More

    ಕಾಮಗಾರಿಗಳಿಗೆ ಕರೊನಾ ತೊಡಕು, ಕಾರ್ವಿುಕರಿಲ್ಲದೆ ಅರ್ಧಕ್ಕೆ ನಿಂತ ಕಾಮಗಾರಿಗಳು

    ಶೃಂಗೇರಿ: ಲಾಕ್​ಡೌನ್​ನಿಂದ ವಲಸೆ ಕಾರ್ವಿುಕರು ತಮ್ಮ ತಮ್ಮ ಊರುಗಳಿಗೆ ವಾಪಸಾಗಿರುವುದರಿಂದ ತಾಲೂಕಿನಲ್ಲಿ ಬಹುತೇಕ ನಿರ್ಮಾಣ ಹಂತದ ಕಾಮಗಾರಿ, ರಸ್ತೆ ಡಾಂಬರೀಕರಣ, ತೋಟದ ಕೆಲಸ ಕಾರ್ಯಗಳಿಗೆ ತೊಡಕು ಉಂಟಾಗಿದೆ.

    ಕಾರ್ವಿುಕರಿಲ್ಲದೆ ಗುತ್ತಿಗೆದರರು ಕಾಮಗಾರಿ ಪೂರ್ಣಗೊಳಿಸಲಾಗದೆ ಪರದಾಡುವಂತಾಗಿದೆ. ತಾಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವಲಸೆ ಕಾರ್ವಿುಕರನ್ನು ಬಳಸಿಕೊಳ್ಳಲಾಗುತ್ತಿತ್ತು. ಇಲ್ಲಿನ ತೋಟದ ಕೆಲಸಗಳಿಗೂ ಉತ್ತರ ಕರ್ನಾಟಕ ಮೂಲದ ಕಾರ್ವಿುಕರನ್ನು ಬಳಸಿಕೊಳ್ಳಲಾಗುತ್ತದೆ. ಕರೊನಾ ಲಾಕ್​ಡೌನ್​ನಿಂದ ಕಾರ್ವಿುಕರು ಸ್ವ ಗ್ರಾಮಗಳಿಗೆ ತೆರಳಿರುವುದರಿಂದ ಕಾರ್ವಿುಕರ ಕೊರತೆ ಬಾಧಿಸುತ್ತಿದೆ.

    ಕಾಮಗಾರಿ ಸ್ಥಗಿತ: 40 ದಿನಗಳ ಹಿಂದೆ ಕರೊನಾ ಲಾಕ್​ಡೌನ್ ಘೊಷಿಸಿದ್ದರಿಂದ ಗುತ್ತಿಗೆದಾರರು ವರ್ಷಾಂತ್ಯದೊಳಗೆ ಪೂರ್ಣಗೊಳಿಸಬೇಕಾದ ವಿವಿಧ ಕಾಮಗಾರಿಗಳನ್ನು ಅರ್ಧಕ್ಕೇ ನಿಲ್ಲಿಸಿದ್ದರು. ಈಗ ಲಾಕ್​ಡೌನ್ ಸಡಿಲವಾದರೂ ಕಾರ್ವಿುಕರಿಲ್ಲದೆ ಕೆಲಸ ಮುಂದುವರಿಸಲಾಗುತ್ತಿಲ್ಲ. ಸದ್ಯದಲ್ಲೇ ಮಳೆಗಾಲ ಬರುವುದರಿಂದ ಯೋಜನೆಗಳನ್ನು ಕೂಡಲೇ ಪೂರ್ಣಗೊಳಿಸುವ ಒತ್ತಡಕ್ಕೆ ಗುತ್ತಿಗೆದಾರರು ಸಿಲುಕಿದ್ದಾರೆ.

    ದೊಡ್ಡ ಗುತ್ತಿಗೆದಾರರಲ್ಲಿ ಕಾಂಕ್ರಿಟ್, ಡಾಂಬರ್ ಹಾಕಿಸುವುದು ಮುಂತಾದ ಅಗತ್ಯ ಕೆಲಸಗಳಿಗೆ ಯಂತ್ರಗಳನ್ನು ಬಳಸುತ್ತಾರೆ. ಸಣ್ಣ ಗುತ್ತಿಗೆದಾರರು ಕೈ ಕೆಲಸದ ಮೂಲಕ ಮಾಡಿಸಬೇಕು. ವಲಸೆ ಕಾರ್ವಿುಕರು ಸಿಗದಿದ್ದರೆ ಅರ್ಧ ಮಾಡಿರುವ ಕೆಲಸ ಪೂರ್ಣಗೊಳಿಸುವುದು ಕಷ್ಟ. ಇದರಿಂದ ಬಿಲ್ ಮಾಡಲಾಗದೇ ಆರ್ಥಿಕ ತೊಂದರೆ ಉಂಟಾಗಲಿದೆ ಎನ್ನುವುದು ಸಣ್ಣ ಗುತ್ತಿಗೆದಾರರಾದ ಅಶೋಕ್, ವಿನಯ್, ಮಂಜು ಅವರ ಅಭಿಮತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts