More

    ಐಪಿಎಲ್ ಪಂದ್ಯಗಳು ರಾತ್ರಿ 7.30ಕ್ಕೆ ಆರಂಭವಾಗುವ ಬಗ್ಗೆ ಧೋನಿ ಅಸಮಾಧಾನ!

    ಮುಂಬೈ: ಹಿಂದೆಲ್ಲ ಐಪಿಎಲ್ ಪಂದ್ಯಗಳು ರಾತ್ರಿ 8 ಗಂಟೆಗೆ ಆರಂಭಗೊಳ್ಳುತ್ತಿದ್ದವು. ಆದರೆ ಈಗ ರಾತ್ರಿ 7.30ಕ್ಕೆ ಆರಂಭಗೊಳ್ಳುತ್ತವೆ. ಕಳೆದ ವರ್ಷ ಯುಎಇಯಲ್ಲಿ ಇದೇ ಸಮಯಕ್ಕೆ ಪಂದ್ಯ ಆರಂಭಗೊಂಡಿದ್ದವು. ಆದರೆ ಅಲ್ಲಿನ ಕಾಲಮಾನದ ಪ್ರಕಾರ ಅದು ಸಂಜೆ 6 ಗಂಟೆ ಆಗಿತ್ತು. ಆದರೆ ಈ ಬಾರಿ ಭಾರತದಲ್ಲಿ ಮೊದಲ ಬಾರಿಗೆ ರಾತ್ರಿ 7.30ರಿಂದ ಐಪಿಎಲ್ ಪಂದ್ಯಗಳು ನಡೆಯುತ್ತಿದ್ದು, ಈ ಬಗ್ಗೆ ಚೆನ್ನೈ ಸೂಪರ್‌ಕಿಂಗ್ಸ್ ನಾಯಕ ಎಂಎಸ್ ಧೋನಿ ತಗಾದೆಯೊಂದನ್ನು ತೆಗೆದಿದ್ದಾರೆ. ಧೋನಿ ಪ್ರಕಾರ, ರಾತ್ರಿ 7.30ಕ್ಕೆ ಪಂದ್ಯ ಆರಂಭಗೊಳ್ಳುವುದರಿಂದ ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಕಷ್ಟವಾಗುತ್ತದೆ. ಮೊದಲ ಅರ್ಧ ಗಂಟೆಯ ಆಟಕ್ಕೆ ಇಬ್ಬನಿಯಿಂದ ಯಾವುದೇ ಸಮಸ್ಯೆ ಇರುವುದಿಲ್ಲ. ಇದು ಬೌಲಿಂಗ್ ತಂಡಕ್ಕೆ ಸಹಕಾರಿ. ಈ ಹಿಂದೆ 8 ಗಂಟೆಗೆ ಪಂದ್ಯ ಆರಂಭಗೊಳ್ಳುತ್ತಿದ್ದಾಗ ಉಭಯ ತಂಡಗಳಿಗೂ ಇಬ್ಬನಿ ಸಮಸ್ಯೆ ಒಂದೇ ರೀತಿಯಾಗಿತ್ತು ಎಂಬ ವಾದವನ್ನು ಧೋನಿ ಮಂಡಿಸಿದ್ದಾರೆ.

    ವಾಂಖೆಡೆ ಕ್ರೀಡಾಂಗಣದಲ್ಲಿ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಓವರ್‌ಗಳಲ್ಲಿ ಪಿಚ್ ಬ್ಯಾಟಿಂಗ್‌ಗೆ ಕಠಿಣವಾಗಿತ್ತು. ಬಳಿಕ ಇಬ್ಬನಿ ಶುರುವಾದ ಬಳಿಕ ಬ್ಯಾಟಿಂಗ್ ಸುಲಭವಾಯಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡುವ ತಂಡ 10-15 ಹೆಚ್ಚುವರಿ ರನ್‌ಗಳನ್ನು ಗಳಿಸಬೇಕಾಗುತ್ತದೆ ಎಂದು ಧೋನಿ ಹೇಳಿದರು. ಪವರ್‌ಪ್ಲೇಯ ಮೊದಲ 6 ಓವರ್‌ಗಳಲ್ಲಿ ಸಿಎಸ್‌ಕೆ 2 ವಿಕೆಟ್‌ಗೆ 33 ರನ್ ಗಳಿಸಿ ಪರದಾಡಿತ್ತು. ಟಾಸ್ ಸೋಲು ಕೂಡ ಸಿಎಸ್‌ಕೆಗೆ ಹಿನ್ನಡೆಯಾಗಿತ್ತು. ಬಳಿಕ ಸುರೇಶ್ ರೈನಾ-ಅಂಬಟಿ ರಾಯುಡು, ರವೀಂದ್ರ ಜಡೇಜಾ-ಸ್ಯಾಮ್ ಕರ‌್ರನ್ ಸಾಹಸದಿಂದ ಸಿಎಸ್‌ಕೆ 7 ವಿಕೆಟ್‌ಗೆ 188 ರನ್ ಪೇರಿಸುವಲ್ಲಿ ಸಲವಾಗಿತ್ತು.

    ಇದನ್ನೂ ಓದಿ: ಕಾಲೆಳೆಯಲು ಬಂದ ಪಾಕ್ ಪತ್ರಕರ್ತನಿಗೆ ವೆಂಕಟೇಶ್ ಪ್ರಸಾದ್ ದಿಟ್ಟ ತಿರುಗೇಟು!

    ರಾತ್ರಿ 8 ಗಂಟೆಗೆ ಆರಂಭಗೊಳ್ಳುವ ಐಪಿಎಲ್ ಪಂದ್ಯಗಳು ತಡರಾತ್ರಿಯವರೆಗೂ ನಡೆಯುತ್ತಿದ್ದ ಕಾರಣ ಬಿಸಿಸಿಐ, ಪಂದ್ಯಗಳು ಬೇಗನೆ ಮುಗಿಯುವಂತೆ ಮಾಡುವ ಸಲುವಾಗಿ ಅರ್ಧಗಂಟೆ ಬೇಗನೆ ಅಂದರೆ ರಾತ್ರಿ 7.30ರಿಂದ ಆರಂಭಿಸಲು ನಿರ್ಧರಿಸಿತ್ತು. 2019ರಲ್ಲೇ ಪ್ಲೇಆಫ್​ ಮತ್ತು ಫೈನಲ್ ಪಂದ್ಯಗಳು ರಾತ್ರಿ 7.30ರಿಂದ ನಡೆದಿದ್ದವು.

    ಧೋನಿ ಮೇಲೆ ದ್ರಾವಿಡ್ ಸಿಟ್ಟಾಗಿದ್ದರು ಎಂದ ವೀರೇಂದ್ರ ಸೆಹ್ವಾಗ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts