More

    ವೀಣಾಶಾರದೆಯಾಗಿ ಕಂಗೊಳಿಸಿದ ಶೃಂಗೇರಿ ಶಾರದೆ

    ಶೃಂಗೇರಿ: ನವರಾತ್ರಿ ಉತ್ಸವದ ಪ್ರಯುಕ್ತ ಶುಕ್ರವಾರ ಶ್ರೀಮಠದಲ್ಲಿ ಸರಸ್ವತ್ಯಾವಾಹನೆ ನೆರವೇರಿತು. ಶ್ರೀ ಶಾರದೆ ಕೈಯಲ್ಲಿ ವೀಣೆ ಧರಿಸಿ ಭಕ್ತರನ್ನು ಅನುಗ್ರಹಿಸಿದಳು. ವೀಣಾಶಾರದಾ ಅಲಂಕಾರವನ್ನು ನೋಡಲು ನಾನಾಪ್ರಾಂತ್ಯಗಳಿಂದ ಭಕ್ತರು ಆಗಮಿಸಿದರು.
    ಧಾರ್ಮಿಕ ಕಾರ್ಯಕ್ರಮಗಳ ಪ್ರಯುಕ್ತ ಸೂತಸಂಹಿತೆ,ಲಕ್ಷ್ಮೀನಾರಾಯಣ ಹೃದಯ, ದುರ್ಗಾ ಸಪ್ತಶತಿ ಪಾರಾಯಣಗಳು ನೆರವೇರಿತು.ದುರ್ಗಾಜಪ,ಭುವನೇಶ್ವರಿ ಜಪ, ಶ್ರೀಸೂಕ್ತ ಜಪಗಳು , ಶ್ರೀಚಂದ್ರಮೌಳೀಶ್ವರ ಸ್ವಾಮಿಗೆ ಶತರುದ್ರಾಭೀಷೇಕ, ಜಗನ್ಮಾತೆ ಅವಾಸಸ್ಥಾನವೆಂದು ಶಾಸದಲ್ಲಿ ತಿಳಿಸಿರುವ ಶ್ರೀ ಚಕ್ರಕ್ಕೆ ನವಾವರಣಪೂಜೆ,ಸುವಾಸಿನೀ ಹಾಗೂ ಕುಮಾರೀಪೂಜೆ ನೆರವೇರಿತು. ಜಗದ್ಗುರುಗಳು ಶ್ರೀ ಶಾರದೆಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
    ಧರೇಕೊಪ್ಪ ಗ್ರಾಪ ಭಕ್ತಾದಿಗಳು ಬೀದಿ ಉತ್ಸವದಲ್ಲಿ ಭಾಗವಹಿಸಿದ್ದರು. ಶ್ರೀ ರಾಮಸೇವಾ ಸಮಿತಿ ಹೊಳೆಕೊಪ್ಪ, ವೆಂಕಟೇಶ್ವರ ಯಕ್ಷಗಾನ ಕಲಾಸಂಘ ಹೊನ್ನವಳ್ಳಿ,ಹಗಡೂರು, ಮಲ್ಲಿಕಾರ್ಜುನ ಸೇವಾ ಸಮಿತಿ, ಹೊಳೆಕೊಪ್ಪ ಶ್ರೀ ರಾಮಸ್ವಸಹಾಯ ಸಂಘ, ಕೆಸರುಕುಡಿಗೆ, ಹಂಚರಿಕೆ ಜಾನಪದ ತಂಡಗಳು, ಶ್ರೀ ವಿಶ್ವಕರ್ಮ ಸೇವಾ ಸಂಘ, ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ, ತಾಲೂಕು ಮರಾಠಿ ಸೇವಾ ಸಂಘ ಮುಂತಾದ ಸಂಘ-ಸಂಸ್ಥೆಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಉತ್ಸವದಲ್ಲಿ ಭಾಗಿಯಾದರು.
    ವೈವಿಧ್ಯಮಯ ಜಾನಪದ ಕಲಾತಂಡದ ಸ್ತಬ್ಧ ಚಿತ್ರಗಳು ನೋಡುಗರ ಗಮನ ಸೆಳೆದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿದ್ವಾನ್ ಬಾಲುಮಸ್ತಿ ಮತ್ತು ವೃಂದದವರಿಂದ ವೀಣಾವಾದನ ನೆರವೇರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts