More

    ಕಾಂಗ್ರೆಸಿಗೆ ಗ್ಯಾರಂಟಿ ಯೋಜನೆಗಳೇ ಶ್ರೀರಕ್ಷೆ

    ಮಂಗಳೂರು: ಕಾಂಗ್ರೆಸಿಗೆ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದ ಕೆಲಸಗಳು ಮತ್ತು ಗ್ಯಾರಂಟಿ ಯೋಜನೆಗಳೇ ಶ್ರೀರಕ್ಷೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

    ಲೋಕಸಭೆ ಚುನಾವಣೆಗೆ ದ.ಕ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ಆರ್. ಅವರು ಬುಧವಾರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಆಗಮಿಸಿದ್ದ ಸಚಿವರು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು.

    ಗ್ಯಾರಂಟಿ ಯೋಜನೆಯ ಲಾಭ ಪಡೆದವರು ನಮ್ಮ ಕೈಹಿಡಿಯಲಿದ್ದಾರೆ. ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಮೇಲೆ ವಿಶ್ವಾಸ, ನಂಬಿಕೆ ಬಂದಿದೆ. ಬಿಜೆಪಿಯವರು ಗ್ಯಾರಂಟಿ ಭರವಸೆಗಳನ್ನು ಹೇಳಿದ್ದು ಬಿಟ್ಟರೆ ಉಳಿಸಿಕೊಂಡಿಲ್ಲ ಎಂದರು.

    ದೇಶದಲ್ಲಿ ಕಾನೂನಾತ್ಮಕ ರೀತಿಯಲ್ಲಿ ಭ್ರಷ್ಟಾಚಾರ ಮಾಡಿರುವುದು ಬಿಜೆಪಿ. ಅತಿ ಹೆಚ್ಚು ಭ್ರಷ್ಟಾಚಾರ ಮಾಡಿರುವ ಪಾರ್ಟಿ ಇದ್ದರೆ ಅದು ಬಿಜೆಪಿ. ಕಾನೂನನ್ನು ದುರುಪಯೋಗ ಮಾಡಿಕೊಂಡು ಬಿಜೆಪಿ 12 ಸಾವಿರ ಕೋಟಿ ರೂ. ಲೂಟಿ ಮಾಡಿದೆ. ಐಟಿ, ಇಡಿಯಂತಹ ತನಿಖಾ ಸಂಸ್ಥೆಗಳನ್ನು ಮುಂದಿಟ್ಟು ನೀವು ಹಣ ಕೊಡದೇ ಇದ್ದರೆ ರೈಡ್ ಮಾಡ್ತೀವಿ ಎಂದು ಹೇಳಿ ಕೇಸು ಹಾಕಿಸಿ, ಬಳಿಕ ಹಣ ಕೊಟ್ಟ ಮೇಲೆ ಕೇಸನ್ನು ಮುಚ್ಚಿ ಹಾಕಿದ್ದಾರೆ. ಇದನ್ನೆಲ್ಲ ದೇಶದ ಜನರು ನೋಡುತ್ತಿದ್ದು, ಈ ಬಾರಿ ಉತ್ತರ ನೀಡಲಿದ್ದಾರೆ. ಈ ಸಲದ ಚುನಾವಣೆ ಅತ್ಯಂತ ಅಸಮಂಜಸ ಸ್ಥಿತಿಯಲ್ಲಿ ನಡೆಯುತ್ತಿದ್ದು, ಈ ಹಿಂದೆ ಯಾವತ್ತೂ ಈ ರೀತಿ ಆಗಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಎಂದಿದ್ದನ್ನು ಮಾಡಿದ್ದಾರೆಯೇ? ಡಾಲರಿಗೆ 45 ರೂಪಾಯಿ ಮಾಡ್ತೀವಿ ಎಂದಿದ್ದರು, ಈಗ ಡಾಲರಿಗೆ 83 ರೂ. ಆಗಿದೆ. ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಎಂದಿದ್ದರು. ರೈತರ ಸ್ಥಿತಿ ಏನಾಗಿದೆ, ಇವರು ಯಾವಾದ್ರೂ ಹೇಳಿದ್ದನ್ನು ಮಾಡಿದ್ದು ಇದೆಯೇ? ಬಿಜೆಪಿ ಗ್ಯಾರಂಟಿಗೆ ಬೆಲೆ ಇಲ್ಲ, ಕಾಂಗ್ರೆಸ್ ಗ್ಯಾರಂಟಿಗೆ ಬೆಲೆ ಇದೆ. ನಿನ್ನೆ ಅಮಿತ್ ಷಾ ಬಂದು ಸುಳ್ಳನ್ನೇ ಹೇಳಿಕೊಂಡು ಹೋಗಿದ್ದಾರೆ. ಬರ ಪರಿಹಾರ ಕೊಡದೆ ಸುಳ್ಳು ಹೇಳಿ ನಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts