More

    ಇಂಗ್ಲೆಂಡ್​-ವಿಂಡೀಸ್​ ಟೆಸ್ಟ್​ ಪಂದ್ಯಕ್ಕೆ ಮಳೆ ಅಡ್ಡಿ

    ಸೌಥಾಂಪ್ಟನ್​: ಕರೊನಾ ವೈರಸ್​ ಭೀತಿಯಿಂದಾಗಿ ಜೈವಿಕ- ಸುರಕ್ಷಾ ವಾತಾವರಣದಲ್ಲಿ ಆರಂಭಗೊಳ್ಳಲು ಸಿದ್ಧವಾಗಿರುವ ಆತಿಥೇಯ ಇಂಗ್ಲೆಂಡ್​ ಹಾಗೂ ವೆಸ್ಟ್​ ಇಂಡೀಸ್​ ನಡುವಿನ ಮೊದಲ ಟೆಸ್ಟ್​ ಪಂದ್ಯಕ್ಕೆ ಮಳೆ ಅಡ್ಡಿಯುಂಟುವಾಗಿದೆ. ಕೋವಿಡ್​-19ರಿಂದಾಗಿ ಕಳೆದ 117 ದಿನಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು. ಲಾಕ್​ಡೌನ್​ ಬಳಿಕ ಪುನರಾರಂಭಗೊಳ್ಳಲು ಸಜ್ಜಾಗುತ್ತಿರುವ ಮೊದಲ ಟೆಸ್ಟ್​ ಪಂದ್ಯಕ್ಕೆ ಮಳೆ ಅಡಚಣೆಯುಂಟು ಮಾಡಿದೆ. ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ ಭಾಗವಾಗಿರುವ 3 ಪಂದ್ಯಗಳ ಟೆಸ್ಟ್​ ಸರಣಿ ವಿಸ್ಡನನ್​ ಟ್ರೋಫಿ ಉಭಯ ತಂಡಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹೊರ ಮೈದಾನ ಸಂಪೂರ್ಣ ತೇವಾಂಶದಿಂದ ಕೂಡಿದ್ದು, ಕನಿಷ್ಠ ಟಾಸ್​ ಕೂಡ ಹಾಕಲಾಗಿಲ್ಲ. ಕಾಯಂ ನಾಯಕ ಜೋ ರೂಟ್​ ಬದಲಿಗೆ ಬೆನ್​ ಸ್ಟೋಕ್ಸ್​ ಮೊದಲ ಬಾರಿಗೆ ಇಂಗ್ಲೆಂಡ್​ ನಾಯಕತ್ವ ವಹಿಸಿಕೊಂಡಿದ್ದಾರೆ.

    ಇಂಗ್ಲೆಂಡ್​-ವಿಂಡೀಸ್​ ಟೆಸ್ಟ್​ ಪಂದ್ಯಕ್ಕೆ ಮಳೆ ಅಡ್ಡಿ

    https://www.vijayavani.net/usain-bolt-shares-adorable-picture-of-his-daughter-reveals-her-name/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts