟು ಹರಡದಿರಲು ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಜನರಿಗೆ ಅರಿವು ಮೂಡಿಸುವ ಪ್ರಯತ್ನಗಳಾಗುತ್ತಿದ್ದು, ಇದಕ್ಕೆ ಕೈಜೋಡಿಸಿರುವ ಟೀಮ್​ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಹಾಗೂ ಕನ್ನಡಿಗ ಕೆ.ಎಲ್​. ರಾಹುಲ್​ ಟ್ವೀಟ್​ ಮೂಲಕ ಜನರಿಗೆ ಧೈರ್ಯ ತುಂಬಿದ್ದಾರೆ.

    ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಬಲವಾಗಿ ಉಳಿದುಕೊಂಡು ಸ್ಪೋಟಗೊಂಡಿರುವ ಕರೊನಾ ವೈರಸ್​ ವಿರುದ್ಧ ಹೋರಾಡಿ. ಸುರಕ್ಷಿತವಾಗಿ ಉಳಿಯಿರಿ, ಜಾಗೃತರಾಗಿರಿ ಮತ್ತು ರೋಗ ಬರದಂತೆ ತಡೆಯುವುದು ಚಿಕಿತ್ಸೆಗಿಂತಲೂ ಉತ್ತಮ ಎಂಬುದನ್ನು ಬಹು ಮುಖ್ಯವಾಗಿ ನೆನಪಿನಲ್ಲಿಡಿ. ಎಲ್ಲರೂ ರಕ್ಷಣೆಯ ಕಡೆಗೆ ಗಮನಕೊಂಡಿ ಎಂದು ವಿರಾಟ್​ ಮನವಿ ಮಾಡಿದ್ದಾರೆ.

    ಕೊಹ್ಲಿ ಟೀಮ್​ ಮೇಟ್​ ಕನ್ನಡಿಗ ಕೆ.ಎಲ್​. ರಾಹುಲ್​ ಕೂಡ ಕರೊನಾ ಭೀತಿ ಬಗ್ಗೆ ಟ್ವೀಟ್​ ಮಾಡಿದ್ದಾರೆ. ಸೋಂಕಿನ ಪರೀಕ್ಷಾ ಸಮಯದಲ್ಲಿ ಎಲ್ಲರೂ ಬಲವಾಗಿ ಉಳಿದುಕೊಂಡು ಒಬ್ಬರಿಗೊಬ್ಬರು ರಕ್ಷಣೆ ಮಾಡಿಕೊಳ್ಳಿ. ಆರೋಗ್ಯ ಪರಿಣಿತರು ನೀಡುವ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸಿ ಮತ್ತು ಕರೊನಾ ವೈರಸ್​ನಿಂದ ಸುರಕ್ಷಿತವಾಗಿರಿ ಎಂದು ಹೇಳಿದ್ದಾರೆ.

    ದೇಶದೆಲ್ಲೆಡೆ ಆವರಿಸಿರುವ ಕರೊನಾ ಭೀತಿ ಕ್ರಿಕೆಟ್​ ಮೇಲೂ ಬೀರಿದ್ದು, ಇದರ ಪರಿಣಾಮವಾಗಿ ದಕ್ಷಿಣಾ ಆಫ್ರಿಕಾ ವಿರುದ್ಧ ಏಕದಿನ ಸರಣಿ ರದ್ದಾಗಿದ್ದಲ್ಲದೆ, ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಐಪಿಎಲ್​ ಏಪ್ರಿಲ್ 15ಕ್ಕೆ ಮುಂದೂಡಲಾಗಿದೆ.

    ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಹೀಗಾಗಿ ಪಂದ್ಯಗಳನ್ನು ಮುಂದೂಡಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್​​ ಗಂಗೂಲಿ ಶುಕ್ರವಾರ ತಿಳಿಸಿದ್ದಾರೆ. (ಏಜೆನ್ಸೀಸ್​)

    ವೀಕ್ಷಕ ವಿವರಣೆಗಾರ ಸಮಿತಿಯಿಂದ ಟೀಮ್​ ಇಂಡಿಯಾ ಮಾಜಿ ಆಟಗಾರ ಸಂಜಯ್​ ಮಂಜ್ರೇಕರ್​ ಔಟ್​!

    ಕ್ರಿಕೆಟ್​ ಪ್ರೇಮಿಗಳೇ ಗಮನಿಸಿ; ಮಾರ್ಚ್​ 29ರಂದು ಐಪಿಎಲ್​ ನಡೆಯಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts