More

    ಶಿವಮೊಗ್ಗ ಜಿಲ್ಲೆ ವಿಭಜನೆ ಉಹಾಪೋಹ

    ಸಾಗರ: ಶಿವಮೊಗ್ಗ ಜಿಲ್ಲೆ ವಿಭಜನೆ ಮಾಡುವ ಪ್ರಸ್ತಾಪ ರಾಜ್ಯ ಸರ್ಕಾರದ ಬಳಿ ಇಲ್ಲ. ಸಾಗರ ಅಥವಾ ಶಿಕಾರಿಪುರ ಜಿಲ್ಲೆ ರಚನೆ ಚಿಂತನೆಯೇ ಇಲ್ಲ ಎಂದು ಜಿಲ್ಲೆ ವಿಭಜನೆ ಕುರಿತು ಎದ್ದಿರುವ ಊಹಾಪೋಹಗಳಿಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತೆರೆ ಎಳೆದರು.

    ಶನಿವಾರ ಯಲಗಳಲೆಯಲ್ಲಿ ಪೊಲೀಸ್ ತರಬೇತಿ ಕೇಂದ್ರ ಸ್ಥಾಪಿಸಲು ಉದ್ದೇಶಿಸಿರುವ ಪ್ರದೇಶ ಹಾಗೂ ಗಣಪತಿ ಕೆರೆ ಪಕ್ಕದಲ್ಲಿ ನಿರ್ವಿುಸುತ್ತಿರುವ ಬೃಹತ್ ರಾಷ್ಟ್ರಧ್ವಜ ಸ್ತಂಭ ಸ್ಥಳ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆ ಮಾಡಿದರು.

    ಶಿವಮೊಗ್ಗದಂತಹ ಮಲೆನಾಡು ಜಿಲ್ಲೆಗೆ ತನ್ನದೇ ಅಸ್ತಿತ್ವವಿದ್ದು ಮಲೆನಾಡು ಜಿಲ್ಲೆ ಎಂಬ ಹೆಮ್ಮೆ ಇದೆ. ಇದನ್ನು ಇಬ್ಭಾಗ ಮಾಡುವ ಯಾವುದೇ ಪ್ರಸ್ತಾಪ ನಡೆದಿಲ್ಲ. ಇಬ್ಭಾಗಕ್ಕೆ ವೈಯಕ್ತಿಕವಾಗಿ ನನ್ನ ವಿರೋಧವೂ ಇದೆ ಎಂದು ಸ್ಪಷ್ಟಪಡಿಸಿದರು.

    ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರ ಸಾಗರ. ಕೇಂದ್ರ ಮತ್ತು ರಾಜ್ಯ ಸರ್ಕಾರ ಅಭಿವೃದ್ಧಿಗೆ ಒತ್ತು ನೀಡುತ್ತಿವೆ. ಕರ್ನಾಟಕ ಪೊಲೀಸ್ ತರಬೇತಿ ಕೇಂದ್ರ 2ನೇ ಪಡೆಯನ್ನು ತಾಲೂಕಿನ ಯಲಗಳಲೆ ಗ್ರಾಮದ ಸರ್ವೆ ನಂ.105ರ 50 ಎಕರೆ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

    ತಾಲೂಕಿನಲ್ಲಿ ಈ ಕೇಂದ್ರ ಆರಂಭವಾಗಿರುವುದರಿಂದ ಮಂಗಳೂರು ವಿಪತ್ತು ಪಡೆ ಘಟಕ, ಬೇಲಿಕೇರಿ ಘಟಕ, ಹೊನ್ನಾವರ, ತದಡಿ, ಭಟ್ಕಳದ ಬಂದರು, ಶರಾವತಿ ವಿದ್ಯುದಾಗಾರ, ಲಿಂಗನಮಕ್ಕಿ ಅಣೆಕಟ್ಟು, ಕಾಳಿನದಿ ಯೋಜನಾ ಪ್ರದೇಶ, ಚಕ್ರಾ, ಸಾವೆಹಕ್ಲು, ಉಡುಪಿ, ಉತ್ತರ ಕನ್ನಡದ ಸ್ಥಾವರಗಳಿಗೆ ಭದ್ರತೆ ಸಿಗಲಿದೆ. ಈಗಾಗಲೆ ರಾಜ್ಯ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿದ್ದು, ಪೊಲೀಸ್ ಇಲಾಖೆ ಈ ಜಾಗವನ್ನೂ ಒಪ್ಪಿದೆ ಎಂದು ತಿಳಿಸಿದರು.

    ಸಾಗರ ಬಿ.ಎಚ್.ರಸ್ತೆ ಅಭಿವೃದ್ಧಿಗೆ 65 ಕೋಟಿ ರೂ. ಮಂಜೂರು ಮಾಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರ ಅನುದಾನ ಬಿಡುಗಡೆಯಾಗಲಿದೆ ಎಂದರು.

    ಶಾಸಕ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಪ್ರವಾಸೋದ್ಯಮ ಟಾಸ್ಕ್​ಫೋರ್ಸ್​ನ ಲಕ್ಷ್ಮೀನಾರಾಯಣ ಕಾಶಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts