More

    ಸರ್ಕಾರದ ವರ್ಷಾಚರಣೆ ವೀಕ್ಷಣೆ

    ವಿಜಯವಾಣಿ ಸುದ್ದಿಜಾಲ ಹಾವೇರಿ

    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಳಿಸಿದ ಸಂಭ್ರಮಾಚರಣೆಯನ್ನು ವರ್ಚುವಲ್ ವೇದಿಕೆಯ ನೇರಪ್ರಸಾರದ

    ಮೂಲಕ ವೀಕ್ಷಿಸುವ ಹಾಗೂ ಸಾಧನೆಯ ಪುಸ್ತಕ ಬಿಡುಗಡೆ ಸಮಾರಂಭ ವನ್ನು ನಗರದ ಜಿಪಂ ಸಭಾಭವನದಲ್ಲಿ ಸೋಮವಾರ ಜರುಗಿತು.

    ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಅವರು ಒಂದು ವರ್ಷದ ಸಾಧನೆ ಕುರಿತ ಕಿರು ಹೊತ್ತಗೆ, ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ ವಾರ್ತಾ ಜನಪದ, ಮಾರ್ಚ್ ಆಫ್ ಕರ್ನಾಟಕ ಸಂಚಿಕೆಗಳನ್ನು ಬಿಡುಗಡೆಗೊಳಿಸಿದರು.

    ಬೆಂಗಳೂರು ಬ್ಯಾಂಕ್ವೆಟ್ ಹಾಲ್​ನಿಂದ ನೇರ ಪ್ರಸಾರ ಕಾರ್ಯಕ್ರಮ ವೀಕ್ಷಣೆಗಾಗಿ ಜಿಪಂ ಸಭಾಂಗಣದಲ್ಲಿ ಎಲ್​ಇಡಿ ಸ್ಕ್ರೀನ್ ಅಳವಡಿಸಲಾಗಿತ್ತು.

    ಮುಖ್ಯಮಂತ್ರಿಗಳು ರಾಜ್ಯದ ಆಯ್ದ ಜಿಲ್ಲೆಗಳ ಫಲಾನುಭವಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಜಿಲ್ಲೆಯ ರಾಣೆಬೆನ್ನೂರ ಸಾಲಗೇರಿ ಓಣಿಯ ನೆರೆ ಪರಿಹಾರ ವಸತಿ ಫಲಾನುಭವಿ ಜ್ಯೋತಿ ಕನ್ನಜ್ಜ ಅಡ್ಡೇರ ಮಾತನಾಡಿ, ‘ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಮನೆಗಳು ಕುಸಿದು ಬೀದಿ ಪಾಲಾಗಿದ್ದೇವು. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ನಮ್ಮ ಕೈ ಹಿಡಿದಿದೆ. ಸಕಾಲದಲ್ಲಿ ಅಧಿಕಾರಿಗಳು ಸ್ಪಂದಿಸಿ ಸರ್ವೆ ನಡೆಸಿ ಮನೆ ನಿರ್ವಣಕ್ಕೆ 5 ಲಕ್ಷ ರೂ. ಪರಿಹಾರ ಹಣ ದೊರಕಿಸಿಕೊಟ್ಟಿದ್ದಾರೆ. ಇದರಿಂದ ಸಕಾಲದಲ್ಲಿ ಮನೆ ನಿರ್ವಿುಸಿಕೊಳ್ಳಲು ಸಾಧ್ಯವಾಗಿದೆ. ಇದಕ್ಕಾಗಿ ಮುಖ್ಯಮಂತ್ರಿಗಳಾದ ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ‘ಮನೆ ನಿರ್ಮಾಣ ಪೂರ್ಣಗೊಂಡಿ ದೆಯೇ’ ಎಂದು ಕೇಳಿ, ‘ನಿಮಗೆ ಒಳ್ಳೆಯದಾಗಲಿ’ ಎಂದು ಹಾರೈಸಿದರು.

    ಶಾಸಕರಾದ ನೆಹರು ಓಲೇಕಾರ, ಅರುಣಕುಮಾರ ಪೂಜಾರ, ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಎಸ್​ಪಿ ಕೆ.ಜಿ.ದೇವರಾಜ್, ಜಿಪಂ ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿ ಡಾ. ದಿಲೀಪ್ ಶಶಿ, ಜಿಪಂ ಸದಸ್ಯರಾದ ವಿರೂಪಾಕ್ಷಪ್ಪ ಕಡ್ಲಿ, ಸಿದ್ದರಾಜ ಕಲಕೋಟಿ ಹಾಗೂ ವಿವಿಧ ಯೋಜನೆಯ ಫಲಾನುಭವಿಗಳಿದ್ದರು. ಜಿಲ್ಲಾ ವಾರ್ತಾಧಿಕಾರಿ ಡಾ. ಬಿ.ಆರ್. ರಂಗನಾಥ ನಿರ್ವಹಿಸಿದರು.

    ಹಾವೇರಿಗೆ ಸರ್ಕಾರಿ ಬಿಇಡಿ ಕಾಲೇಜ್: ಯಡಿಯೂರಪ್ಪ ಸರ್ಕಾರದ ಒಂದು ವರ್ಷದ ಅವಧಿಯಲ್ಲಿ ಹಾವೇರಿಗೆ ಹಲವು ಯೋಜನೆಗಳು ಮಂಜೂರಾಗಿವೆ. ಈಗಾಗಲೇ ವೈದ್ಯಕೀಯ ಕಾಲೇಜ್ ಕಟ್ಟಡ ಶಂಕುಸ್ಥಾಪನೆಗೆ ಸಿದ್ಧತೆ ನಡೆಸಿದ್ದು, ಸರ್ಕಾರಿ ಬಿಇಡಿ ಕಾಲೇಜ್ ಮಂಜೂರಾತಿಗೂ ಕ್ರಮ ವಹಿಸಿದೆ ಎಂದು ಶಾಸಕ ನೆಹರು ಓಲೇಕಾರ ತಿಳಿಸಿದರು.

    ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಿಪಂ ಸಭಾಭವನದಲ್ಲಿ ವರ್ಚುವಲ್ ವೇದಿಕೆ ಮೂಲಕ ಆಯೋಜಿಸಿದ್ದ ಸರ್ಕಾರದ ಸಾಧನೆಯ ಸಂಭ್ರಮಾಚರಣೆಯ ನೇರ ಪ್ರಸಾರ ಕಾರ್ಯಕ್ರಮದ ನಂತರ ಅವರು ಮಾತನಾಡಿದರು.

    ಜಿಲ್ಲಾ ಆಯುಷ್ ಆಸ್ಪತ್ರೆಗೆ 20 ಬೆಡ್​ಗಳ ಸೌಲಭ್ಯ, ಸರ್ಕಾರಿ ಲಾ ಕಾಲೇಜ್ ಹಾಗೂ ಏಕಲವ್ಯ ಕಾಲೇಜ್​ಗೆ ಮಂಜೂರಾತಿ ದೊರಕಿದೆ. ಈ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಬಿಇಡಿ ಕಾಲೇಜ್ ಮಂಜೂರಾಗುವ ನಿರೀಕ್ಷೆಯಿದೆ. ಈಗಾಗಲೇ ಸಂಬಂಧಿಸಿದ ಪ್ರಕ್ರಿಯೆಗಳು ಪ್ರಗತಿಯಲ್ಲಿದೆ. ಹಾವೇರಿಯ ಹೊರವಲಯದಲ್ಲಿರುವ ಗಾಂಧಿಪುರ ಪದವಿ ಕಾಲೇಜ್​ನಲ್ಲಿ ಬಿಇಡಿ ತರಗತಿಗಳನ್ನು ಪ್ರಾರಂಭಿಸುವ ಚಿಂತನೆ ನಡೆದಿದೆ ಎಂದರು.

    ಎಸ್​ಸಿ, ಎಸ್​ಟಿ ಕಾಲೇಜ್ ಈಗಾಗಲೇ ಮಂಜೂರಾಗಿ ಉದ್ಘಾಟನೆಯಾಗಿದೆ. 25 ಕೋಟಿ ರೂ. ವೆಚ್ಚದಲ್ಲಿ ಕಳ್ಳಿಹಾಳ ಗುಡ್ಡದ ಬಳಿ ಕಾಲೇಜ್ ಪ್ರಾರಂಭಿಸಲು ಭೂಮಿ ಪೂಜೆ ಮಾಡಲಾಗಿದೆ. ಹೊಸರಿತ್ತಿ ಸಮೀಪ ಮುರಾರ್ಜಿ ವಸತಿ ಶಾಲೆ, ಒಂದು ಪದವಿ ಕಾಲೇಜು ಮತ್ತು 8 ಹಾಸ್ಟೆಲ್ ಮಾಡಲು ಜಾಗ ನಿಗದಿಪಡಿಸಲಾಗಿದೆ. ಮುಂದಿನ ಯೋಜನೆಯಲ್ಲಿ ಹಾವೇರಿ ತಾಲೂಕು ಬಸಾಪುರ ಗುಡ್ಡದ ಬಳಿ 60 ಎಕರೆ ಜಮೀನಿನಲ್ಲಿ ಸೈನಿಕ ಶಾಲೆ ತರಲು ಜಾಗವನ್ನು ಕಾಯ್ದಿರಿಸಲಾಗಿದೆ. ಪೊಲೀಸ್ ತರಬೇತಿ ಸೆಂಟರ್ ಪ್ರಾರಂಭಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts