More

    ಶ್ರೀ ಸೋಮೇಶ್ವರ ಮಹಾರಥೋತ್ಸವ

    ಲಕ್ಷ್ಮೇಶ್ವರ: ಪಟ್ಟಣದ ಆರಾಧ್ಯದೈವ ಪುಲಿಗೆರೆಯ ಶ್ರೀ ಸೋಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ಭಾನುವಾರ ಗೋಧೂಳಿ ಸಮಯದಲ್ಲಿ ಅಪಾರ ಭಕ್ತ ಸಮೂಹದ ನಡುವೆ ಶ್ರೀಸೋಮೇಶ್ವರ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
    ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು.

    ಬೆಳಗಿನಿಂದಲೇ ಮಹಿಳೆಯರು, ಮಕ್ಕಳು ಹೊಸ ಉಡುಗೆ ಧರಿಸಿ ದೇವಸ್ಥಾನಕ್ಕೆ ಆಗಮಿಸಿ ಸಾಕ್ಷಾತ್ ಶಿವಪಾರ್ವತಿ ನಂದಿಯ ಮೇಲೆ ಕುಳಿತ ಶ್ರೀಸೋಮೇಶ್ವರನಿಗೆ ಶ್ರದ್ಧಾ ಭಕ್ತಿಯಿಂದ ನಮಿಸಿದರು.

    ನೈವೇದ್ಯ ಮಾಡಿಸಿಕೊಂಡು ಬಳಿಕ ರಥಕ್ಕೆ ಉಡಿ ತುಂಬಿ, ಹೊಸ ವಸ್ತ್ರಾಭರಣಗಳನ್ನಿರಿಸಿ ಪೂಜಿಸಿದ ದೃಶ್ಯ ಕಂಡುಬಂದಿತು.

    ಸಂಜೆ ಜರುಗಿದ ಶ್ರೀ ಸೋಮೇಶ್ವರ ಮಹಾರಥೋತ್ಸವಕ್ಕೆ ನಾಡಿನಾದ್ಯಂತ ಆಗಮಿಸಿದ್ದ ಭಕ್ತಗಣ ಸಾಕ್ಷಿಯಾಯಿತು.

    ಹರಹರ ಮಹಾದೇವ ಶ್ರೀಸೋಮೇಶ್ವರ ಮಹಾರಾಜ ಕೀ ಜೈ ಎಂಬ ಘೋಷಣೆಗಳು ಮೊಳಗಿದವು.

    ಅಪಾರ ಭಕ್ತ ಸಮೂಹ ಭಕ್ತಿ-ಭಾವದಿಂದ ಉತ್ತತ್ತಿ, ಹಣ್ಣುಗಳನ್ನು ತೇರಿಗೆ ಎಸೆದರು. ಯುವಕರು ತೇರಿನ ಕಳಸಕ್ಕೆ ಗುರಿಯಿಟ್ಟು ಹಣ್ಣು, ಉತ್ತತ್ತಿ ಎಸೆಯುತ್ತಿದ್ದ ದೃಶ್ಯ ಕಂಡು ಬಂದಿತು.

    ನವದಂಪತಿ ತೇರಿನ ಕಳಸ ನೋಡಲು ಜಮಾಯಿಸಿದ್ದರು. ಮಹಾರಥೋತ್ಸವದಲ್ಲಿ ಶ್ರೀಸೋಮೇಶ್ವರ ದೇವಸ್ಥಾನದ ಜಾತ್ರಾ ಕಮಿಟಿ, ಸೇವಾ ಸಮಿತಿ ಸದಸ್ಯರು, ಮುಖ್ಯ ಅರ್ಚಕರು, ಹಿರಿಯರು ನೇತೃತ್ವ ವಹಿಸಿದ್ದರು.

    ಶನಿವಾರ ಸಂಜೆ ಲಕ್ಷ್ಮೀದೇವಿ ಪೂಜೆ, ರಥಪೂಜೆ ಮತ್ತು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿತು. ಮೇ 1ರಂದು ಸೋಮವಾರ ಸಂಜೆ 5.30ಕ್ಕೆ ಕಡುಬಿನ ಕಾಳಗ. 2ರಂದು ಓಕಳಿ ಕಾರ್ಯಕ್ರದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts