More

    ನಿರ್ವಿಘ್ನವಾಗಿ ನೆರವೇರಿತು ಗಣಿತ ಪರೀಕ್ಷೆ ; ಮಧುಗಿರಿ 12433, ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 21697 ವಿದ್ಯಾರ್ಥಿಗಳು ಹಾಜರು

    ತುಮಕೂರು: ಕರೊನಾ ಆತಂಕದ ನಡುವೆಯೂ ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆ ನಿರ್ವಿಘ್ನವಾಗಿ ನೆರವೇರಿತು. ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 12433 ಹಾಗೂ ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 21697 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

    ತುಮಕೂರು ಜಿಲ್ಲೆಯಲ್ಲಿ 347 ಹಾಗೂ ಮಧುಗಿರಿಯಲ್ಲಿ 536 ವಿದ್ಯಾರ್ಥಿಗಳು ಗೈರಾಗಿದ್ದರು. ಒಟ್ಟು 48 ವಿದ್ಯಾರ್ಥಿಗಳು ಕಂಟೇನ್ಮೆಂಟ್ ವಲಯಗಳಿಂದ ಪರೀಕ್ಷಾ ಕೇಂದ್ರಗಳಿಗೆ ಬಂದು ಪ್ರತ್ಯೇಕವಾಗಿ ಕುಳಿತು ಪರೀಕ್ಷೆ ಬರೆದರು. 6 ವಿದ್ಯಾರ್ಥಿಗಳು ಅನಾರೋಗ್ಯದ ನಡುವೆಯೂ ಪರೀಕ್ಷೆ ಹಾಜರಾಗಿದ್ದರು. ಈ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು.

    ಕರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಪರಸ್ಪರ ಅಂತರಕ್ಕೆ ಆದ್ಯತೆ ನೀಡಲಾಗಿತ್ತು. ಎಲ್ಲ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಶಾಲೆಗೆ ಬಂದು ಪರೀಕ್ಷೆ ಬರೆದರು. ಬಹುತೇಕ ಕಡೆಗಳಲ್ಲಿ ವಿದ್ಯಾರ್ಥಿಗಳು ಪಾಲಕರ ಜತೆ ಆಗಮಿಸಿ, ಪರೀಕ್ಷೆ ಮುಗಿಸಿಕೊಂಡು ವಾಪಸಾದರು. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಆಗಮಿಸಿದ್ದರು. ನೋಂದಣಿ ಸಂಖ್ಯೆಯೂ ಅದೇ ಕೊಠಡಿಯಲ್ಲಿದ್ದ ಕಾರಣದಿಂದ ಯಾರಿಗೂ ಕೊಠಡಿಗೆ ತೆರಳಲು ತೊಂದರೆ, ಗೊಂದಲಗಳಾಗಲಿಲ್ಲ. ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿಯೂ ಗೊಂದಲವಿಲ್ಲದೆ ಗಣಿತ ವಿಷಯದ ಪರೀಕ್ಷೆ ಮುಕ್ತಾಯವಾಯಿತು.

    ಅರಸೀಕೆರೆ ಪರೀಕ್ಷಾ ಕೇಂದ್ರದಲ್ಲಿ ಯಥಾಸ್ಥಿತಿ !: ಬಿಸಿಎಂ ಅಧಿಕಾರಿ ಕಾರ್ಯನಿರ್ವಹಿಸಿದ್ದ ಪಾವಗಡ ತಾಲೂಕು ಅರಸೀಕೆರೆ ಪರೀಕ್ಷಾ ಕೇಂದ್ರದಲ್ಲಿ ಅವರ ಜತೆ ಪರೀಕ್ಷೆಯ ಮೊದಲ ದಿನ ಕಾರ್ಯನಿರ್ವಹಿಸಿದ್ದ ಎಲ್ಲ ಸಿಬ್ಬಂದಿಯೂ ಭಾಗವಹಿಸಿದ್ದರು. ಶಾಲೆಗೆ ಸ್ಯಾನಿಟೈಸ್ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರಾದರೂ ವಿದ್ಯಾರ್ಥಿಗಳಲ್ಲಿ ಅನುಮಾನ ದೂರವಾಗಿರಲಿಲ್ಲ. ಸೋಂಕಿತ ಬಿಸಿಎಂ ಅಧಿಕಾರಿ ಇಡೀ ತಾಲೂಕು ಬಿಸಿಎಂ ಹಾಸ್ಟೆಲ್‌ನಲ್ಲಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡಿದ್ದರೂ ಈ ಬಗ್ಗೆ ತಾಲೂಕು ಆಡಳಿತ ತಲೆ ಕೆಡಿಸಿಕೊಂಡಂತೆ ಕಾಣಿಸಲಿಲ್ಲ. ತಾಲೂಕು ಮಟ್ಟದ ಅಧಿಕಾರಿಗಳ ಜತೆ ನಿಕಟ ಸಂಪರ್ಕವಿದ್ದರೂ ಯಾರೊಬ್ಬರೂ ಬಾಯಿಬಿಡದಿರುವುದು ಭವಿಷ್ಯದಲ್ಲಿ ಅಧಿಕಾರಿಗಳು ಹಾಗೂ ಅವರ ಕುಟುಂಬದಲ್ಲಿ ಸೋಂಕು ಹೆಚ್ಚು ಕಾಣಿಸಿಕೊಳ್ಳುವ ಅಪಾಯ ಎದುರಾಗಿದೆ.

    ಭಯಬಿಟ್ಟು ಪರೀಕ್ಷೆ ಬರೆದರು : ಚಿಕ್ಕನಾಯಕನಹಳ್ಳಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಎರಡನೇ ದಿನವಾದ ಶನಿವಾರ ವಿದ್ಯಾರ್ಥಿಗಳು ಕರೊನಾ ಆತಂಕವಿಲ್ಲದೆ ಗಣಿತ ಪರೀಕ್ಷೆ ಬರೆದರು. ಪರೀಕ್ಷಾ ಕೇಂದ್ರಗಳಿಗೆ ಸ್ಯಾನಿಟೈಸರ್ ಸಿಂಪಡನೆ ಮಾಡುವುದು ಸೇರಿ ಹ್ಯಾಂಡ್ ಸ್ಯಾನಿಟೈಸ್, ಮಾಸ್ಕ್ ವಿತರಣೆ ಹಾಗೂ ಥರ್ಮಲ್‌ಸ್ಕ್ರೀನಿಂಗ್ ಮಾಡಲಾಯಿತು. ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಮಾರ್ಗಸೂಚಿ ಪಾಲಿಸಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts