More

    VIDEO: ಕರೊನಾ ಕಾಲದಲ್ಲಿ ಧೈರ್ಯಗೆಡದವರೇ ಧೀರರು – ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಕೊಟ್ಟ ವಿವರಣೆ ಏನು?

    ಕರೊನಾ ಸೋಂಕು ಹರಡದಂತೆ ತಡೆಯಲು ನಾನಾ ರೀತಿಯಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆದಿದೆ. ಇದೇ ವೇಳೆ ಮೈಸೂರಿನ ಅವಧೂತ ದತ್ತಪೀಠಂನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನಿತ್ಯವೂ ದಿಗ್ವಿಜಯ ನ್ಯೂಸ್​ನಲ್ಲಿ ಬೆಳಗ್ಗೆ ಚುಟುಕು ಪ್ರವಚನ ನೀಡುತ್ತಿದ್ದಾರೆ.

    ಸದ್ಯದ ಪರಿಸ್ಥಿತಿಯಲ್ಲಿ ನಾವು ಸೃಷ್ಟಿ, ಸ್ಥಿತಿ, ಲಯ ಕರ್ತರನ್ನು ಸ್ಮರಿಸಬೇಕಾದ ಅಗತ್ಯವನ್ನು ವಿವರಿಸಿದ ಅವರು, ಈಗಿನ ಸನ್ನಿವೇಶದಲ್ಲಿ ದತ್ತಾತ್ರೇಯ ಅಂದರೆ ಸಾಕು. ಆತನ ಭಜನೆ, ಪೂಜೆ ಮಾಡಿದರೆ ಸಾಕು ಎಂದು ಹೇಳಿದರು. ಭಾರತೀಯ ಸಂಸ್ಕೃತಿ, ಮೌಲ್ಯಗಳ ಕುರಿತ ವಿವರಣೆ ನೀಡುತ್ತ ಸದ್ಯದ ಕರೊನಾ ಸೋಂಕಿನ ಪರಿಸ್ಥಿತಿಯಲ್ಲಿ ಸೋಷಿಯಲ್ ಡಿಸ್ಟೆನ್ಸಿಂಗ್​ ಹೇಗಿರಬೇಕು ಎಂಬುದನ್ನು ವಿವರಿಸಿದರು.

    ಲಾಕ್​ಡೌನ್​ ಅವಧಿಯಲ್ಲಿ ಮನೆಯಿಂದ ಹೊರಗೆ ಹೋಗಬಾರದೆಂಬ ನಿಯಮವಿದೆ. ಇದನ್ನು ನಮ್ಮ ಪುರಾತನ ಸಂಸ್ಕೃತಿಯಲ್ಲಿರುವ ಆಚರಣೆಗೆ ಸಮೀಕರಿಸುತ್ತ ಹಲವು ಉದಾಹರಣೆಗಳನ್ನು ವಿವರಿಸಿದ ಸ್ವಾಮೀಜಿ, ಮನೆಯೊಳಗೆ ಇರಬೇಕಾದ ಅನಿವಾರ್ಯತೆಯನ್ನು ಸ್ಪಷ್ಟಪಡಿಸಿದ್ದಾರೆ. ಅವರ ಪ್ರವಚನದ ಪೂರ್ಣಪಾಠಕ್ಕೆ ಕೆಳಗಿನ ಲಿಂಕ್​ನಲ್ಲಿರುವ ಇನ್​ಸ್ಟಾಗ್ರಾಂ, ಫೇಸ್​ಬುಕ್​  ವಿಡಿಯೋವನ್ನು ವೀಕ್ಷಿಸಬಹುದು.

     

    VIDEO: ಕರೊನಾ ಆತಂಕ ಬೇಡ…ಎಲ್ಲರೂ ಸೇರಿ ಯುದ್ಧ ಗೆಲ್ಲೋಣ; ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಪ್ರವಚನ ಸಾರಾಮೃತದಲ್ಲಿದೆ ಸಾಂತ್ವನ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts