More

    ಸರದಿ ಸಾಲಿನಲ್ಲಿ ನಿಂತು ಮಹಿಳೆಯರಿಂದ ಮತದಾನ: ವೃದ್ಧರು, ಅಂಗವಿಕಲರು ಮತಗಟ್ಟೆ ಆಗಮನ

    ಕುಕನೂರು: ವಿಧಾನಸಭಾ ಚುನಾವಣೆ ಮತದಾನಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬೆಳಗ್ಗೆಯೇ ಸರದಿ ಸಾಲಿನಲ್ಲಿ ನಿಂತು ಬುಧವಾರ ಮತದಾನ ಮಾಡಿದರು.


    ತಾಲೂಕಿನ ತಳಕಲ್, ಭಾನಾಪುರ, ತಳಬಾಳ ಸೇರಿ ವಿವಿಧ ಮತಗಟ್ಟೆಯಲ್ಲಿ ಮಹಿಳಾ ಮತದಾರರು ಹೆಚ್ಚು ಕಂಡು ಬಂದರು. ಪುರುಷ ಮತದಾರರ ಸಂಖ್ಯೆ ಸರದಿ ಸಾಲಿನಲ್ಲಿ ಬೆರಳೆಣಿಕೆ ಮಾತ್ರ ಕಂಡು ಬಂದಿದ್ದು, ಅದೇ ರೀತಿ ವೃದ್ಧರು, ಅಂಗವಿಕಲರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿದರು.

    ಸರದಿ ಸಾಲಿನಲ್ಲಿ ನಿಂತು ಮಹಿಳೆಯರಿಂದ ಮತದಾನ: ವೃದ್ಧರು, ಅಂಗವಿಕಲರು ಮತಗಟ್ಟೆ ಆಗಮನ
    ಕುಕನೂರು ತಾಲೂಕಿನ ತಳಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮಾಜಿ ಸಚಿವ ಬಸವರಾಜ ರಾಯರಡ್ಡಿ ಮತದಾನ ಮಾಡಿದರು.

    ಇದನ್ನೂ ಓದಿ: LIVE| ಕರ್ನಾಟಕ ಚುನಾವಣೆ 2023: ಮತದಾನದ ಕ್ಷಣ ಕ್ಷಣ ಮಾಹಿತಿಯ ನೇರಪ್ರಸಾರ


    ಸಚಿವ ಹಾಲಪ್ಪ ಆಚಾರ್ : ತಾಲೂಕಿನ ಮಸಬಹಂಚಿನಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮತಗಟ್ಟೆಯಲ್ಲಿ ಸಚಿವ ಹಾಲಪ್ಪ ಆಚಾರ್ ಮತದಾನ ಮಾಡಿದರು.ಬಳಿಕ ಮಾತನಾಡಿ, ಒಟ್ಟಾರೆ ನನ್ನ ಕ್ಷೇತ್ರದಲ್ಲಿ ಮತದಾರರ ಬೆಂಬಲ ಸಾಕಷ್ಟು ಕಾಣುತ್ತಿದೆ. ಇದಕ್ಕೆಲ್ಲಾ ಅಭಿವೃದ್ಧಿ ಕೆಲಸ ಕಾರಣವಾಗಿದ್ದು, ಇದರಿಂದ ಮತ್ತೊಮೆ ಜಯಶಾಲಿಯಾಗುತ್ತೇನೆ ಎಂದರು.


    ಮಾಜಿ ಸಚಿವ ಬಸವರಾಜ ರಾಯರಡ್ಡಿ : ತಾಲೂಕಿನ ತಳಕಲ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಮಾಜಿ ಸಚಿವ ಬಸವರಾಜ ರಾಯರಡ್ಡಿ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts