More

    ಕೆಲವು ಗಡಿ ರಸ್ತೆಗಳ ಮಣ್ಣು ತೆರವು

    ಸುಳ್ಯ: ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಗಡಿಯಲ್ಲಿ ಕೆಲವು ರಸ್ತೆಗಳಲ್ಲಿ ಹಾಕಿರುವ ಮಣ್ಣನ್ನು ತೆರವು ಮಾಡಿ ಜನರ ಸಂಚಾರಕ್ಕೆ ಅನುವು ಮಾಡಿಕೊಡಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
    ಶನಿವಾರ ಗಡಿ ಪ್ರದೇಶವಾದ ಪಂಜಿಕಲ್ಲು ಸಮೀಪದ ದೇವರಗುಂಡಕ್ಕೆ ಭೇಟಿ ನೀಡಿದ ಸಚಿವರು, ರಸ್ತೆಯಲ್ಲಿ ಮಣ್ಣು ಹಾಕಿರುವುದನ್ನು ಪರಿಶೀಲಿಸಿದರು.

    ಬೆಳ್ಳಿಪ್ಪಾಡಿ- ದೇಲಂಪಾಡಿ ರಸ್ತೆಯಲ್ಲಿ ದೇವರಗುಂಡ ಎಂಬಲ್ಲಿ ಹಾಕಿರುವ ಮಣ್ಣನ್ನು ಮತ್ತು ಸುಳ್ಯ- ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿ ಆಲೆಟ್ಟಿ ಗ್ರಾಮದ ಬಡ್ಡಡ್ಕ ಸಮೀಪ ಬಾಟೋಳಿಯಲ್ಲಿ ಹಾಕಿರುವ ಮಣ್ಣನ್ನು ತೆರವು ಮಾಡಲು ಸಚಿವರು ಅಧಿಕಾರಿಗಳಿಗೆ ಆದೇಶ ನೀಡಿದರು. ರಸ್ತೆಯಲ್ಲಿ ಹಾಕಿರುವ ಮಣ್ಣು ತೆರವು ಮಾಡಿ ಗಡಿಪ್ರದೇಶದ ಸ್ಥಳೀಯ ಜನರಿಗೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಜತೆಗೆ ಇಲ್ಲಿ ಚೆಕ್‌ಪೋಸ್ಟ್ ಅಳವಡಿಸಿ ಪೊಲೀಸ್ ಕಾವಲು ಏರ್ಪಡಿಸಿ ಪರಿಶೀಲನೆ ಮುಂದುವರಿಸಬೇಕು ಎಂದು ಸೂಚನೆ ನೀಡಿದರು.
    ಜನರ ಬೇಡಿಕೆಯನ್ನು ಮುಂದಿರಿಸಿ ತಾಲೂಕಿನ ಕೆಲವು ಪ್ರಮುಖ ರಸ್ತೆಯ ಮಣ್ಣು ತೆರವು ಮಾಡಿ ಸಂಚಾರಕ್ಕೆ ಮುಕ್ತ ಮಾಡಬೇಕು ಎಂದು ಶಾಸಕ ಎಸ್.ಅಂಗಾರ ಸಚಿವರಲ್ಲಿ ಮನವಿ ಮಾಡಿಕೊಂಡರು.

    ಪುತ್ತೂರು ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಳ್, ತಹಸೀಲ್ದಾರ್ ಅನಂತಶಂಕರ್, ಸುಳ್ಯ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ, ಎಸ್‌ಐ ಎಂ.ಆರ್.ಹರೀಶ್, ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಮಾಜಿ ಜಿಲ್ಲಾಧ್ಯಕ್ಷ ಸುರೇಶ್ ಕಣೆಮರಡ್ಕ, ಜಾಲ್ಸೂರು ಶಕ್ತಿ ಕೇಂದ್ರದ ಅಧ್ಯಕ್ಷ ಜಯರಾಜ್ ಕುಕ್ಕೆಟ್ಟಿ, ನಗರ ಪಂಚಾಯಿತಿ ಸದಸ್ಯ ವಿನಯಕುಮಾರ್ ಕಂದಡ್ಕ, ದೇಲಂಪಾಡಿ ಗ್ರಾಮ ಪಂಚಾಯಿತಿ ಬಿಜೆಪಿ ಅಧ್ಯಕ್ಷ ಪ್ರದೀಪ್‌ಕುಮಾರ್ ಬಳ್ಳಕಾನ, ಪ್ರಧಾನ ಕಾರ್ಯದರ್ಶಿ ದಿಲೀಪ್, ಪ್ರಮುಖರಾದ ಉದಯಕುಮಾರ್ ಆಚಾರ್, ಶಿವಪ್ರಸಾದ್ ಉಗ್ರಾಣಿಮನೆ, ಶಂಕರ್ ಪೇರಾಜೆ, ಡಿ.ಸಿ.ಬಾಲಚಂದ್ರ, ಕೃಷ್ಣಮಣಿಯಾಣಿ ಅಕ್ಕಪ್ಪಾಡಿ, ವಿನುತಾ ಪಾತಿಕಲ್ಲು ಮತ್ತಿತರರು ಉಪಸ್ಥಿತರಿದ್ದರು.

    ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಕಾಸರಗೋಡು ಸಂಪರ್ಕದ ಒಂದೊಂದು ರಸ್ತೆಯನ್ನು ತೆರೆದು ಸಂಚಾರಕ್ಕೆ ಅನುವು ಮಾಡಲು ನಿರ್ಧರಿಸಲಾಗಿದೆ. ಪಂಜಿಕಲ್ಲು ಸಮೀಪದ ಮುರೂರಿನಲ್ಲಿ ಈಗಾಗಲೇ ಮಣ್ಣು ತೆರವು ಮಾಡಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಜತೆಗೆ ಸದ್ಯ ಸುಳ್ಯ- ಕಾಸರಗೋಡು ಸಂಪರ್ಕದ ಹೆಚ್ಚುವರಿ ಎರಡು ರಸ್ತೆಯ ಮಣ್ಣು ತೆರವು ಮಾಡಿ ಸಂಚಾರಕ್ಕೆ ಮುಕ್ತ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಹೆಚ್ಚು ರಸ್ತೆಗಳನ್ನು ಸಂಚಾರಕ್ಕೆ ಮುಕ್ತ ಮಾಡಲಾಗುವುದು.
    ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts