More

    8 ರಿಂದ 4 ನೇ ಸ್ಥಾನಕ್ಕೆ ಜಿಗಿದ ಗ್ರಾಮಾಂತರ ಜಿಲ್ಲೆ

    ಶೇ.96.48 ಎಸ್ಸೆಸ್ಸೆಲ್ಸಿ ಲಿತಾಂಶ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಎಸ್ಸೆಸ್ಸೆಲ್ಸಿ ಉತ್ತಮ ಲಿತಾಂಶಕ್ಕಾಗಿ ಶಿಕ್ಷಣ ಇಲಾಖೆ ಮೂಲಕ ಜಿಲ್ಲಾಡಳಿತ ಪ್ರಯೋಗಿಸಿದ ಹೊಸ ಪ್ರಯೋಗಗಳು ಲ ನೀಡಿವೆ. ಪರಿಣಾಮವಾಗಿ ಕಳೆದ ಸಾಲಿನಲ್ಲಿ 8ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 4 ನೇ ಸ್ಥಾನಕ್ಕೇರಿದ್ದು ಶೇ.96.48 ಲಿತಾಂಶ ಪಡೆಯುವಲ್ಲಿ ಯಶ ಕಂಡಿದೆ.
    ದೊಡ್ಡಬಳ್ಳಾಪುರ ,ದೇವನಹಳ್ಳಿ, ಹೊಸಕೋಟೆ, ನೆಲಮಂಗಲ ಸೇರಿ ಪ್ರಸಕ್ತ ಸಾಲಿನಲ್ಲಿ 13,630 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಇದರಲ್ಲಿ 13,617 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಈ ಪೈಕಿ 13,138 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
    ಶೇ.3.17 ಹೆಚ್ಚಳ: 2021-22 ನೇ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ. 93.3ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ 8 ಸ್ಥಾನ ಪಡೆದುಕೊಂಡಿತ್ತು. ಈ ಬಾರಿ ಶೇ.3.17 ಫಲಿತಾಂಶ ಹೆಚ್ಚಳವಾಗಿದ್ದು ಈ ಮೂಲಕ ಜಿಲ್ಲೆ ರಾಜ್ಯದಲ್ಲಿ 4ನೇ ಸ್ಥಾನಕ್ಕೆ ಜಿಗಿತ ಕಂಡಿದೆ.
    ನಿಶಾಂತ್‌ಗೆ 624 ಅಂಕ: ನೆಲಮಂಗಲ ತಾಲೂಕು ನ್ಯೂಸೆಂಚುರಿ ಪ್ರೌಢಶಾಲೆ ವಿದ್ಯಾರ್ಥಿ ನಿಶಾಂತ್ 625 ಕ್ಕೆ 624 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಟಾರ್ ಆಗಿದ್ದಾರೆ. ಇದರ ಜತೆಯಲ್ಲಿ ಜಿ.ಆರ್.ಖುಷಿ 621, ದೊಡ್ಡಬಳ್ಳಾಪುರದ ವಿನಯ್ ಪ್ರಕಾಶ್ 618 ಹಾಗೂ ಹೊಸಕೋಟೆಯ ಎಸ್.ಯಶವಂತಿ 619 ಅಂಕ ಪಡೆದು ಮೂಲಕ ಆಯಾ ತಾಲೂಕಿನ ಟಾರ್ ಎನಿಸಿದ್ದಾರೆ.

    ಹೊಸ ಪ್ರಯೋಗ: ಈ ಹಿಂದೆ ಜಿಲ್ಲೆಯ ಜಿಪಂ ಸಿಇಒ ಆಗಿದ್ದ ಅರ್.ಲತಾ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಶಿಕ್ಷಣ ಇಲಾಖೆ ಮೂಲಕ ಹೊಸ ಪ್ರಯೋಗಳನ್ನು ನಡೆಸಿ ಯಶಸ್ವಿಯಾಗಿದ್ದರು. ಪ್ರಯೋಗಗಳ ಲವಾಗಿ 16 ನೇ ಸ್ಥಾನದಲ್ಲಿದ್ದ ಜಿಲ್ಲೆ ಏಕಾಏಕಿ 8 ಸ್ಥಾನಕ್ಕೆ ಜಿಗಿದಿತ್ತು. ನಂತರದಲ್ಲಿ ಚಿಕ್ಕಬಳ್ಳಾಪುರಕ್ಕೆ ಡಿಸಿಯಾಗಿ ಹೋಗಿದ್ದರು. ಈ ಬಾರಿ ಮತ್ತೆ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದಿರುವ ಲತಾ ಕಳೆದ ಬಾರಿಯ ಪ್ರಯೋಗಳ ಜತೆ ಮತ್ತಷ್ಟು ಸೇರ್ಪಡೆ ಮಾಡಿ ಪ್ರಥಮ ಸ್ಥಾನದ ಗುರಿಯೊಂದಿಗೆ ಕಾರ್ಯಕ್ರಮಗಳನ್ನು ರೂಪಿಸಿದ್ದರು.
    ಇದಕ್ಕಾಗಿ ಜಿಲ್ಲೆಯಲ್ಲಿ ಮಕ್ಕಳಿಗೆ ಪರೀಕ್ಷೆ ಕೈಪಿಡಿ ವಿತರಣೆ, ವಿಷಯವಾರು ನುರಿತ ವಿಷಯತಜ್ಞರಿಂದ ತರಗತಿಗಳು, ಕಲಿಕೆ ಹಿಂದುಳಿದ ಮಕ್ಕಳ ಪತ್ತೆ ಹಾಗೂ ಅವರ ಬಗ್ಗೆ ಹೆಚ್ಚಿನ ಆಸಕ್ತಿ, ಅಧಿಕಾರಿಗಳು ಶಾಲಾ ದತ್ತು ಪಡೆಯುವ ಮೂಲಕ ಫಲಿತಾಂಶದ ಬಗ್ಗೆ ಮುತುವರ್ಜಿ ವಹಿಸುವುದು, ಮಕ್ಕಳನ್ನು ಮುಂಜಾನೆ ಓದಲು ಏಳುವಂತೆ ಮಾಡಲು ಮಿಸ್ಟ್ ಕಾಲ್ ತಂತ್ರ ಸೇರಿ ಹಲವು ಯೋಜನೆಗಳನ್ನು ರೂಪಿಸಲಾಗಿತ್ತು. ಶಾಲೆಯಲ್ಲಿ ನಡೆಯುವ ಪ್ರತಿ ಪರೀಕ್ಷೆಯಲ್ಲೂ ಮಕ್ಕಳ ಕಲಿಕಾ ಮಟ್ಟ ಮೌಲ್ಯಮಾಪನ ನಡೆಸಲಾಗಿತ್ತು.
    ಪ್ರೌಢಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉತ್ತಿರ್ಣರಾಗಲು ಅಗತ್ಯ ಎನಿಸುವ ಪ್ರಶ್ನೊತ್ತರಗಳ ಕೈಪಿಡಿ ಸಿದ್ಧಪಡಿಸಲಾಗಿತ್ತು. ಜಿಲ್ಲೆಯ ವಿಷಯಾವಾರು ಶಿಕ್ಷಕರ ನೆರವಿನಿಂದ ಬಹುಮುಖ್ಯ ಪ್ರಶ್ನೊತ್ತರಗಳನ್ನು ಆಯ್ಕೆ ಮಾಡಿ ಮಕ್ಕಳಿಗೆ ನೀಡಲಾಗಿತ್ತು. ಈ ಕೈಪಿಡಿ ಕೇವಲ ಕಲಿಕೆಯಲ್ಲಿ ಹಿಂದುಳಿದವರಿಗೆ ಮಾತ್ರವಲ್ಲದೆ ಉತ್ತಮ ಅಂಕ ಪಡೆಯುವವರಿಗೂ ನೆರವಾಗಿದೆ. ವಿದ್ಯಾರ್ಥಿಗಳಲ್ಲಿ ಎ, ಬಿ, ಸಿ ಎಂದು ವಿಭಾಗವಾರು ವಿಂಗಡಿಸಿ ಚೆನ್ನಾಗಿ ಓದುವ ಮಕ್ಕಳ ಗುಂಪಿನೊಂದಿಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಸೇರಿಸುವುದು, ಆ ಮೂಲಕ ಕಲಿಕೆಯಲ್ಲಿ ಹಿಂದುಳಿದವರಿಗೆ ಪರೀಕ್ಷಾ ಭಯ ದೂರ ಮಾಡುವುದು, ಮನೋಸ್ಥೆರ್ಯ ತುಂಬುವ ಕೆಲಸ ಮಾಡಲಾಗಿತ್ತು. ಸತತ 3ದಿನ ರಜೆ ಪಡೆದ ವಿದ್ಯಾರ್ಥಿಗೆ ಕರೆ ಮಾಡಿ, ಮಗು ಶಾಲೆ ತಪ್ಪಿಸದಂತೆ ಎಚ್ಚರಿಕೆ ವಹಿಸಲಾಗಿತ್ತು ಇದೆಲ್ಲದ ಪ್ರತಿಲದಿಂದ ಜಿಲ್ಲೆಯಲ್ಲಿ ಲಿತಾಂಶ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


    ಜಿಲ್ಲಾಧಿಕಾರಿ ಆರ್.ಲತಾ ಮೆಚ್ಚುಗೆ

    ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಗ್ರಾಮಾಂತರ ಜಿಲ್ಲೆ ಶೇ. 96.48 ಫಲಿತಾಂಶ ಪಡೆಯುವ ಮೂಲಕ ರಾಜ್ಯಕ್ಕೆ 4ನೇ ಸ್ಥಾನ ಪಡೆದಿರುವುದು ಹೆಮ್ಮೆ ಎನಿಸಿದೆ. ಶಿಕ್ಷಣ ಇಲಾಖೆ ಮೂಲಕ ಹೊಸ ಪ್ರಯೋಗಗಳ ಮೂಲಕ ಲಿತಾಂಶ ಹೆಚ್ಚಳಕ್ಕೆ ಶ್ರಮಿಸಲಾಗಿತ್ತು. ಈ ಬಾರಿ ಮೊದಲ ಸ್ಥಾನದ ನಿರೀಕ್ಷೆ ಇತ್ತು. ಆದರೆ ಮೊದಲ ಸ್ಥಾನ ಪಡೆದ ಚಿತ್ರದುರ್ಗಕ್ಕೂ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗೂ ಕೇವಲ ಶೇ 0.32 ಫಲಿತಾಂಶದಲ್ಲಿ ಕಡಿಮೆ ಇದೆ. ಆದ್ದರಿಂದ ಮುಂದಿನ ಬಾರಿ ಪ್ರಥಮ ಸ್ಥಾನಕ್ಕೆ ಮತ್ತಷ್ಟು ಹೊಸ ಪ್ರಯೋಗ ಮಾಡುವ ಪ್ರಯತ್ನ ಮಾಡಲಾಗುವುದು. ಉತ್ತಮ ಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿಗಳು, ಶಿಕ್ಷಕರು,ಬಿಇಒ, ಡಿಡಿಪಿಐ ಎಲ್ಲರೂ ಅಭಿನಂದನಾರ್ಹರು ಎಂದು ಜಿಲ್ಲಾಧಿಕಾರಿ ಆರ್.ಲತಾ ಮೆಚ್ಚುಗೆ ವ್ಯಕ್ತಪಡಿಸಿದರು.

    ಕಳೆದ ಬಾರಿಗಿಂತ ಶೇ 3.17 ಫಲಿತಾಂಶ ಏರಿಕೆಯಾಗಿದೆ. ನಾಲ್ಕೂ ತಾಲೂಕುಗಳಲ್ಲೂ ವಿದ್ಯಾರ್ಥಿಗಳು ಟಾರ್ ಬಂದಿದ್ದಾರೆ ಒಟ್ಟಾರೆ ಜಿಲ್ಲೆಯ ಲಿತಾಂಶ ಉತ್ತಮವಾಗಿದೆ. ಇದಕ್ಕಾಗಿ ಆಯಾ ತಾಲೂಕು ಬಿಇಒಗಳು ಹಾಗೂ ಶಾಲಾ ಶಿಕ್ಷಕರು ಸಾಕಷ್ಟು ಶ್ರಮಿಸಿದ್ದಾರೆ. ಇದರ ಪ್ರತಿಲ ಲಿತಾಂಶವಾಗಿ ಬದಲಾಗಿದೆ.
    ಶ್ರೀ ಕಂಠಯ್ಯ, ಡಿಡಿಪಿಐ, ಬೆಂಗಳೂರು ಗ್ರಾಮಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts