More

    ಶ್ರೀನಿವಾಸನ್​ ಸ್ವಾಮಿಗೆ ಪ್ರತಿಷ್ಠಿತ ಐಎಎ ಗೋಲ್ಡನ್​ ಕಂಪಾಸ್​ ಪ್ರಶಸ್ತಿ ಪ್ರದಾನ

    ಮುಂಬೈ: ಮಾರ್ಕೆಟಿಂಗ್, ಜಾಹೀರಾತು ಮತ್ತು ಮೀಡಿಯಾ ಇಂಡಸ್ಟ್ರಿ ಕ್ಷೇತ್ರದಲ್ಲಿ ವಿಶ್ವ ವೇದಿಕೆಗೆ ಗಣನೀಯ ಕೊಡುಗೆ ನೀಡಿದ ಲೆಜೆಂಡರಿ ಶ್ರೀನಿವಾಸನ್​ ಸ್ವಾಮಿ ಅವರಿಗೆ ಇಂಟರ್ನ್ಯಾಷನಲ್ ಅಡ್ವರ್ಟೈಸಿಂಗ್ ಅಸೋಸಿಯೇಷನ್ (ಐಎಎ) ಪ್ರತಿಷ್ಠಿತ ಐಎಎ ಗೋಲ್ಡನ್​ ಕಂಪಾಸ್​ ಪ್ರಶಸ್ತಿ ನೀಡಿ ಗೌರವಿಸಿದೆ.

    ಮಲೇಷಿಯಾದ ಪೆನಾಂಗ್​ನಲ್ಲಿ ನಡೆದ 45ನೇ ಐಎಎ ವಿಶ್ವ ಸಮ್ಮೇಳನದಲ್ಲಿ ಪೆನಾಂಗ್​ ಗವರ್ನರ್​ ಟನ್​ ಅಹ್ಮದ್​ ಫಜಿ ಅಬ್ದುಲ್​ ರಜಾಕ್​ ಅವರು ಶ್ರೀನಿವಾಸನ್​ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ, ಅಭಿನಂದಿಸಿದರು.

    ಭಾರತೀಯ ಉದ್ಯಮದ ಪ್ರಮುಖರಿಗೆ ಈ ಪ್ರಶಸ್ತಿ ನೀಡುತ್ತಿರುವುದು ಇದೇ ಮೊದಲು. ಇದಕ್ಕೂ ಮುನ್ನ ಒಗಿಲ್ವಿ ಆ್ಯಂಡ್​ ಮ್ಯಾಥರ್​ ಕಂಪನಿಯ ಚೇರ್ಮನ್​ ಶೆಲ್ಲಿ ಲಝಾರಸ್​, ಯೂನಿಲಿವರ್​ ಕಂಪನಿ ಸಿಇಒ ಪೌಲ್​ ಪೊಲ್​ಮ್ಯಾನ್​, ಎಕಾನಾಮಿಸ್ಟ್​ ಗ್ರೂಪ್​ ಅಧ್ಯಕ್ಷ ಪೌಲ್​ ರೋಸ್ಸಿ, ಪ್ರೊಕ್ಟರ್​ ಆ್ಯಂಡ್​ ಗ್ಯಾಂಬಲ್​ ಕಂಪನಿಯ ಚೀಫ್​ ಬ್ರ್ಯಾಂಡ್​ ಆಫೀಸರ್​ ಮಾರ್ಕ್​ ಪ್ರಿಟ್ಚಾರ್ಡ್​ ಮತ್ತು ಬಿಬಿಡಿಒ ವರ್ಲ್​ವೈಡ್​ ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಆ್ಯಂಡ್ರಿವ್​ ರಾಬರ್ಟ್​ಸನ್​ ಸೇರಿದಂತೆ ಮುಂತಾದವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದೆ.

    ಶ್ರೀನಿವಾಸನ್​ ಸ್ವಾಮಿ ಅವರು ಸುಂದರ್​ ಸ್ವಾಮಿ ಎಂದು ಪ್ರಖ್ಯಾತರು. ಇವರು ಆರ್​.ಕೆ. ಸ್ವಾಮಿ ಲಿಮಿಟೆಡ್​ನ ಚೇರ್ಮನ್​ ಆ್ಯಂಡ್​ ಮ್ಯಾನೇಜಿಂಗ್​ ಡೈರೆಕ್ಟರ್​ ಆಗಿದ್ದಾರೆ. ಇದೊಂದು ಇಂಟಿಗ್ರೇಟೆಡ್​ ಮಾರ್ಕೆಟಿಂಗ್​ ಸರ್ವೀಸ್​ ಕಂಪನಿಯಾಗಿದ್ದು, ಮುಂದಿನ ವಾರದ ಆರಂಭದಲ್ಲಿ ಭಾರತೀಯ ಷೇರು ಮಾರುಕಟ್ಟೆಗಳ ಮುಖ್ಯ ಷೇರುಗಳಲ್ಲಿ ಪಟ್ಟಿ ಮಾಡಲಾಗುತ್ತದೆ. ಶ್ರೀನಿವಾಸನ್​ ಅವರು ಪ್ರಸ್ತುತ ಏಷ್ಯನ್ ಫೆಡರೇಶನ್ ಆಫ್ ಅಡ್ವರ್ಟೈಸಿಂಗ್ ಅಸೋಸಿಯೇಷನ್ಸ್ (ಎಎಫ್​ಎಎ) ಮತ್ತು ದಿ ಆಡಿಟ್ ಬ್ಯೂರೋ ಆಫ್​ ಸರ್ಕ್ಯುಲೇಷನ್ಸ್ (ಎಬಿಸಿ)ನ ಚೇರ್ಮನ್​ ಆಗಿದ್ದಾರೆ.

    ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀನಿವಾಸನ್, ನನ್ನ ಕಂಪನಿಯಲ್ಲಿನ ಎಲ್ಲ ವೃತ್ತಿಪರರು ಮತ್ತು ಉದ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ನನ್ನನ್ನು ಬೆಂಬಲಿಸಿದವರ ಪರವಾಗಿ ಈ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದ್ದಕ್ಕೆ ತುಂಬಾ ಖುಷಿಯಾಗಿದೆ. ಈ ಪ್ರಶಸ್ತಿಯನ್ನು ನನ್ನ ತಂದೆ ದಿವಂಗತ ಆರ್​.ಕೆ. ಸ್ವಾಮಿ ಅವರಿಗೆ ಅರ್ಪಿಸುತ್ತೇನೆ. ಉದ್ಯಮಕ್ಕೆ ಮೀಸಲಿಟ್ಟ ಯಾವುದೇ ಸಮಯವು ವ್ಯರ್ಥವಾಗುವುದಿಲ್ಲ. ಏಕೆಂದರೆ ಅದು ನಮಗೆ ಆಹಾರವನ್ನು ನೀಡುವ ಕೈಯಾಗಿದೆ ಎಂದು ನಮ್ಮ ತಂದೆ ಅವರು ಒಮ್ಮೆ ನನಗೆ ಹೇಳಿದ್ದರು ಎಂದರು.

    ಶ್ರೀನಿವಾಸನ್​ ಸ್ವಾಮಿ ಅವರು 1998ರ ಅಕ್ಟೋಬರ್​ನಿಂದ ಅಡ್ವರ್ಟೈಸಿಂಗ್ ಏಜೆನ್ಸೀಸ್​ ಅಸೋಸಿಯೇಷನ್ ಆಫ್​ ಇಂಡಿಯಾ(ಎಎಎಐ)ದ ಕಾರ್ಯಕಾರಿ ಸಮಿತಿಗೆ ಸೇರಿದಾಗಿನಿಂದ ಮಾರ್ಕೆಟಿಂಗ್ ಸೇವೆಗಳ ಉದ್ಯಮದಲ್ಲಿ ಧೀಮಂತರಾಗಿದ್ದಾರೆ. ಅಧ್ಯಕ್ಷರಾಗಿ ಸತತ ಮೂರು ವರ್ಷಗಳ ಕಾಲ ಎಎಎಐಗೆ ಸೇವೆ ಸಲ್ಲಿಸಿದ ಏಕೈಕ ವ್ಯಕ್ತಿಯಾಗಿದ್ದಾರೆ. 6000ಕ್ಕೂ ಹೆಚ್ಚು ಮಕ್ಕಳನ್ನು ಉಪಚರಿಸುತ್ತಿರುವ ಎರಡು ಶಾಲಾ ಸಂಘಗಳ ಅಧ್ಯಕ್ಷರಾಗಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೊಡ್ಡ ಚಾರಿಟಬಲ್ ಆಸ್ಪತ್ರೆಯನ್ನು ನಡೆಸಲು ಸಹಾಯ ಮಾಡುತ್ತಿದ್ದಾರೆ. ವೈದಿಕ ಶಿಕ್ಷಣ ಮತ್ತು ಇತರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

    ಆರು ವರ್ಷದ ಹಿಂದಿನ ಆ್ಯಪಲ್​​ ಸಾಂಗ್ ಮೋಡಿ​! ಶಿಕ್ಷಕನಿಗೆ ಹರಿದು ಬಂತು ಹಣದ ಹೊಳೆ

    ರಾಜ್ಯಸಭಾ ಸದಸ್ಯರಾಗಿ ಸುಧಾಮೂರ್ತಿ ನೇಮಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts