More

    ‘ನೀವಿಲ್ಲದೆ ಕಾಶ್ಮೀರ ಅಪೂರ್ಣ…ಮರಳಿ ಬನ್ನಿ, ಕಾಯುತ್ತಿದ್ದೇವೆ’ …ಶಿವರಾತ್ರಿ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತರನ್ನು ನೆನಪಿಸಿಕೊಂಡ ಮೇಯರ್​ ಜುನೈದ್ ಅಜೀಮ್ ಮಾಟ್ಟು

    ಶ್ರೀನಗರ: ಮಹಾಶಿವರಾತ್ರಿ ಹಬ್ಬವನ್ನು ಕಾಶ್ಮೀರದಲ್ಲಿ ಹೈರಾತ್​ ಎಂದು ಕರೆಯಲಾಗುತ್ತದೆ. ಕಾಶ್ಮೀರಿ ಪಂಡಿತರು ಈ ಹಬ್ಬವನ್ನು ದೇಶದ ಉಳಿದ ಭಾಗಗಳಲ್ಲಿ ಆಚರಿಸುವ ಒಂದು ದಿನದ ಮೊದಲು ಆಚರಿಸುತ್ತಿದ್ದರು.

    ಈ ಬಾರಿ ಫೆ.21ರಂದು ಮಹಾಶಿವರಾತ್ರಿ ಹಬ್ಬ ಇದೆ. ಅಂದರೆ ಕಾಶ್ಮೀರದ ಹಿಂದುಗಳಿಗೆ ಇವತ್ತೇ ಹಬ್ಬ. ಒಂದು ಕಾಲದಲ್ಲಿ ಅಲ್ಲಿ ಸಂಭ್ರಮದಿಂದ ಶಿವರಾತ್ರಿ ಆಚರಿಸುತ್ತಿದ್ದ ಕಾಶ್ಮೀರಿ ಪಂಡಿತರು ಈಗಿಲ್ಲ.
    ಶ್ರೀನಗರ ಮೇಯರ್​ ಜುನೈದ್ ಅಜೀಮ್ ಮಾಟ್ಟು ಅವರು ಶಿವರಾತ್ರಿಯ ಈ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತರನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದ್ದಾರೆ.

    ಕಾಶ್ಮೀರಿ ಪಂಡಿತ್​ ಸಹೋದರ, ಸಹೋದರಿಯರ ಕೆಚ್ಚೆದೆಯ ಹೋರಾಟವನ್ನು ಈ ಹೈರಾತ್​ ಹಬ್ಬದಂದು ನೆನಪಿಸಿಕೊಳ್ಳಬೇಕು. ನಾವೆಲ್ಲರೂ ನಿಮ್ಮೊಂದಿಗೆ ನಿಲ್ಲುತ್ತೇವೆ, ನಿಮ್ಮ ಕಷ್ಟಕ್ಕೆ ಜತೆಯಾಗುತ್ತೇವೆ ಎಂದು ಅವರಿಗೆ ಹೇಳಬೇಕು ಎಂದು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.

    ಅಲ್ಲದೆ, ನೀವಿಲ್ಲದೆ ಕಾಶ್ಮೀರ ಅಪರಿಪೂರ್ಣವಾಗಿದೆ. ನೀವೆಲ್ಲ ಗೌರವಯುತವಾಗಿಯೇ ಹಿಂದಿರುಗುತ್ತೀರಿ ಎಂಬ ನಂಬಿಕೆಯಿಂದ ಕಾಯುತ್ತಿದ್ದೇವೆ ಎಂದು ಮೆಯರ್​ ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ.  ಮಾಟ್ಟು ಅವರು ಜಮ್ಮು-ಕಾಶ್ಮೀರ ಪೀಪಲ್​ ಕಾನ್ಫರೆನ್ಸ್​ನ ಹಿರಿಯ ವಕ್ತಾರರೂ ಹೌದು.

    ಕಾಶ್ಮೀರ ಪಂಡಿತರ ಹೋರಾಟ ಕಥನ ಎಲ್ಲರಿಗೂ ಗೊತ್ತು. ಕಾಶ್ಮೀರದಲ್ಲಿನ ಉಗ್ರವಾದದಿಂದ ಅವರು ಪಟ್ಟ ಚಿತ್ರ ಹಿಂಸೆ ಅಷ್ಟಿಷ್ಟಲ್ಲ. ಕೊಡಬಾರದ ಕಷ್ಟ ಕೊಟ್ಟು ಕಾಶ್ಮೀರದಿಂದ ಹೊರಹಾಕಲಾಯಿತು. ಚಿತ್ರಹಿಂಸೆ ತಾಳಲಾರದೆ 1989-90ರ ಸಮಯದಲ್ಲಿ ಸುಮಾರು ಏಳು ಲಕ್ಷ ಕಾಶ್ಮೀರಿ ಪಂಡಿತರು ಅಲ್ಲಿಂದ ಹೊರಗೆ ಬಂದಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts