More

    ದೇಶಕ್ಕೆ ಭೋವಿ ಸಮಾಜದ ಕೊಡುಗೆ ಅಪಾರ

    ಬಸವಕಲ್ಯಾಣ: ಮುಗ್ಧ ಮತ್ತು ಶ್ರಮಜೀವಿಯಾಗಿರುವ ಭೋವಿ ಸಮಾಜ ಕಟ್ಟಡ, ಮಠ-ಮಾನ್ಯಗಳನ್ನು ಕಟ್ಟುವ ಮೂಲಕ ದೇಶ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಶಾಸಕ ಶರಣು ಸಲಗರ ಹೇಳಿದರು.

    ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಭೋವಿ (ವಡ್ಡರ) ಸಂಘ ಬುಧವಾರ ಆಯೋಜಿಸಿದ್ದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ೮೫೨ನೇ ಜಯಂತ್ಯುತ್ಸವ ಉದ್ಘಾಟಿಸಿದ ಅವರು, ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಭೋವಿ ಸಮಾಜದ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದರು ಎಂದರು.

    ಸಮಾಜದ ರಾಷ್ಟ್ರೀಯ ಅಧ್ಯಕ್ಷ ಡಾ.ವೆಂಕಟೇಶ ಮೌರ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಕೈಗೊಂಡ ಅಭಿವೃದ್ಧಿ ಪರ್ವ ಗಮನಿಸಿ ವಿಶ್ವ ಭಾರತದತ್ತ ತಿರುಗಿ ನೋಡುತ್ತಿದೆ. ಬಸವಕಲ್ಯಾಣದಲ್ಲಿ ನಮ್ಮ ಸಮಸ್ಯೆ ಆಲಿಸುತ್ತಿರುವ ಶರಣು ಸಲಗರ ಅವರಿಗೆ ಸಮಾಜ ಬೆಂಬಲಿಸಬೇಕು ಎಂದು ಸಲಹೆ ನೀಡಿದರು.

    ಸಾನ್ನಿಧ್ಯ ವಹಿಸಿದ್ದ ಹಿರನಾಗಾಂವದ ಶ್ರೀ ಜಯಶಾಂತಲಿಂಗ ಸ್ವಾಮೀಜಿ ಹಾಗೂ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಆಶೀರ್ವಚನ ನೀಡಿದರು. ಸಮಾಜದ ಜಿಲ್ಲಾಧ್ಯಕ್ಷ ಹಣಮಂತ ಮಾಳಗಿಮನಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಶಿವಶರಣಪ್ಪ ಹುಗ್ಗೆಪಾಟೀಲ್ ವಿಶೇಷ ಉಪನ್ಯಾಸ ನೀಡಿದರು.

    ಪ್ರಮುಖರಾದ ರಾಹುಲ್ ವಾಡೇಕರ್, ಬಳಿರಾಮ ಪವಾರ್, ಬಸವರಾಜ, ಲಕ್ಷ್ಮಣ, ತಿಪ್ಪಣ್ಣ ಹಳ್ಳಿಖೇಡೆ ಇತರರಿದ್ದರು. ಮಲ್ಲಪ್ಪ ಕೋಟೆ ಪ್ರಾರ್ಥನೆಗೀತೆ ಹಾಡಿದರು. ಶರಣಪ್ಪ ವಾಡೇಕರ್ ಸ್ವಾಗತಿಸಿದರು. ರಮೇಶ ಉಮ್ಮಾಪುರೆ ನಿರೂಪಣೆ ಮಾಡಿದರು.

    ಐತಿಹಾಸಿಕ ಕೋಟೆಯಿಂದ ಮುಖ್ಯ ರಸ್ತೆ ಮಾರ್ಗವಾಗಿ ಅಂಬೇಡ್ಕರ್ ವೃತ್ತದ ಮೂಲಕ ಕಲ್ಯಾಣ ಮಂಟಪವರೆಗೆ ಕಲಾ ತಂಡಗಳ ಪ್ರದರ್ಶನದೊಂದಿಗೆ ಶ್ರೀ ಶಿವಯೋಗಿ ಸಿದ್ಧö್ದರಾಮೇಶ್ವರ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts