More

    ಸಾಂಪ್ರದಾಯಿಕ ಪದ್ದತಿಯಲ್ಲಿ ನಾಟಿ, ಅಧುನಿಕ ಪದ್ದತಿಯಲ್ಲಿ ಕಟಾವು

    ಶೃಂಗೇರಿ: ತಾಲೂಕಿನಲ್ಲಿ ಭತ್ತ ಬೆಳೆಯುವ ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿತವಾಗುತ್ತಿದ್ದರೂ, ಈ ವರ್ಷ ಕರೊನಾ ಹಿನ್ನಲೆಯಲ್ಲಿ ಹಲವು ವರ್ಷಗಳಿಂದ ಬೀಳು ಬಿಟ್ಟದ್ದ ಶೇ.70 ರಷ್ಟು ಗದ್ದೆಗಳಲ್ಲಿ ನಾಟಿ ಕಾರ್ಯ ನಡೆಸಲಾಗಿದೆ.

    ಆಧುನಿಕ ಯಂತ್ರಗಳಿಂದ ನಾಟಿ ಮಾಡುವುದು ಮಲೆನಾಡಿನ ವಾತಾವರಣಕ್ಕೆ ಹೊಂದಾಣಿಕೆಯಾಗದ ಹಿನ್ನಲೆಯಲ್ಲಿ ಬಹುತೇಕ ಭತ್ತದ ನಾಟಿ ಕಾರ್ಯ ಕಾರ್ವಿುಕರಿಂದಲೇ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಹೆಚ್ಚು ಮಳೆಯಾಗುವುದರಿಂದ ಯಾಂತ್ರಿಕರಣ ನಾಟಿಯಲ್ಲಿ ನೀರಿನ ನಿರ್ವಹಣೆ ಮಾಡಿದರೆ ಭತ್ತದ ಸಸಿ ಕೊಳೆಯುತ್ತದೆ. ಕೃಷಿ ಇಲಾಖೆ ಡ್ರಂ ಸೀಡರ್ ಪದ್ದತಿ ಪರಿಚಯಿಸಿದ್ದರೂ ನೀರನ್ನು ನಿಯಂತ್ರಿಸುವುದು ಕಷ್ಟವಾಗಿದೆ. ಅಲ್ಲದೆ ಈ ಹಂತದಲ್ಲಿ ಕೊಳೆಯುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಭತ್ತ ಕಟಾವಿಗೆ ಮಾತ್ರ ಪ್ರಸ್ತುತ ಯಂತ್ರಗಳ ಮೊರೆ ಹೋಗುತ್ತಿದ್ದಾರೆ.

    ತಾಲೂಕಿನಲ್ಲಿ ಭತ್ತ ಕಟಾವಿಗೆ ಬರುವ ವೇಳೆಗೆ ಅಡಕೆ, ಕಾಫಿ ಕೊಯ್ಲು ಪ್ರಾರಂಭವಾಗುತ್ತದೆ. ಭತ್ತದ ಕೊಯ್ಲು ಬಿಸಿಲಿನಲ್ಲಿ ಕಾರ್ವಿುಕರು ಬಗ್ಗಿ ಕಟಾವು ಮಾಡಬೇಕಾಗಿರುವುದರಿಂದ ಕಟಾವಿಗೆ ಸರಿಯಾದ ಸಮಯದಲ್ಲಿ ಕಾರ್ವಿುಕರು ದೊರಕುತ್ತಿಲ್ಲ. ಕೆಲವೇ ವರ್ಷದ ಹಿಂದೆ ಕೊಯ್ಲು ಮಾಡಲು ಯಂತ್ರಗಳು ಲಭ್ಯವಾದಾಗ ಕಟಾವಿನ ಸಮಸ್ಯೆ ಬಹುತೇಕ ಪರಿಹಾರವಾಗಿತ್ತು.ಇತ್ತೀಚಿನ ವರ್ಷದಲ್ಲಿ ಕಂಬೈನ್ಡ್ ಹಾರ್ವೆಸ್ಟರ್ ಮಲೆನಾಡಿನಲ್ಲಿ ಹೆಚ್ಚು ಬಳಕೆ ಹಾಗೂ ಜನಪ್ರಿಯವಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts