ಜೊಹಾನ್ಸ್‌ಬರ್ಗ್: ವೇಗಿ ಲುಂಗಿ ಎನ್‌ಗಿಡಿ (26ಕ್ಕೆ 3) ಮಾರಕ ದಾಳಿ ನಡುವೆಯೂ ಆರಂಭಿಕ ದಿಮುತ್ ಕರುಣರತ್ನೆ (91*ರನ್, 116 ಎಸೆತ, 17 ಬೌಂಡರಿ) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ಶ್ರೀಲಂಕಾ ತಂಡ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಸೋಲು ತಪ್ಪಿಸಿಕೊಳ್ಳಲು ಹೋರಾಡುತ್ತಿದೆ. ಸದ್ಯಕ್ಕೆ ಲಂಕಾ ಇನಿಂಗ್ಸ್ ಸೋಲಿನ ಭೀತಿಯಿಂದ ಪಾರಾಗಿದೆ. ದ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶ್ರೀಲಂಕಾ ತಂಡ 2ನೇ ದಿನದಂತ್ಯಕ್ಕೆ 2ನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 150 ರನ್‌ಗಳಿಸಿದ್ದು, 5 ರನ್ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ: ಶ್ರೀಲಂಕಾ ಪ್ರವಾಸದ ಆರಂಭದಲ್ಲೇ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ಶಾಕ್..!
ಇದಕ್ಕೂ ಮೊದಲು 1 ವಿಕೆಟ್‌ಗೆ 148 ರನ್‌ಗಳಿಂದ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ, ಡೀನ್ ಎಲ್ಗರ್ (127ರನ್, 163 ಎಸೆತ, 22 ಬೌಂಡರಿ) ಶತಕದಾಟದ ನಡುವೆ 302 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ ದ.ಆಫ್ರಿಕಾ 145 ರನ್‌ಗಳ ಇನಿಂಗ್ಸ್ ಮುನ್ನಡೆ ಸಾಧಿಸಿತು. ಶ್ರೀಲಂಕಾದ ವಿಶ್ವ ಫೆರ್ನಾಂಡೊ (101ಕ್ಕೆ 5) ದ.ಆಫ್ರಿಕಾ ಓಟಕ್ಕೆ ಬ್ರೇಕ್ ಹಾಕಿದರು. ಎರಡು ಪಂದ್ಯಗಳ ಸರಣಿಯಲ್ಲಿ ದ.ಆಫ್ರಿಕಾ 1-0 ಯಿಂದ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಕರ್ನಾಟಕದ ಖ್ಯಾತ ಹೃದಯ ತಜ್ಞರಿಂದ ಚಿಕಿತ್ಸೆ
ಶ್ರೀಲಂಕಾ: 157 ಮತ್ತು 4 ವಿಕೆಟ್‌ಗೆ 150 (ದಿಮುತ್ ಕರುಣರತ್ನೆ 91*, ಲಹಿರು ತಿರಿಮನ್ನೆ 31, ಲುಂಗಿ ಎನ್‌ಗಿಡಿ 26ಕ್ಕೆ 3, ಆನ್ರಿಚ್ ನೋರ್ಜೆ 41ಕ್ಕೆ 1), ದಕ್ಷಿಣ ಆಫ್ರಿಕಾ: 302 (ಡೀನ್ ಎಲ್ಗರ್ 127, ವಿಶ್ವ ಫೆರ್ನಾಂಡೊ 101ಕ್ಕೆ 5, ಅಸಿತಾ ಫೆರ್ನಾಂಡೊ 61ಕ್ಕೆ 2, ಡಸುನ್ ಶನಕ 42ಕ್ಕೆ 2).
At Stumps on Day 2, Sri Lanka lead by 5 runs. Dimuth Karunaratne on 91*, Niroshan Dickwella on 18*. #SAvSL pic.twitter.com/hcC3LSRhnj
— Sri Lanka Cricket 🇱🇰 (@OfficialSLC) January 4, 2021