More

    ಚೀನಾ ಮಾಸ್ಟರ್ಸ್‌-750 ಬ್ಯಾಡ್ಮಿಂಟನ್ ಟೂರ್ನಿ: ಸಾತ್ವಿಕ್-ಚಿರಾಗ್ ರನ್ನರ್ ಅಪ್‌ಗೆ ತೃಪ್ತಿ

    ಶೆನ್‌ಜೆನ್ (ಚೀನಾ): ಸ್ಟಾರ್ ಷಟ್ಲರ್‌ಗಳಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಚೀನಾ ಮಾಸ್ಟರ್ಸ್‌ – 750 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ರನ್ನರ್ ಅಪ್‌ಗೆ ತೃಪ್ತಿಪಟ್ಟಿದ್ದಾರೆ. ಇದರೊಂದಿಗೆ ಹಾಲಿ ಋತುವಿನ ಮೊದಲ ಬಿಡಬ್ಲುೃಎ್ 750 ಪ್ರಶಸ್ತಿಯಿಂದ ವಂಚಿತವಾಗಿದ್ದಾರೆ.

    ಭಾನುವಾರ ನಡೆದ ೈನಲ್ ಪಂದ್ಯದಲ್ಲಿ ಸಾತ್ವಿಕ್- ಚಿರಾಗ್ ಜೋಡಿ 19-21, 21-18, 19-21 ರಿಂದ ವಿಶ್ವ ನಂ.1 ಚೀನಾದ ಲಿಯಾಂಗ್ ವೀ ಕೆಂಗ್ -ವಾಂಗ್ ಚಾಂಗ್ ಎದುರು ಹೋರಾಟಯುತ ಸೋಲು ಅನುಭವಿಸಿತು. ಮೊದಲ ಗೇಮ್‌ನಲ್ಲಿ ನಿಕಟ ಪೈಪೋಟಿ ನೀಡಿದ ನಡುವೆಯೂ ಭಾರತೀಯ ಜೋಡಿ ಹಿನ್ನಡೆ ಕಂಡಿತು.

    2ನೇ ಗೇಮ್‌ನಲ್ಲಿ ತಿರುಗೇಟು ನೀಡಿದ ಏಷ್ಯನ್ ಗೇಮ್ಸ್ ಚಾಂಪಿಯನ್ ಜೋಡಿ 21-18 ರಿಂದ ವಶಪಡಿಸಿಕೊಂಡು ಸಮಬಲ ಸಾಧಿಸಿತು. ಇದರೊಂದಿಗೆ ಮೂರನೇ ಹಾಗೂ ನಿರ್ಣಾಯಕ ಗೇಮ್‌ನಲ್ಲಿ 8-1 ಹಿನ್ನಡೆಯಿಂದ ಪುಟಿದೆದ್ದ ಸಾತ್ವಿಕ್-ಚಿರಾಗ್ ಜೋಡಿ ಕಠಿಣ ಹೋರಾಟದ ಹೊರತಾಗಿಯೂ ಅಗ್ರ ಜೋಡಿ ಎದುರು 1 ಗಂಟೆ 11 ನಿಮಿಷದಲ್ಲಿ ಪರಾಭವಗೊಂಡಿತು. ಸಾತ್ವಿಕ್-ಚಿರಾಗ್ ಜೋಡಿ ಹಾಲಿ ಋತುವಿನಲ್ಲಿ ಏಷ್ಯನ್ ಚಾಂಪಿಯನ್‌ಷಿಪ್, ಇಂಡೋನೇಷ್ಯಾ ಸೂಪರ್-1000, ಕೊರಿಯಾ ಸೂಪರ್-500, ಸ್ವಿಸ್ ಓಪನ್ ಸೂಪರ್ 300 ಪ್ರಶಸ್ತಿ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಒಲಿಸಿಕೊಂಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts