More

    ರಾಜ್ಯಮಟ್ಟದ ಹಿಂದೂ ರಾಷ್ಟ್ರ ಅಧಿವೇಶನ; ನೂರಕ್ಕೂ ಅಧಿಕ ಹಿಂದೂ ಸಂಘಟನೆಗಳು ಭಾಗಿ: ಎಲ್ಲಿ, ಯಾವಾಗ?

    ಬೆಂಗಳೂರು: ಹಿಂದೂ ಜನಜಾಗೃತಿ ಸಮಿತಿಯು ಹಿಂದೂ ರಾಷ್ಟ್ರದ ಜಾಗೃತಿ, ಹಿಂದೂ ಸಂಘಟನೆಗಾಗಿ ಜ. 28 ಮತ್ತು 29 ರಂದು ಬೆಂಗಳೂರಿನ ಬಸವೇಶ್ವರನಗರದ ಗಂಗಮ್ಮ ತಿಮ್ಮಯ್ಯ ಕನ್ವೆನ್ಷನ್​ ಸೆಂಟರ್‌ನಲ್ಲಿ ‘ರಾಜ್ಯಮಟ್ಟದ ಹಿಂದೂ ರಾಷ್ಟ್ರ ಅಧಿವೇಶನ’ ಆಯೋಜಿಸುತ್ತಿದ್ದು, ರಾಜ್ಯಾದ್ಯಂತ ನೂರಕ್ಕೂ ಅಧಿಕ ಹಿಂದೂ ಸಂಘಟನೆಗಳು ಪಾಲ್ಗೊಳ್ಳಲಿವೆ.

    ಅಧಿವೇಶನದಲ್ಲಿ ಲವ್ ಜಿಹಾದ್, ಹಲಾಲ್ ಜಿಹಾದ್, ಲ್ಯಾಂಡ್ ಜಿಹಾದ್, ಹಿಂದೂ ಕಾರ್ಯಕರ್ತರ ಹತ್ಯೆ, ಇತಿಹಾಸದ ವಿಕೃತೀಕರಣ, ಹಿಂದೂ ಧರ್ಮ, ಪರಂಪರೆಗಳ ಮೇಲೆ ಆಘಾತ, ಹಿಂದೂ ದೇವಸ್ಥಾನಗಳ ಸರ್ಕಾರೀಕರಣ, ಗೋರಕ್ಷಣೆ ಮುಂತಾದ ಹಿಂದೂ ಸಮಾಜದ ಮೇಲಾಗುತ್ತಿರುವ ಎಲ್ಲ ರೀತಿಯ ವಿಷಯಗಳ ಕುರಿತು ಚರ್ಚೆ ನಡೆಯಲಿವೆ. ಪ್ರಸ್ತುತ ಹಿಂದೂ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಿಂದೂ ಜಾಗೃತಿ, ಹಿಂದೂ ಸಂಘಟನೆ, ಹಿಂದೂ ಆಂದೋಲನಗಳ ಬಗ್ಗೆ ಕಾರ್ಯ ಯೋಜನೆ ರೂಪಿಸಲಾಗುವುದು ಎಂದು ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕಾರ್ಯಕ್ರಮದಲ್ಲಿ 50ಕ್ಕೂ ಅಧಿಕ ಹಿರಿಯ ವಕೀಲರು, ಉದ್ಯಮಿಗಳು, ಚಿಂತಕರು, ಲೇಖಕರು, ದೇವಾಲಯಗಳ ವಿಶ್ವಸ್ಥರು ಮತ್ತು ಸಮಾನ ಮನಸ್ಕ ಸಾಮಾಜಿಕ, ರಾಷ್ಟ್ರೀಯವಾದಿ ಮತ್ತು ಆಧ್ಯಾತ್ಮಿಕ ಸಂಸ್ಥೆಗಳ 500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವರು. ಭಾಗವಹಿಸಲು ನೋಂದಣಿಗಾಗಿ ಮೊ: 7204082609 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

    ಅಧಿವೇಶನದಲ್ಲಿ ಯುವ ಬ್ರಿಗೇಡ್‌ನ ಚಕ್ರವರ್ತಿ ಸುಲಿಬೆಲೆ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ ಶಿಂದೆ, ಡಾ.ಎಸ್.ಆರ್. ಲೀಲಾ, ಇತಿಹಾಸಕಾರ ಸಂದೀಪ ಬಾಲಕೃಷ್ಣನ್, ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಸಿನಿಮಾ ನಿರ್ದೇಶಕ ಪ್ರಕಾಶ ಬೆಳವಾಡಿ, ವಕೀಲ ಕಿರಣ ಬೆಟ್ಟದಪುರ ಸೇರಿ 30ಕ್ಕೂ ಅಧಿಕ ಗಣ್ಯರು ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ನೀಡಲಿದ್ದಾರೆ ಎಂದರು.
    ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ಎನ್.ಪಿ. ಅಮೃತೇಶ್, ನ್ಯಾಯವಾದಿ ಕೃಷ್ಣ ಸ್ವಾಮಿ, ಹಿಂದವೀ ಜಟ್ಕಾ ಮೀಟ್ ಸಂಸ್ಥಾಪಕ ಮುನೇಗೌಡ ಇದ್ದರು.

    8 ತಿಂಗಳ ಗರ್ಭಿಣಿಗೆ 1 ವಾರವೂ ಸಮಯ ಕೊಡದೆ ಕೆಲಸದಿಂದ ಕಿತ್ತು ಹಾಕಿದ ಗೂಗಲ್!

    ಮನೆಯಲ್ಲಿ ಯಾರೂ ಇಲ್ಲದಾಗ ಕಳ್ಳತನಕ್ಕೆ ಬಂದವರು ಹೆದರಿ ಓಡಿಹೋದ್ರು: ಆಗಿದ್ದಾದರೂ ಏನು?

    1 ನಿಮಿಷಕ್ಕೆ 69 ತೆಂಗಿನಕಾಯಿ ಒಡೆದ ಸಾಹಸಿ; 12,008 ಕಾಯಿಗಳನ್ನು ಒಡೆದು ಬಳಿಕ ಶಿವತಾಂಡವ ನೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts