More

    ಬಿರುಗಾಳಿ, ಮಳೆಗೆ ನೆಲಕಚ್ಚಿದ ತೆಂಗು, ಬಾಳೆ


    ಶ್ರೀರಂಗಪಟ್ಟಣ : ತಾಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ತಾಲೂಕಿನ ಕರೀಘಟ್ಟ ಸಮೀಪದ ವೆಂಕಟೇಶ್‌ರಾಜೇ ಅರಸ್ ಎಂಬುವರಿಗೆ ಸೇರಿದ ತೋಟದಲ್ಲಿನ ತೆಂಗು, ಬಾಳೆ, ಸೀಬೆ ಸೇರಿ ಬೀನ್ಸ್, ಕನಕಾಂಬರ ಗಿಡಗಳು ನೆಲಕಚ್ಚಿವೆ.


    ಸರ್ವೇ ನಂ.90ರ 1 ಎಕರೆ ಪ್ರದೇಶದಲ್ಲಿ ಬೆಳೆದಿದ್ದ 10ಕ್ಕೂ ಅಧಿಕ ತೆಂಗಿನ ಗಿಡಗಳು, ಸೀಬೆ ಗಿಡಗಳು, ಗೊನೆ ಕಚ್ಚಿದ್ದ ಬಾಳೆಗಿಡಗಳು, ನಾಲ್ಕು ದಿನದ ಹಿಂದೆ ನೆಡಲಾಗಿದ್ದ ಬೀನ್ಸ್ ಸಸಿಗಳು ಮಣ್ಣು ಪಾಲಾಗಿದ್ದರೆ, ಹೂ ಬಿಡುತ್ತಿದ್ದ ಕನಕಾಂಬರ ಗಿಡ ಹಾನಿಗೊಳಗಾಗಿವೆ.


    ರೈತ ವೆಂಕಟೇಶ್‌ರಾಜೇ ಅರಸ್, ಲಾಕ್‌ಡೌನ್‌ನಿಂದ ತತ್ತರಿಸಿಹೋಗಿದ್ದು, ಇದರೊಂದಿಗೆ ಕುಂಭದ್ರೋಣ ಮಳೆಗೆ ಫಲ ಬಿಡುವ ಹಂತಕ್ಕೆ ಬಂದಿದ್ದ ಬೆಳೆಗಳು ಹಾನಿಗೊಳಗಾಗಿವೆ. ಕೈಗೆ ಬಂದ ಫಸಲು ಬಾಯಿಗೆ ಬರಲಿಲ್ಲ, ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ತಹಸೀಲ್ದಾರ್‌ಗೆ ಮನವಿ ಮಾಡಿದ್ದಾರೆ.


    ಈ ಸಂಬಂಧ ತಹಸೀಲ್ದಾರ್ ಎಂ.ವಿ.ರೂಪಾ ಪರಿಶೀಲನೆ ನಡೆಸಿದ್ದು, ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts