More

    ಸತತ 7ನೇ ಜಯದೊಂದಿಗೆ ಸೆಮೀಸ್‌ಗೆ ಸಜ್ಜಾದ ಆಸ್ಟ್ರೇಲಿಯಾ : ಮಿಚೆಲ್ ಮಾರ್ಷ್ ಭರ್ಜರಿ ಬ್ಯಾಟಿಂಗ್

    ಪುಣೆ: ಆಲ್ರೌಂಡರ್ ಮಿಚೆಲ್ ಮಾರ್ಷ್ (177* ರನ್, 132 ಎಸೆತ, 17 ಬೌಂಡರಿ, 9 ಸಿಕ್ಸರ್) ಭರ್ಜರಿ ಶತಕದ ಆರ್ಭಟದಿಂದ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಏಕದಿನ ವಿಶ್ವಕಪ್‌ನಲ್ಲಿ ತನ್ನ 9ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 8 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಆರಂಭಿಕ 2 ಪಂದ್ಯಗಳ ಸೋಲಿನ ಬಳಿಕ ಸತತ 7ನೇ ಗೆಲುವು ದಾಖಲಿಸಿದ ಪ್ಯಾಟ್ ಕಮ್ಮಿನ್ಸ್ ಪಡೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಿಯಾಗಿ ಸೆಮೀಸ್‌ಗೂ ಮುನ್ನ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ಇತ್ತ ಬಾಂಗ್ಲದೇಶಕ್ಕೆ ಸೋಲಿನ ನಡುವೆಯೂ 2025ರ ಚಾಂಪಿಯನ್ಸ್ ಟ್ರೋಫಿ ಅರ್ಹತೆ ಬಹುತೇಕ ಖಾತ್ರಿ ಎನಿಸಿದ್ದರೂ, ಅಧಿಕೃತವಾಗಲು ಭಾರತ-ನೆದರ್ಲೆಂಡ್ ಪಂದ್ಯ ಮುಕ್ತಾಯದವರೆಗೂ ಕಾಯಬೇಕಿದೆ.
    ಎಂಸಿಎ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾ ತೌಹಿದ್ ಹೃದಯ್ (74 ರನ್, 79 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕದ ಆಸರೆಯಲ್ಲಿ 8 ವಿಕೆಟ್‌ಗೆ 306 ರನ್ ಕಲೆಹಾಕಿತು. ಪ್ರತಿಯಾಗಿ ಡೇವಿಡ್ ವಾರ್ನರ್ (53 ರನ್, 61 ಎಸೆತ, 6 ಬೌಂಡರಿ) ಅರ್ಧಶತಕ ಹಾಗೂ ಮಿಚೆಲ್ ಮಾರ್ಷ್-ಸ್ಟೀವನ್ ಸ್ಮಿತ್ (63* ರನ್, 64 ಎಸೆತ, 4 ಬೌಂಡರಿ, 1) ಜೋಡಿ ಮುರಿಯದ 3ನೇ ವಿಕೆಟ್‌ಗೆ 135 ಎಸೆತಗಳಲ್ಲಿ 175 ರನ್ ಬಾರಿಸಿದ ಬಲದಿಂದ ಆಸ್ಟ್ರೇಲಿಯಾ, 44.4 ಓವರ್‌ಗಳಲ್ಲಿ 2 ವಿಕೆಟ್‌ಗೆ 307 ರನ್‌ಗಳಿಸಿ ಇನ್ನೂ 32 ಎಸೆತ ಬಾಕಿಯಿರುವಂತೆಯೇ ಸುಲಭ ಗೆಲುವು ದಾಖಲಿಸಿತು.
    ಬಾಂಗ್ಲಾದೇಶ: 8 ವಿಕೆಟ್‌ಗೆ 306 (ತಂಜಿದ್ 36, ಲಿಟನ್ 36, ನಜ್ಮೂಲ್ 45, ತೌಹಿದ್ 74, ಮಹಮುದುಲ್ಲಾ 32, ಮೆಹಿದಿ 29, ಜಂಪಾ 32ಕ್ಕೆ2, ಅಬೋಟ್ 61ಕ್ಕೆ2). ಆಸ್ಟ್ರೇಲಿಯಾ: 44.4 ಓವರ್‌ಗಳಲ್ಲಿ 2 ವಿಕೆಟ್‌ಗೆ 307 (ಟ್ರಾವಿಸ್ 10, ವಾರ್ನರ್ 53, ಮಾರ್ಷ್ 177*, ಸ್ಮಿತ್ 63*, ಟಸ್ಕಿನ್ 61ಕ್ಕೆ1). ಪಂದ್ಯಶ್ರೇಷ್ಠ: ಮಿಚೆಲ್ ಮಾರ್ಷ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts