More

    ಪಿಜಿ ಅಡ್ಮಿಷನ್​ನಲ್ಲಿ ಕೋಟಾ ನಿರ್ಧರಿಸುವ ಅಧಿಕಾರ ರಾಜ್ಯಗಳದ್ದು: ಸುಪ್ರೀಂ ಕೋರ್ಟ್​

    ನವದೆಹಲಿ: ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಡಾಕ್ಟರ್​ಗಳಿಗೆ ಪಿಜಿ ಅಡ್ಮಿಷನ್​ನಲ್ಲಿ ಕೋಟಾ ನಿರ್ಧರಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳದ್ದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ.

    ನ್ಯಾಯಮೂರ್ತಿ ಅರುರ್ಣ ಮಿಶ್ರಾ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠ ಈ ತೀರ್ಪು ನೀಡಿದೆ. ಮೀಸಲಾತಿಯಲ್ಲಿ ಬದಲಾವಣೆ ಮಾಡುವ ಶಾಸನಾತ್ಮಕ ಅಧಿಕಾರ ಇರುವಂಥದ್ದು ರಾಜ್ಯಗಳಿಗೆ. ಅವುಗಳು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು ಎಂದು ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.

    ಇದನ್ನೂ ಓದಿ: ನ್ಯಾಯಾಂಗ ನಿಂದನೆ ಕೇಸ್ – ಪ್ರಶಾಂತ್ ಭೂಷಣ್​ಗೆ 1 ರೂಪಾಯಿ ದಂಡ

    ಮೆಡಿಕಲ್ ಕೌನ್ಸಿಲ್​ ಆಫ್ ಇಂಡಿಯಾ ಶಾಸನಬದ್ಧ ಸಂಸ್ಥೆಯೇ ಹೊರತು, ಅದಕ್ಕೆ ಮೀಸಲಾತಿ ನೀಡುವ ಅಧಿಕಾರವಿಲ್ಲ. ಮೆಡಿಕಲ್ ಕೌನ್ಸಿಲ್​ ಆಫ್ ಇಂಡಿಯಾ ಪ್ರಕಟಿಸಿರುವ ಮೀಸಲು ನಿಯಮ ಅಸಾಂವಿಧಾನಿಕ ಎಂದು ಹೇಳಿದ ನ್ಯಾಯಪೀಠ ಆ ನಿಯಮವನ್ನು ಅನೂರ್ಜಿತಗೊಳಿಸಿದೆ.

    ಇದನ್ನೂ ಓದಿ: ಕರೊನಾ ಹೆಚ್ಚಳಕ್ಕೆ ಗಂಟೆ ಬಾರಿಸಿ, ಚಪ್ಪಾಳೆ ತಟ್ಟಿದ್ದೇ ಕಾರಣ ಎಂದ ದಿನೇಶ್‌ ಗುಂಡೂರಾವ್‌: ಕಮೆಂಟಿಗರು ಕಿಡಿಕಿಡಿ…

    ತಮಿಳುನಾಡು ಮೆಡಿಕಲ್ ಆಫೀಸರ್ಸ್​ ಅಸೋಸಿಯೇಷನ್ ಮತ್ತು ಇತರರು ಎಂಸಿಐ ತೀರ್ಮಾನದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ. ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ವಿನೀತ್​ ಶರಣ್​, ಎಂ.ಆರ್.ಶಾ, ಅನಿರುದ್ಧಾ ಬೋಸ್ ಕೂಡ ಇದ್ದರು. (ಏಜೆನ್ಸೀಸ್)

    ಮುಂದ್ರಾ ಡಾಕ್​ಯಾರ್ಡ್​ನಲ್ಲಿದ್ದ ಐಎಸ್​ಐ ಏಜೆಂಟ್​ ಎನ್​ಐಎ ಬಲೆಗೆ ಬಿದ್ದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts