More

    ಕೊಟ್ಟ ಮಾತು ಮರೆತ ರಾಜಾಹುಲಿ

    ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಮಂಡಿಸಿದ ಬಜೆಟ್ನಲ್ಲಿ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿದ್ದು, ಅಭಿವೃದ್ಧಿಗೆ ಹೊಸ ಯೋಜನೆ ಘೋಷಣೆ ನಿರೀಕ್ಷೆಯಲ್ಲಿದ್ದ ಜನರಲ್ಲಿ ನಿರಾಸೆ ಮೂಡಿಸಿದೆ.

    ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆ ಜನರಿಗೆ ಕುಡಿಯುವ ನೀರಿಗಾಗಿ ಸುರಪುರ ತಾಲೂಕಿನ ತಿಂಥಣಿ ಬಳಿ ಬ್ಯಾರೇಜ್ ನಿಮರ್ಾಣಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಲು ತಿಳಿಸಿದ್ದನ್ನು ಬಿಟ್ಟರೆ ಜಿಲ್ಲೆಗೆ ಹೇಳಿಕೊಳ್ಳುವಂಥ ಕೊಡುಗೆ ಸಿಕ್ಕಿಲ್ಲ. ಶೈಕ್ಷಣಿಕ, ನೀರಾವರಿ, ಕೈಗಾರಿಕೆ ಹೀಗೆ ನಾನಾ ಕ್ಷೇತ್ರಗಳಲ್ಲಿ ಹಿಂದುಳಿದ ಯಾದಗಿರಿ ಜಿಲ್ಲೆ ಸಮಗ್ರ ಪ್ರಗತಿಗೆ ಸಿಎಂ ಸ್ಪಂದಿಸಬಹುದು ಎಂಬ ಕನಸು ಹೊತ್ತಿದ್ದ ಜನತೆ ಇದೀಗ ಸಕರ್ಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.

    ಕಳೆದ ವರ್ಷ ಜಿಲ್ಲೆಯ ಕೃಷ್ಣಾ ಮತ್ತು ಭೀಮಾ ನದಿಗಳಿಗೆ ನೆರೆ ಬಂದ ಸಂದರ್ಭದಲ್ಲಿ ಭೇಟಿ ನೀಡಿದ್ದ ಸಿಎಂ ಬಿಎಸ್ವೈ, ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಮುಂದಿನ ಬಜೆಟ್ನಲ್ಲಿ ಸರ್ಕಾರಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡುವುದಾಗಿ ನೀಡಿದ್ದ ಭರವಸೆ ಈಗ ಮರೆತಂತೆ ಕಾಣುತ್ತಿದೆ.

    ಹೊಸ ತಾಲೂಕುಗಳಿಗಿಲ್ಲ ಆದ್ಯತೆ: ಹೊಸ ತಾಲೂಕುಗಳಾದ ಹುಣಸಗಿ, ವಡಗೇರಾ ಹಾಗೂ ಗುರುಮಠಕಲ್ಗಳಲ್ಲಿ ಸಕರ್ಾರಿ ಕಚೇರಿಗಳನ್ನು ಆರಂಭಿಸಲು ಅನುದಾನ ನೀಡಿಕೆ ವಿಷಯ ಪ್ರಸ್ತಾಪಿಸದೆ ಕಡೆಗಣಿಸಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಕಾಲುವೆ ನವೀಕರಣ, ಕೊನೇ ಭಾಗದ ರೈತರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೂ ಬಜೆಟ್ನಲ್ಲಿ ಯಾವುದೇ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಬಿಜೆಪಿಯ ಇಬ್ಬರೂ ಶಾಸಕರು ವಿಫಲರಾದಂತೆ ಕಾಣುತ್ತಿದೆ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, ಯಾವ ಪುರುಷಾರ್ಥಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿದಿದೆ ಎಂದು ಹರಿಹಾಯ್ದಿವೆ.
    ಜಿಲ್ಲೆ ಜನತೆ ಗುಳೆ ಹೋಗುವುದನ್ನು ತಡೆಯಲು ಕೈಗಾರಿಕೆಗಳ ನಿಮರ್ಾಣ, ಗ್ರಾಮೀಣ ಭಾಗದಲ್ಲಿ ಸರ್ಕಾರಿ ಪದವಿಪೂರ್ವ ಹಾಗೂ ಪದವಿ ಕಾಲೇಜು, ಸರ್ಕಾರ ವೃತ್ತಿಪರ ಕಾಲೇಜು ಸ್ಥಾಪನೆ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪವಾಗಿಲ್ಲ. ಒಟ್ಟಾರೆ, ಗಡಿ ಜಿಲ್ಲೆ ಅಭಿವೃದ್ಧಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಕೊಡಲಿ ಪೆಟ್ಟು ನೀಡಿದ್ದು, ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ಜಿಲ್ಲಾಭಿವೃದ್ಧಿ ಕಡೆಗಣಿಸುವುದನ್ನು ಮಾತ್ರ ನಿಂತಿಲ್ಲ ಎಂಬ ಜನರ ಆರೋಪಕ್ಕೆ ಈ ಬಜೆಟ್ ಸಹ ಹೊರತಾಗದಿರುವುದು ದುರಂತ.

    ನನಸಾಗಲಿಲ್ಲ ಶಾಸಕ ಮುದ್ನಾಳ್ ಕನಸು: ನೆರೆ ಸಂದರ್ಭದಲ್ಲಿ ಜಿಲ್ಲೆಯ ಕೃಷ್ಣಾ ಮತ್ತು ಭೀಮಾ ನದಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದ್ದು, ಇದನ್ನರಿತ ಶಾಸಕ ವೆಂಕಟರಡ್ಡಿ ಮುದ್ನಾಳ್ ವಡಗೇರಾ ತಾಲೂಕಿನ ಚನ್ನೂರು (ಜೆ) ಹಾಗೂ ಠಾಣಗುಂದಿ ಬಳಿ ಬ್ಯಾರೇಜ್ ನಿಮರ್ಾಣಕ್ಕಾಗಿ ಬಜೆಟ್ನಲ್ಲಿ ಅನುದಾನ ಮಂಜೂರು ಮಾಡುವಂತೆ ಸಿಎಂ ಬಿಎಸ್ವೈ ಬಳಿ ಮನವಿ ಮಾಡಿದ್ದರು. ಆದರೆ ಶಾಸಕರ ಕೋರಿಕೆಗೆ ಮನ್ನಣೆ ಸಿಕ್ಕಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts