More

    ಇಂದು ಶ್ರೀ ಸಿದ್ದೇಶ್ವರಸ್ವಾಮಿ ಕಲಶಾರೋಹಣ

    ಬೀರೂರು: ಗಿರಿಶಿಖರಗಳ ತಪ್ಪಲಿನಲ್ಲಿ, ರಮಣೀಯ ಕಾನನದಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಹೊಗರೇಖಾನ್ ಗಿರಿ ಶ್ರೀ ಸಿದ್ದೇಶ್ವರಸ್ವಾಮಿ ದೇವಾಲಯ ಕಟ್ಟಡ ಆರಂಭೋತ್ಸವ, ನೂತನ ಕಲಶಾರೋಹಣ ಮತ್ತು ಶ್ರೀಚೌಡೇಶ್ವರಿ ಅಮ್ಮ ಮತ್ತು ಶ್ರೀ ರಂಗನಾಥಸ್ವಾಮಿ ದೇವಾಲಯಗಳ ಉದ್ಘಾಟನೆ ಮತ್ತು ಧಾರ್ಮಿಕ ಸಮಾರಂಭ ಭಾನುವಾರ ಆರಂಭವಾಗಿದ್ದು, 20ರವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

    ಭಾನುವಾರ ಗಂಗಾಪೂಜೆ, ಪ್ರವೇಶಬಲಿ, ಆಲಯ ಪ್ರವೇಶ, ಗಣಪತಿ ಪೂಜಾ, ಸ್ವಸ್ತಿವಾಚನ, ನಾಂದಿ ಸಮಾರಾಧನೆ, ರಕ್ಷೋಘ್ನ ಹೋಮ, ಪರಿಯಗ್ನ ಕರಣ, ಪಂಚಕಲಶ, ನವಗ್ರಹ ಹೋಮ, ಸಕಲ ಆವಾಹಿತ ದೇವತಾಹೋಮ ಮತ್ತು ಮಹಾಮಂಗಳಾರತಿ ನೆರವೇರಿದವು.
    ಸೋಮವಾರ ಬ್ರಾಹ್ಮೀ ಮಹೂರ್ತದಲ್ಲಿ ಗಂಗೆ ತರುವುದು, ಶ್ರೀ ಸಿದ್ದೇಶ್ವರಸ್ವಾಮಿ ಮೂಲ ಮೂರ್ತಿಗೆ ಮಹಾ ರುದ್ರಾಭಿಷೇಕ, ಪೂಜೆ, ಹವನ ಜರುಗಲಿದೆ. ಬೀರೂರು ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅಮೃತ ಹಸ್ತದಲ್ಲಿ ಗೋಪುರಕ್ಕೆ ಕಲಶಾರೋಹಣ, ಕುಂಭಾಭಿಷೇಕ, ದೃಷ್ಟಿಬಲಿ, ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ನಡೆಯಲಿದೆ. ಮಧ್ಯಾಹ್ನ ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಎಳನಾಡು ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಸಮಾರಂಭ ಮತ್ತು ಸನ್ಮಾನ ಕಾರ್ಯಕ್ರಮಗಳು ನಡೆಯಲಿವೆ.
    19ರಂದು ಶ್ರೀ ಚೌಡೇಶ್ವರಿ ಅಮ್ಮನ ದೇವಾಲಯ ಆರಂಭೋತ್ಸವ ಹಾಗೂ ಗೋಪುರ ಕಲಶಾರೋಹಣ, ಕುಂಭಾಭಿಷೇಕ, ದೃಷ್ಟಿಬಲಿ, ಪೂರ್ಣಾಹುತಿ, ಮಹಾಮಂಗಳಾರತಿ ನಡೆಯಲಿದೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts