More

    ರಂಗಕಲಾವಿದೆಗೆ ಒಲಿದ ಶ್ರೀವಾಲ್ಮೀಕಿ ಪ್ರಶಸ್ತಿ

    ಬಳ್ಳಾರಿ : ರಾಜ್ಯ ಸರ್ಕಾರ ವಾಲ್ಮೀಕಿ ಜಯಂತಿ ಅಂಗವಾಗಿ ನೀಡುವ ರಾಜ್ಯಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಬಳ್ಳಾರಿಯ ರಂಗಕಲಾವಿದೆ ಸುಜಾತಮ್ಮ ಆಯ್ಕೆಯಾಗಿದ್ದಾರೆ.

    ಸುಜಾತಮ್ಮ ಅವರು 1959 ರಲ್ಲಿ ಕರ್ನೂಲ್ ಜಿಲ್ಲೆ ಆಲೂರು ತಾಲೂಕಿನ ಕುಂದನಗುರ್ತಿ ಗ್ರಾಮದಲ್ಲಿ ಜನಿಸಿದವರು. ಬಳ್ಳಾರಿ ಜಿಲ್ಲೆಯ ಹೆಸರಾಂತ ಬಯಲಾಟ ಹಿರಿಯ ರಂಗಕಲಾವಿದೆಯಾಗಿ ಸುಮಾರು 62 ವರ್ಷಗಳ ಕಾಲ ಸೇವೆ ಸಲ್ಲಿಸಿ ಜಿಲ್ಲೆಯ ಜನ ಮನದಲ್ಲಿ ಸ್ಥಿರಸ್ಥಾನವನ್ನು ಪಡೆದಿದ್ದಾರೆ.

    ಕರ್ನಾಟಕ ಮತ್ತು ಆಂಧ್ರ ದ್ವಿಭಾಷೆ ಅಭಿನಯ ರಂಗಕಲಾವಿದೆಯಾಗಿ ಸೇವೆ ಸಲ್ಲಿಸಿರುತ್ತಾರೆ. ಅವರು 8ನೇ ವರ್ಷದಲ್ಲಿ ತಮ್ಮ ತಂದೆ ಭೀಮದಾಸಪ್ಪರವರೊಂದಿಗೆ ಹಳ್ಳಿ ಹಳ್ಳಿಗೆ ಹೋಗಿ ಭಜನೆ ಹಾಡುಗಳನ್ನು ತಮ್ಮ ಕಲಾವೃತ್ತಿಯನ್ನು ಆರಂಭಿಸಿದರು. 12ನೇ ವಯಸ್ಸಿನಲ್ಲಿ ಯರಂಗಳಿ ಗ್ರಾಮದಲ್ಲಿ ‘ಗಿರಿಜಾ ಕಲ್ಯಾಣ’ ಎಂಬ ಬಯಲಾಟದಲ್ಲಿ ‘ರತಿದೇವಿ’ಯ ಪಾತ್ರ ಮಾಡಿ ಮೊದಲ ಪಾತ್ರದಲ್ಲಿ ಜನರ ಮೆಚ್ಚುಗೆ ಗಳಿಸಿದ್ದಾರೆ.

    ರಾಮಾಯಣದಲ್ಲಿ ಸೀತೆಯಾಗಿ, ಮಂಡೋದರಿಯಾಗಿ, ರತಿಕಲ್ಯಾಣದಲ್ಲಿ ದೌಪದಿಯಾಗಿ ಹಾಗೂ ಪಾರ್ಥವಿಜಯ, ದುಶ್ಯಾಸನ ವಧೆ, ದಕ್ಷಬ್ರಾಹ್ಮಣನ ಕಥೆ, ಪ್ರಹ್ಲಾದನ ಚರಿತ್ರೆ, ಮೂರುವರೆ ವಜ್ರ ಮುಂತಾದ ಬಯಲಾಟಗಳಲ್ಲಿ ದೌಪದಿಯಾಗಿ, ಉತ್ತರೆಯಾಗಿ, ಪಾರ್ವತಿಯಾಗಿ, ಸುಭದ್ರೆಯಾಗಿ, ಸುಶೀಲಳಾಗಿ, ಕನಕಾಂಗಿಯಾಗಿ, ಶುಚಿಯಾಗಿ ಅನೇಕ ವೈವಿಧ್ಯಮಯ ಬಯಲಾಟ ಪಾತ್ರಗಳನ್ನು ಹಾಗೂ ನಾಟಕ ರಂಗದಲ್ಲೂ ಗರುಡಗರ್ವ ಭಂಗ, ಶಿವಜಲಂಧರ, ಅದ್ಭುತ ರಾಮಾಯಣ, ಕುರುಕ್ಷೇತ್ರ ಮತ್ತು ರಕ್ತರಾತ್ರಿ ಮುಂತಾದ ಪೌರಾಣಿಕ ನಾಟಕಗಳಲ್ಲಿಯೂ ನಟಿಸಿ ಕರ್ನಾಟಕ ಪ್ರಾಂತ್ಯಗಳಲ್ಲಿಯೂ ಕಲೆಯನ್ನು ಪ್ರದರ್ಶಿಸಿದ್ದಾರೆ.

    ಸುಜಾತಮ್ಮ ಅವರು 5 ಸಾವಿರ ಬಯಲಾಟಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅವರ ಕಲೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು 1997ನೇ ಸಾಲಿನಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಕಾಡೆಮಿ ಪ್ರಶಸ್ತಿ, 2007-08ನೇ ಸಾಲಿನಲ್ಲಿ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ, 2012ರಲ್ಲಿ ಬಳ್ಳಾರಿ ಜಿಲ್ಲಾ ರಾಘವ ಪ್ರಶಸ್ತಿ, 2016-17ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

    ಬೆಂಗಳೂರಿನಲ್ಲಿ ಅ.28ರಂದು ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಪ್ರಶಸ್ತಿಯೂ ಐದು ಲಕ್ಷ ರೂ. ನಗದು ಹಾಗೂ 20 ಗ್ರಾಂ ಚಿನ್ನದ ಪದಕ ಹೊಂದಿರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts