More

    ಶ್ರೀರಾಮಮಂದಿರ ಭಾರತೀಯರ ಹೆಮ್ಮೆ

    ಬೆಳಗಾವಿ: ಐದು ಶತಮಾನಗಳ ಸಂಘರ್ಷದಲ್ಲಿ ವಿಜಯ ಸಾಧಿಸಿ, ಹಿಂದು ಧರ್ಮದ ದಿಗ್ವಿಜಯದ ಸಂಕೇತವಾಗಿರುವ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರವು ನವಭಾರತ ಪುನುರುತ್ಥಾನದ ಮುನ್ನುಡಿ ಬರೆಯಲಿದೆ. ಅದು ರಾಮಮಂದಿರವಷ್ಟೇ ಅಲ್ಲ ಸಮಸ್ತ ಭಾರತೀಯರ ಹೆಮ್ಮೆ ಎಂದು ಆರ್ಷ ವಿದ್ಯಾಪೀಠದ ಚಿತ್‌ಪ್ರಕಾಶಾನಂದ ಸ್ವಾಮೀಜಿ ಹೇಳಿದರು.

    ಬೆಳಗಾವಿ ನಗರದ ಶ್ಯಾಮ್ ಪ್ರಸಾದ ಮುಖರ್ಜಿ ರಸ್ತೆಯ ಶಿವಂ ಪ್ಲಾಜಾದಲ್ಲಿ ಶುಕ್ರವಾರ ಜರುಗಿದ ಅಯೋಧ್ಯಾ ಶ್ರೀರಾಮ ಮಂದಿರ ನಿರ್ಮಾಣ ಸಮರ್ಪಣಾ ನಿಧಿ ಅಭಿಯಾನದ ಕಾರ್ಯಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಶತಮಾನಗಳ ಹಿಂದೆ ಕೆಲ ಮತಾಂಧರ ಆಡಳಿತದ ಅವಧಿಯಲ್ಲಿ ಸಮಸ್ತ ಹಿಂದು ಸಮಾಜ ಮತ್ತು ಸಂಸ್ಕೃತಿಗೆ ಧಕ್ಕೆ ಉಂಟಾಗಿದೆ. ಆದರೆ ಆ ಎಲ್ಲ ಸಂಘರ್ಷದ ನಡುವೆಯೂ ಹಿಂದು ಸಮಾಜ ತನ್ನ ಅಸ್ತಿತ್ವ ಕಳೆದುಕೊಳ್ಳದೆ ಇರುವ ಸಂಗತಿಯು, ಹಿಂದು ಧರ್ಮದ ಬಲವನ್ನು ಸಮಸ್ತ ವಿಶ್ವಕ್ಕೆ ಸಾರುತ್ತದೆ ಎಂದು ಹೇಳಿದರು. ವಿಎಚ್‌ಪಿ ಪ್ರಾಂತ ಸಹ ಕೋಶಾಧ್ಯಕ್ಷ ಕೃಷ್ಣ ಭಟ್ ಮಾತನಾಡಿ, ಜ.15 ರಿಂದ ಫೆ.5ರವರೆಗೆ ರಾಮ ಮಂದಿರ ನಿರ್ಮಾಣ ಸಮರ್ಪಣಾ ನಿಧಿ ಸಂಗ್ರಹ ಅಭಿಯಾನ ಜರುಗಲಿದೆ. ಬೆಳಗಾವಿ ನಗರವೂ ಸೇರಿ ಜಿಲ್ಲೆಯಲ್ಲಿ ಈಗಾಗಲೇ 500ಕ್ಕೂ ಅಧಿಕ ಸಭೆಗಳು ಜರುಗಿವೆ. 2 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಜ.17ರಂದು ಬೆಳಗಾವಿ ನಗರದಲ್ಲಿ ನಿಧಿ ಸಂಗ್ರಹ ಅಭಿಯಾನ ನಡೆಸಲಿದ್ದಾರೆ. ನಗರದ ಪ್ರತಿ ಮನೆ ಮನೆಗೂ ತೆರಳಿ ಪ್ರತಿಯೊಬ್ಬರಿಂದಲೂ ನಿಧಿ ಸಂಗ್ರಹಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. ನಾಗನಾಥ ಸ್ವಾಮೀಜಿ, ವಿಎಚ್‌ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ ಕದಂ, ನಗರ ಅಧ್ಯಕ್ಷ ಡಾ.ಬಾಗೋಜಿ, ನಗರ ಕಾರ್ಯದರ್ಶಿ ಹೇಮಂತ ಹವಳ, ಜಿಲ್ಲಾ ಸಂಚಾಲಕ ಭಾವುಕಣ್ಣಾ ಲೋಹಾರ್ ಮತ್ತು ನಗರ ಸಂಯೋಜಕ ಆದಿನಾಥ ಗಾವಡೆ, ಕ್ರೀಡಾ ಭಾರತಿ ಪ್ರಾಂತ ಸಂಚಾಲಕ ಅಶೋಕ ಶಿಂತ್ರೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts