More

    ನಿಲ್ದಾಣಗಳಿಗೆ ಮಹಾತ್ಮರ ಹೆಸರಿಡಲು ಆಗ್ರಹ

    ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮ, ರೈಲು ನಿಲ್ದಾಣಕ್ಕೆ ಬೆಳವಡಿ ಮಲ್ಲಮ್ಮ ಹಾಗೂ ಬಸ್ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರಿಡಬೇಕು ಎಂದು ಆಗ್ರಹಿಸಿ, ಬೆಳಗಾವಿಯ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಬುಧವಾರ ಡಿಸಿ ಎಂ.ಜಿ. ಹಿರೇಮಠ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

    ಐದಾರು ವರ್ಷಗಳಿಂದ ಈ ಬೇಡಿಕೆ ನನೆಗುದಿಗೆ ಬಿದ್ದಿದ್ದು, ಕೂಡಲೇ ನಾಮಕರಣ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದು ಪದಾಧಿಕಾರಿಗಳು ಆಗ್ರಹಿಸಿದರು. ಬೆಳಗಾವಿಯ ಕೋಟೆ ಕೆರೆಯ ಮಧ್ಯ ಭಾಗದಲ್ಲಿ ರಾಮಾಯಣ ಬರೆದ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆ ಪ್ರತಿಷ್ಠಾಪಿಸುವಂತೆ ಹಾಗೂ ಬೆಳಗಾವಿಯ ಪ್ರಮುಖ ಬೀದಿಯೊಂದಕ್ಕೆ ವೀರ ಸಿಂಧೂರ ಲಕ್ಷ್ಮಣ ಅವರ ಹೆಸರು ಇಡಬೇಕೆಂದು ಸಹ ಪದಾಧಿಕಾರಿಗಳು ಮನವಿ ಮೂಲಕ ಒತ್ತಾಯಿಸಿದರು.

    ಕನ್ನಡಪರ ಹೋರಾಟಗಾರರಾದ ಅಶೋಕ ಚಂದರಗಿ, ದೀಪಕ ಗುಡಗನಟ್ಟಿ, ಸುರೇಶ ಗವಣ್ಣವರ, ಗಣೇಶ ರೋಖಡೆ, ರಾಜು ಕೋಲಾ, ಅಭಿಲಾಷ, ಬಾಳು ಜಡಗಿ, ಸಾಗರ ಬೋರಗಲ್ಲ, ವೀರೇಂದ್ರ ಗೋಬರಿ, ಕಿರಣ ಅನಗೋಳ, ನಿತಿನ್ ಮುಖರಿ, ಬೆಳವಾಡಿ ಗ್ರಾಮದ ಹಿರಿಯರು, ವಕೀಲ ಸಿದ್ಧಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts