More

    ಶ್ರೀಶೈಲಗಿರಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸಂಸ್ಥೆ ವಂಚನೆ ;ವಂಚಕರ ಆಸ್ತಿ ಸುಳಿವು ಕೋರಿದ ಖಾಕಿ

    ಬೆಂಗಳೂರು: ಶ್ರೀಶೈಲಗಿರಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸಂಸ್ಥೆ ಅಧ್ಯಕ್ಷ, ನಿರ್ದೇಶಕರ ಸ್ಥಿರಾಸ್ತಿ, ಚರಾಸ್ತಿ ಸಂಬಂಧ ಮಾಹಿತಿ ನೀಡುವಂತೆ ಬಸವನಗುಡಿ ಠಾಣೆ ಪೊಲೀಸರು ಕೋರಿದ್ದಾರೆ.

    ಬಸವನಗುಡಿಯ ಗಾಂಧಿ ಬಜಾರ್ ಮುಖ್ಯರಸ್ತೆ ಅಶೋಕ ಪ್ಲಾಜಾ ಕಟ್ಟಡದಲ್ಲಿ ಇರುವ ಶ್ರೀ ಶೈಲಗಿರಿ ಸಂಸ್ಥೆ ಠೇವಣಿದಾರರಿಗೆ ಮೋಸವಾಗಿದೆ. ಅಧ್ಯಕ್ಷ ಡಿ.ಪಿ. ನವೀನ್, ಆಡಳಿತ ಮಂಡಳಿ ನಿದೇರ್ಶಕರು ಮತ್ತು ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ಸೇರಿಕೊಂಡು ಠೇವಣಿದಾರರು ಇರಿಸಿದ್ದ ಹಣ ಮತ್ತು ಬಡ್ಡಿಯನ್ನು ಸಕಾಲದಲ್ಲಿ ಸಂದಾಯ ಮಾಡಿಲ್ಲ. ಇದರಿಂದ ಸಹಕಾರಿ ಸದಸ್ಯರಿಗೆ ನಂಬಿಕೆ ದ್ರೋಹವಾಗಿದೆ.

    ಅಧಿಕಾರ ದುರುಪಯೋಗ ಪಡಿಸಿಕೊಂಡು ಮೋಸ ಮಾಡಿದ್ದರು. ಈ ಸಂಬಂಧ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ. ಪಾಟೀಲ, ಬಸವನಗುಡಿ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ಮೇರೆಗೆ ಅಧ್ಯಕ್ಷ ಡಿ.ಪಿ. ನವೀನ್ ಮತ್ತು ನಿರ್ದೇಶಕರ ವಿರುದ್ಧ ಎ್ಐಆರ್ ದಾಖಲಾಗಿದೆ. ಹೆಚ್ಚಿನ ತನಿಖೆ ಸಲುವಾಗಿ ಸಿಐಡಿಗೆ ಪ್ರಕರಣ ವರ್ಗಾವಣೆ ಮಾಡಲಾಗಿದೆ.

    ಠೇವಣಿದಾರರ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಆರೋಪಿಗಳ ಹೆಸರಿನಲ್ಲಿ ಇರುವ ಸ್ಥಿರಾಸ್ತಿ, ಚರಾಸ್ತಿಗಳಿಗೆ ಮಾಹಿತಿ ಇದ್ದರೆ, ಅರಮನೆ ರಸ್ತೆಯ ಕಾರ್ಲ್‌ಟನ್ ಭವನ ಸಿಐಡಿ ಘಟಕಕ್ಕೆ ನೀಡುವಂತೆ ಪೊಲೀಸರು ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts