More

    ಮಾ.2ರಂದು ಶಾರದಾಂಬೆ ರಥೋತ್ಸವ

    ಶೃಂಗೇರಿ: ಶಾರದಾಂಬೆ ರಥೋತ್ಸವದ ಅಂಗವಾಗಿ ಶ್ರೀ ಮಠದಲ್ಲಿ ಫೆ.26ರಿಂದ ಮಾ.4ರವರೆಗೆ ಹಲವು ಧಾರ್ವಿುಕ ಕಾರ್ಯಕ್ರಮ ಆಯೋಜಿಸಲಾಗಿದೆ.

    26ರಂದು ಬೆಳಗ್ಗೆ ಶಕ್ತಿಗಣಪತಿ ಸನ್ನಿಧಿಯಲ್ಲಿ ಪೂಜೆ ಹಾಗೂ ಪ್ರಾರ್ಥನೆ, 27ರಂದು ರಥೋತ್ಸವ ಧ್ವಜಾರೋಹಣ, ಜಪ, ಪಾರಾಯಣ ಆರಂಭವಾಗಲಿದೆ. ಸಹಸ್ರ ಮೋದಕ ಗಣಪತಿ ಹೋಮ, ಯಾಗಶಾಲಾ ಪ್ರವೇಶ, ಜಗದ್ಗುರು ಮಹಾಸ್ವಾಮಿಗಳಿಂದ ಶತಚಂಡಿಯಾಗದ ಸಂಕಲ್ಪ, ಚಂಡಿಪಾರಾಯಣ ನಡೆಯಲಿದೆ.

    28ರಂದು ಚಂಡೀಪಾರಾಯಣಿ, ಶ್ರೀ ಬ್ರಹ್ಮದೇವರಿಗೆ ವಿಶೇಷ ಪೂಜೆ ಮತ್ತು ಮಂಗಳಾರತಿ, ಬ್ರಹ್ಮ ಸಂತರ್ಪಣೆ, ಮಾ.1ರಂದು ಬೆಳಗ್ಗೆ ಚಂಡೀಪಾರಾಯಣಿ, ಶ್ರೀ ಭವಾನಿ ಅಮ್ಮನವರು ಶ್ರೀಶಾರದಾ ಸನ್ನಿಧಿಗೆ ಉತ್ಸವದಲ್ಲಿ ಚಿತೆôಸಿದ ನಂತರ ಮಧ್ಯಾಹ್ನ 12 ಗಂಟೆಗೆ ಶ್ರೀ ಶಾರದೆಗೆ ಯತಿವರ್ಯರಿಂದ ವಿಶೇಷ ಪೂಜೆ, ಮಹಾ ಮಂಗಳಾರತಿ, ಒಂಭತ್ತು ಸುವಾಸಿನಿಯರಿಗೆ ಪೂಜೆ, ಸಂಜೆ ಶ್ರೀ ಶಾರದೆ ರಾಜಬೀದಿ ಉತ್ಸವ ನಡೆಯಲಿದೆ.

    ಮಾ.2ರಂದು ಚಂಡೀಪಾರಾಯಣಿ, ಬೆಳಗ್ಗೆ 11ಕ್ಕೆ ಜಗದ್ಗುರುಗಳ ಉಪಸ್ಥಿತಿಯಲ್ಲಿ ಶ್ರೀ ಶಾರದಾಂಬಾ ಮಹಾರಥೋತ್ಸವ ನಡೆಯಲಿದೆ. 3ರಂದು ಗುರುಗಳ ಉಪಸ್ಥಿತಿಯಲ್ಲಿ ಶತಚಂಡಿಯಾಗದ ಪೂರ್ಣಾಹುತಿ, ಓಕಳಿ ಉತ್ಸವ, ತೆಪ್ಪೋತ್ಸವ ನಡೆಯಲಿದೆ. 4ರಂದು ರಥೋತ್ಸವದ ಅಂಗವಾಗಿ ಮಹಾಸಂಪ್ರೋಕ್ಷಣೆ ನೆರವೇರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts