More

    ಹೆಣ್ಣುಮಕ್ಕಳೇ ಟಾಪ್, ಐವರಿಗೆ 625 ಅಂಕ: ಜಿಲ್ಲೆಗೆ ಎ ಗ್ರೇಡ್ ಶ್ರೇಣಿ, ಶೇ. 94.53 ದಾಖಲೆ ಫಲಿತಾಂಶ

    ಕೋಲಾರ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ. 94.53 ಸಾಧನೆ ವಾಡುವ ಮೂಲಕ ಜಿಲ್ಲೆಯು ದಾಖಲೆ ಬರೆದಿದೆ. ಐವರು ವಿದ್ಯಾರ್ಥಿನಿಯರು 625 ಅಂಕಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

    ಜಿಲ್ಲೆಯು ಎ ಶ್ರೇಣಿ ಫಲಿತಾಂಶದೊಂದಿಗೆ ನತೆ ಹೆಚ್ಚಿಸಿಕೊಂಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.4 ಫಲಿತಾಂಶ ಹೆಚ್ಚಳವಾಗಿದೆ.

    ಈ ಬಾರಿ 19928 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 18839 ಮಂದಿ ಉತ್ತೀರ್ಣರಾಗಿದ್ದಾರೆ. 8 ವಿದ್ಯಾರ್ಥಿಗಳು 624 ಅಂಕ, 14 ಮಂದಿ 623, 13 ಮಂದಿ 622, 27 ಮಂದಿ 621 ಮತ್ತು 31 ಮಂದಿ 620 ಅಂಕಗಳಿಸಿದ್ದಾರೆ.

    ಚಿನ್ಮಯ ಶಾಲೆಯ ಇಬ್ಬರು ಟಾಪರ್ಸ್‌: ಕೋಲಾರದ ಚಿನ್ಮಯ ಶಾಲೆಯ ತೇಜಸ್ವಿನಿ ಚೌವ್ಹಾಣ್, ಎ.ಕಾರ್ಣಿಕಾ 625 ಅಂಕ ಗಳಿಸಿದ್ದು, ಇಲ್ಲಿನ ಸೈನಿಕ್ ಪಬ್ಲಿಕ್ ಶಾಲೆಯ ಶ್ರೀಲಕ್ಷ್ಮೀ, ಮುಳಬಾಗಿಲು ಅಮರಜ್ಯೋತಿ ಶಾಲೆಯ ವೈ.ಕೆ.ಪರ್ಣಿಕಾ, ಕೆಜಿಎಫ್‌ನ ಬಿಇಎಂಎಲ್ ಶಾಲೆಯ ಅಮೂಲ್ಯಾ 625 ಅಂಕಗಳಿಸಿದ್ದಾರೆ.

    ಬಾಲಕಿಯರು ಮೇಲುಗೈ: ಜಿಲ್ಲೆಯಲ್ಲಿ 10028 ಬಾಲಕರು ಪರೀಕ್ಷೆ ಬರೆದಿದ್ದು, 9367 ಮಂದಿ ಉತ್ತೀರ್ಣರಾಗಿ ಶೇ. 93.41 ಫಲಿತಾಂಶ ಬಂದಿದೆ. 9900 ಬಾಲಕಿಯರಲ್ಲಿ 9472 ಮಂದಿ ಉತ್ತೀರ್ಣರಾಗುವ ಮೂಲಕ ಶೇ. 95.67 ಫಲಿತಾಂಶ ಬಂದಿದೆ. ಶ್ರೀನಿವಾಸಪುರ ತಾಲೂಕು ಸೋಮಯಾಜಲಪಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಸುರೇಂದ್ರರಾಜು 620 ಅಂಕಗಳಿಸಿ ಸಾಧನೆ ವಾಡಿದ್ದಾನೆ.

    ಶ್ರೀನಿವಾಸಪುರ ಪ್ರಥಮ: ಶ್ರೀನಿವಾಸಪುರ ತಾಲೂಕು 97.19 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದರೆ, ಶೇ. 95.82 ಫಲಿತಾಂಶದೊಂದಿಗೆ ಕೋಲಾರ ದ್ವಿತೀಯ ಸ್ಥಾನ ಗಳಿಸಿದೆ. ನಂತರ ಸ್ಥಾನದಲ್ಲಿ ಮುಳಬಾಗಿಲು ಶೇ. 94.55, ಬಂಗಾರಪೇಟೆ ಶೇ.93.79, ಕೆಜಿಎಫ್ ಶೇ.92.72, ವಾಲೂರು ಶೇ.92.39 ಕಡೇ ಸ್ಥಾನದಲ್ಲಿದೆ.

    ಹರ್ಷದಾಯಕ ಫಲಿತಾಂಶ: ಜಿಲ್ಲೆಯಲ್ಲಿ ಈ ಬಾರಿ ಹರ್ಷದಾಯಕ ಫಲಿತಾಂಶ ಬಂದಿದೆ. 2 ವರ್ಷ ಕರೊನಾದಿಂದ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದರು. ಆದರೆ ಇಲಾಖೆ ಒದಗಿಸಿದ್ದ ಅಧ್ಯಾಯವಾರು ಪ್ರಶ್ನೋತ್ತರ, ‘ನನ್ನನ್ನೊಮ್ಮೆ ಗಮನಿಸಿ’, ‘ಚಿತ್ರರಚಿಸು ಅಂಕಗಳಿಸು’ ಮತ್ತಿತರ ಉಪಯುಕ್ತ ಹೊತ್ತಿಗೆಗಳು ಫಲಿತಾಂಶ ಹೆಚ್ಚಿಸಲು ಸಹಕಾರಿಯಾಗಿದೆ. ಶಿಕ್ಷಕರ ಶ್ರಮ, ವಿದ್ಯಾರ್ಥಿಗಳ ಅಭ್ಯಾಸ ಸಹಕಾರಿಯಾಗಿದೆ. 2022-23ನೇ ಸಾಲಿನಲ್ಲಿ ಮತ್ತಷ್ಟು ಗುಣಮಟ್ಟದ ಫಲಿತಾಂಶ ತರಲು ಯತ್ನಿಸಲಾಗುವುದು ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದ್ದಾರೆ.

    ಗುಣಾತ್ಮಕ ಸಾಧನೆ: ಉತ್ತಿರ್ಣರಾದ 18839 ವಿದ್ಯಾರ್ಥಿಗಳಲ್ಲಿ 17255 ಮಂದಿ ಶೇ. 60ಕ್ಕಿಂತ ಹೆಚ್ಚು ಅಂಕ ಗಳಿಸಿದ್ದು, ಗುಣಾತ್ಮಕತೆಯಲ್ಲೂ ಜಿಲ್ಲೆ ಸಾಧನೆ ವಾಡಿದೆ. ಎ+ ಶ್ರೇಣಿಯಲ್ಲಿ 3762 ಮಂದಿ, ಎ ಶ್ರೇಣಿಯಲ್ಲಿ 5437 ಮಂದಿ, ಬಿ+ ಶ್ರೇಣಿಯಲ್ಲಿ 4877, ಬಿ ಶ್ರೇಣಿಯಲ್ಲಿ 3179 ಮಂದಿ ಸಾಧನೆ ವಾಡಿದ್ದು, ಸಿ ಶ್ರೇಣಿಯಲ್ಲಿ 1377 ಮಂದಿ ವಾತ್ರ ತೇರ್ಗಡೆಯಾಗಿದ್ದಾರೆ ಎಂದು ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ವಾಹಿತಿ ನೀಡಿದ್ದಾರೆ.

    ದ್ವಿತೀಯ ಭಾಷೆ, ವಿಜ್ಞಾನದಲ್ಲಿ ಸಾಧನೆ: ದ್ವಿತೀಯ ಭಾಷೆಯಲ್ಲಿ ಶೇ. 99.52 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಗಣನೀಯ ಸಾಧನೆಯಾಗಿದೆ. ವಿಜ್ಞಾನ ವಿಷಯದಲ್ಲಿ ಶೇ. 97.86, ಸವಾಜ ವಿಜ್ಞಾನದಲ್ಲಿ ಶೇ. 97.77, ಗಣಿತದಲ್ಲಿ ಶೇ.97.64, ತೃತೀಯ ಭಾಷೆಯಲ್ಲಿ 97.28 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಸವಾಜ ವಿಜ್ಞಾನದಲ್ಲಿ 100ಕ್ಕೆ 100ಅಂಕಗಳನ್ನು 2192ಮಂದಿ ಪಡೆದಿದ್ದಾರೆ. ಇನ್ನು 98 ವಿದ್ಯಾರ್ಥಿಗಳು 620ಕ್ಕೂ ಹೆಚ್ಚು ಅಂಕ ಗಳಿಸಿರುವುದು ವಿಶೇಷವಾಗಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts