More

    ಎಸ್​ಎಸ್ಎಲ್​ಸಿ ಫಲಿತಾಂಶ: ಲಾಕ್​ಡೌನ್​ ಸಮಯದಲ್ಲೇ ಓದಿ ರಾಜ್ಯಕ್ಕೆ ಟಾಪರ್​ ಬಂದ ನಿಖಿಲೇಶ್ ಮರಳಿ

    ಬೆಂಗಳೂರು: 2019-20ನೇ ಸಾಲಿನ ಎಸ್​ಎಸ್ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಪ್ರಿಂಟಿಂಗ್ ಪ್ರೆಸ್ ಮಾಲೀಕ ನಾಗೇಶ್ ಮರಳಿ ಮತ್ತು ಹರಿಣಾಕ್ಷಿ ದಂಪತಿ ಪುತ್ರ ನಿಖಿಲೇಶ್ ಎನ್. ಮರಳಿ ರಾಜ್ಯಕ್ಕೆ ಮೊದಲಿಗನಾಗಿ ಅದ್ವಿತೀಯ ಸಾಧನೆ ಮಾಡಿದ್ದಾರೆ.

    ಬೆಂಗಳೂರಿನ ಸದಾಶಿವನಗರದ ಪೂರ್ಣಪ್ರಜ್ಞ ಎಜುಕೇಶನ್ ಸೆಂಟರ್ ಎಚ್.ಎಸ್. ಸಂಸ್ಥೆಯ ವಿದ್ಯಾರ್ಥಿ ನಿಖಿಲೇಶ್​, 625ಕ್ಕೆ 625 ಅಂಕ ಪಡೆದಿದ್ದಾರೆ. ಸತತ ಓದು ಹಾಗೂ ಪ್ರಯತ್ನಶೀಲತೆ ಮೂಲಕ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ನಿಖಿಲೇಶ್​​, ಐಎಎಸ್ ಅಧಿಕಾರಿಯಾಗುವ ಮಹತ್ತರ ಗುರಿ ಹೊಂದಿದ್ದಾರೆ.

    ಇದನ್ನೂ ಓದಿರಿ ಸರ್ಕಾರಿ ಶಾಲೆಯ ಸನ್ನಿಧಿ ಎಸ್​ಎಸ್​ಎಲ್​ಸಿ ಟಾಪರ್​

    ಮಾರ್ಚ್​-ಏಪ್ರಿಲ್​ನಲ್ಲೇ ನಡೆಯಬೇಕಿದ್ದ ಪರೀಕ್ಷೆಯನ್ನು ಕರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಲಾಕ್​ಡೌನ್​ ಅವಧಿಯನ್ನೇ ಸದುಪಯೋಗ ಪಡಿಸಿಕೊಂಡ ನಿಖಿಲೇಶ್​, ಪಠ್ಯಗಳನ್ನು ನಿರಂತರವಾಗಿ ಮರು ಅಭ್ಯಾಸ ಮಾಡಿದ್ದರು.

    ತನ್ನ ಸಾಧನೆ ಬಗ್ಗೆ ವಿಜಯವಾಣಿ ಜತೆ ಮಾತನಾಡಿದರು ಅವರು, ‘ಆರಂಭದಲ್ಲಿ ಪ್ರತಿ ದಿನ 2 ರಿಂದ 3 ಗಂಟೆ ಅಭ್ಯಸಿಸುತ್ತಿದ್ದೆ. ಲಾಕ್‌ಡೌನ್‌ನಿಂದ ಪರೀಕ್ಷೆ ಮುಂದೂಡಲ್ಪಟ್ಟ ಬಳಿಕ ನಿತ್ಯ 8 ಗಂಟೆ ಓದುತ್ತಿದ್ದೆ. ವಾಟ್ಸ್‌ಆ್ಯಪ್ ಗ್ರೂಪ್ ಮಾಡಿ ಶಾಲಾ ಶಿಕ್ಷಕರು ಸೂಕ್ತ ರೀತಿಯಲ್ಲಿ ಬೋಧನೆ ಮಾಡುತ್ತಿದ್ದರು. ಈಗ ಪಿಯುಸಿನಲ್ಲಿ ಪಿಸಿಎಂಸಿ ವಿಷಯ ತೆಗೆದುಕೊಳ್ಳುವೆ. ಭವಿಷ್ಯದಲ್ಲಿ ಐಎಎಸ್ ಅಧಿಕಾರಿಯಾಗಿ ದೇಶ ಸೇವೆ ಮಾಡುವೆ’ ಎಂದು ತನ್ನ ಕನಸನ್ನು ಬಿಚ್ಚಿಟ್ಟರು.

    ಇವರೇ ಎಸ್​ಎಸ್​ಎಲ್​ಸಿ ಟಾಪರ್ಸ್, 625ಕ್ಕೆ 625 ಅಂಕ ಪಡೆದ ಸಾಧಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts