More

    ಶ್ರೀರಾಮುಲು ಆಪ್ತನ ನಿಗೂಢ ಸಾವು; ತನಿಖೆಗೆ ರವಿ ಕೃಷ್ಣಾರೆಡ್ಡಿ ಆಗ್ರಹ

    ಬೆಂಗಳೂರು: ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರ ಆಪ್ತ ಸಹಾಯಕನ ಸಾವಿನ ಕುರಿತು ಎದ್ದಿರುವ ಅನುಮಾನ ಬಗೆಹರಿಸಲು ಕೂಲಂಕಷ ತನಿಖೆ ನಡೆಸಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಒತ್ತಾಯಿಸಿದ್ದಾರೆ.

    ಶ್ರೀರಾಮುಲು ಅವರ ಆಪ್ತ ಮಹೇಶ್ ರೆಡ್ಡಿ ಕಳೆದ ಏಪ್ರಿಲ್ 29ರಂದು ಬೆಂಗಳೂರಿನಲ್ಲಿ ಸಚಿವರೊಬ್ಬರ ಅಧಿಕೃತ ನಿವಾಸದಲ್ಲಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಅವರ ಶವವನ್ನು ರಾತ್ರೋರಾತ್ರಿ ಬಳ್ಳಾರಿಗೆ ಸಾಗಿಸಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಈ ಸಾವು ಸಹಜವೋ- ಅಸಹಜವೋ ಎಂಬ ಸತ್ಯಾಂಶ ಹೊರಬರಬೇಕು ಎಂದು ರವಿಕೃಷ್ಣಾರೆಡ್ಡಿ ಆಗ್ರಹಿಸಿದ್ದಾರೆ.

    ಇದನ್ನೂ ಓದಿರಿ ಕೋವಿಡ್ ಆಸ್ಪತ್ರೆಗೆ ಹೋದ ದಿನವೇ ಧ್ರುವ ಸರ್ಜಾ, ಪತ್ನಿ ಪ್ರೇರಣಾ ಡಿಸ್ಚಾರ್ಜ್​

    ಸಚಿವರೊಬ್ಬರ ಕೆಲ ಅವ್ಯವಹಾರಗಳ ರಹಸ್ಯ ಮಹೇಶ್ ರೆಡ್ಡಿಗೆ ಗೊತ್ತಿತ್ತು ಎಂಬ ಮಾಹಿತಿಯಿದೆ. ಅಸಹಜ ಸಾವು ಎಂಬ ವದಂತಿಯೂ ಕೇಳಿ ಬರುತ್ತಿದೆ ಎಂದಿರುವ ರವಿಕೃಷ್ಣಾ ರೆಡ್ಡಿ, ಮಹೇಶ್ ಸಾವಿನ ರಹಸ್ಯವನ್ನು ಬಯಲು ಮಾಡಲು ಸೂಕ್ತ ತನಿಖೆ ನಡೆಸಬೇಕು ಎಂದು ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡಿದ್ದಾರೆ. ತನಿಖೆ ಮಾಡಲೇಬೇಕೆಂದು ಆಗ್ರಹಿಸಿ ಸಿಎಂ, ಗೃಹ ಸಚಿವ, ಡಿಜಿ ಹಾಗೂ ಐಜಿಪಿ ಅವರಿಗೆ ಪತ್ರ ಬರೆದಿದ್ದಾರೆ.

    ಮಹೇಶ್​ ರೆಡ್ಡಿ ಸತ್ತ ಬಳಿಕ ಕೋವಿಡ್​ ಪರೀಕ್ಷೆಯನ್ನೂ ನಡೆಸದೆ, ರಾತ್ರೋರಾತ್ರಿ ಬಳ್ಳಾರಿಗೆ ಶವ ಸಾಗಿಸಿ ಅಂತ್ಯಸಂಸ್ಕಾರ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ರವಿ ಕೃಷ್ಣಾರೆಡ್ಡಿ, ಎಲ್ಲಕ್ಕೂ ತನಿಖೆಯೇ ಉತ್ತರ ನೀಡಬೇಕು ಎಂದಿದ್ದಾರೆ.

    ಕರೊನಾದಿಂದ ನಮ್ಮನ್ನು ದೇವರೇ ಕಾಪಾಡಬೇಕು ಎಂದು ಶ್ರೀರಾಮುಲು ಹೇಳಿದ್ದೇಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts