More

    ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತಿ ಮುಖ್ಯ

    ದಾರವಾಡ: ಸಮಯವು ಯಾರ ಸ್ವತ್ತಲ್ಲ. ಅದನ್ನು ಹಿಡಿದು ಇಟ್ಟುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಏಕಾಗ್ರತೆ ಅಳವಡಿಸಿಕೊಂಡು ಸಮಯದೊಂದಿಗೆ ಚಲಿಸಬೇಕು ಎಂದು ವಕೀಲ ಗುರುಪುತ್ರ ಶಿರೋಳ ಹೇಳಿದರು.
    ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
    ಸಂಸ್ಥೆಯ ಕಚೇರಿ ಅಽÃಕ್ಷಕ ಶಿವಲಿಂಗ ನೀಲಗುಂದ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್‌ಗಳತ್ತ ಗಮನಹರಿಸಿ ಅಭ್ಯಾಸ ನಿರ್ಲಕ್ಷಿಸುತ್ತಾರೆ. ಮೊಬೈಲ್‌ನಿಂದ ದೂರ ಇರಲು ಯೋಗ, ಜಾಗಿಂಗ್ ಅಥವಾ ವಾಕಿಂಗ್ ಮಾಡಬೇಕು. ತಂದೆ- ತಾಯಿ ಇಟ್ಟ ಭರವಸೆಯನ್ನು ಹುಸಿ ಮಾಡದೆ ಒಳ್ಳೆಯ ನಾಗರಿಕರಾಗಬೇಕು ಎಂದರು.
    ಮುಖ್ಯಾಧ್ಯಾಪಕಿ ಭುವನೇಶ್ವರಿ ದಂಡಿನ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರಾದ ಸಾವಿತ್ರಿ ಎನ್. ಪಾಟೀಲ, ಮಂಜುಳಾ ಭಾವಿಹಾಳ, ಮಂಜುಳಾ ಹನಸಿ, ಪ್ರತಿಭಾ ಪಾಟೀಲ, ಶಶಿಕಲಾ ಹಿರೇಮಠ, ವೀಣಾ ಚಿನ್ನದಕೈ, ರೇಣುಕಾ ಹೆಬ್ಬಳ್ಳಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts