More

    ಸಸಿ ನೆಟ್ಟು ಪರಿಸರ ಉಳಿಸಲು ಮುಂದಾಗಿ

    ಸಂಕೇಶ್ವರ: ಹವಾಮಾನದಲ್ಲಿ ಸಮತೋಲನ ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಪ್ರತಿ ವರ್ಷ ಒಂದೊಂದು ಸಸಿ ನೆಟ್ಟು, ಅದರ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಸಂಕೇಶ್ವರದ ಕಾರ್ಯನಿರತ ಪತ್ರಕರ್ತರ ಸಂಘದ ಗೌರವ ಅಧ್ಯಕ್ಷ ಪವನ ಕಣಗಲಿ ಹೇಳಿದರು.

    ಸಸಿ ನೆಟ್ಟು ಪರಿಸರ ಉಳಿಸಲು ಮುಂದಾಗಿ
    ಸಂಕೇಶ್ವರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ವನಮಹೋತ್ಸವ ಆಚರಿಸಲಾಯಿತು. ಪವನ ಕಣಗಲಿ, ಸುರೇಶ ಮಂಜರಗಿ, ಆನಂದ ಭಮ್ಮನ್ನವರ ಇತರರು ಇದ್ದರು.

    ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದ ನಿಮಿತ್ತ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯನ ಅತಿಯಾಸೆಗೆ ಪ್ರತಿ ವರ್ಷವೂ ಗಿಡ-ಮರಗಳು ಬಲಿಯಾಗುತ್ತಿವೆ. ಇದರಿಂದ ಪರಿಸರಕ್ಕೆ ಹಾನಿಯಾಗಿ ಪ್ರತಿ ವರ್ಷವೂ ಮಳೆ ಕಡಿಮೆಯಾಗುತ್ತಿದೆ. ಇದರಿಂದ ಕಷಿ ಉತ್ಪನವು ಕಡಿಮೆಯಾಗುತ್ತಿದೆ. ಹೀಗಾಗಿ ಕಷಿ ಸರಕುಗಳು ದುಬಾರಿಯಾಗುತ್ತಿವೆ. ಪ್ರಕತಿಯಲ್ಲಿ ಸಮತೋಲನ ಕಾಯ್ದು ಕೊಳ್ಳುವ ಸಲುವಾಗಿ ಪ್ರತಿಯೊಬ್ಬರೂ ಸಸಿ  ನೆಟ್ಟು ಅದರ ಪೋಷಣೆ ಮಾಡಬೇಕೆಂದು ಕರೆ ನೀಡಿದರು.

    ಸಂಕೇಶ್ವರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುರೇಶ ಮಂಜರಗಿ, ಕಾರ್ಯದರ್ಶಿ ಆನಂದ ಭಮ್ಮನ್ನವರ, ಖಜಾಂಚಿ ಆನಂದ ಶಿಂಧೆ, ನಿರ್ದೇಶಕರಾದ ಕುಮಾರ ಗುಡಸಿ, ಶಿವಾನಂದ ಪದ್ಮನ್ನವರ, ಶಶಾಂಕ ಮಾಳಿ, ಸಚಿನ ಕಾಂಬಳೆ, ಸರ್ಜೆರಾವ್ ಗಾಯಕವಾಡ, ಪರುಶರಾಮ ಸಿಸೋದೆ, ಎಂ.ಕೆ.ಮೋಮಿನ, ವಿಲಾಸ ಘೋರ್ಪಡೆ, ಪಾಂಡುರಂಗ ಪಾಟೀಲ, ಸಚಿನ ಸಾವಂತ, ಬಾಬುರಾವ ಹಾಲಗಡಿಗಿ ತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts