More

    ಶ್ರೀರಾಮನಗರ ಗ್ರಾಪಂಗೆ ಶಾಂತಪ್ಪ ಭೀಮಪ್ಪ ಅಧ್ಯಕ್ಷ

    ಗಂಗಾವತಿ: ತಾಲೂಕಿನ ಶ್ರೀರಾಮನಗರ ಗ್ರಾಪಂಗೆ ಎರಡನೇ ಅವಧಿಯ ಅಧ್ಯಕ್ಷರಾಗಿ ಶಾಂತಪ್ಪ ಭೀಮಪ್ಪ, ಉಪಾಧ್ಯಕ್ಷೆಯಾಗಿ ಹುಸೇನ್‌ಬೀ ಮಹೆಬೂಬ್‌ಸಾಬ್ ಶುಕ್ರವಾರ ಅವಿರೋಧ ಆಯ್ಕೆಯಾದರು.

    ಇದನ್ನೂ ಓದಿ: ಯಲಬುರ್ಗಾದ ಬಹುತೇಕ ಗ್ರಾಪಂಗಳಲ್ಲಿ ಮಹಿಳೆಯರ ಮೇಲುಗೈ

    ಅಧ್ಯಕ್ಷ ಸ್ಥಾನ ಎಸ್‌ಸಿ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಆಯ್ಕೆಯನ್ನು ಚುನಾವಣಾಧಿಕಾರಿ ಶ್ರೀನಿವಾಸ ಅವಿರೋಧವೆಂದು ೋಷಿಸಿದರು. 24 ಸದಸ್ಯರಲ್ಲಿ 23 ಮಂದಿ ಭಾಗವಹಿಸಿದ್ದರು.

    ಕಾಂಗ್ರೆಸ್ ಬೆಂಬಲಿತರೇ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿದ್ದರಿಂದ ಕಾರ್ಯಕರ್ತರು ಗ್ರಾಪಂ ಕಚೇರಿ ಮುಂದೆ ವಿಜಯೋತ್ಸವ ಆಚರಿಸಿದರು. ಸದಸ್ಯರಾದ ರೆಡ್ಡಿ ವೀರರಾಜು, ಮುಳ್ಳುಪುಡಿ ಶ್ರೀನಿವಾಸ, ಸಾಂಬಮೂರ್ತಿ, ಹನುಮಂತ, ಶ್ರೀದೇವಿ, ಅರತೆಮ್ಮ, ರಾಮಕೃಷ್ಣರಾಜು, ಸುಮನ್, ಮುಖಂಡರಾದ ರೆಡ್ಡಿ ಶ್ರೀನಿವಾಸ, ಮನ್ನೆ ಕೃಷ್ಣ, ಟಿ.ವೆಂಕಟೇಶ್ವರರಾವ್, ಮಹ್ಮದ್‌ರಫಿ, ಪಿ.ವೆಂಕಟೇಶ್ವರರಾವ್, ಎ.ಸೂರ್ಯರಾವ್ ಇತರರಿದ್ದರು.

    ವಿವಿಧ ಪಂಚಾಯಿತಿ ವಿವರ

    ಸಂಗಾಪುರ ಗ್ರಾಪಂಗೆ ಮಂಜವ್ವ ಲೋಕನಾಯಕ (ಅಧ್ಯಕ್ಷೆ), ಹನುಮಮ್ಮ ರಾಘವೇಂದ್ರ (ಉಪಾಧ್ಯಕ್ಷೆ), ಮಲ್ಲಾಪುರ ಗ್ರಾಪಂಗೆ ಕೃಷ್ಣ ಹನುಮಂತಪ್ಪ (ಅಧ್ಯಕ್ಷ), ಲಕ್ಷ್ಮೀ ಬಸನಗೌಡ (ಉಪಾಧ್ಯಕ್ಷೆ), ಸಣಾಪುರ ಗ್ರಾಪಂಗೆ ಅಶೋಕ ಮಲ್ಲಯ್ಯ (ಅಧ್ಯಕ್ಷ), ಸಂತೋಷಮ್ಮ ರಾಜರತ್ನಂ (ಉಪಾಧ್ಯಕ್ಷೆ).

    ಚಿಕ್ಕಜಂತಕಲ್ ಗ್ರಾಪಂಗೆ ನೇತ್ರಾವತಿ ವೆಂಕೋಬ ಭಂಗಿ (ಅಧ್ಯಕ್ಷೆ), ನಾಗಪ್ಪ ಯಲ್ಲಪ್ಪ (ಉಪಾಧ್ಯಕ್ಷ), ಢಣಾಪುರ ಗ್ರಾಪಂಗೆ ಪಿಲ್ಲಿ ಗಣೇಶ ವೆಂಕಟ್ರಾವ್(ಅಧ್ಯಕ್ಷ), ಅಯ್ಯಮ್ಮ ಹನುಮೇಶ (ಉಪಾಧ್ಯಕ್ಷೆ), ಜಂಗಮರಕಲ್ಗುಡಿ ಗ್ರಾಪಂಗೆ ಶ್ರುತಿ ಧನಂಜಯ್ಯ (ಅಧ್ಯಕ್ಷೆ), ಹುಲಿಗೆಮ್ಮ ರಾಘವೇಂದ್ರ (ಉಪಾಧ್ಯಕ್ಷೆ).

    ಮರಳಿ ಗ್ರಾಪಂಗೆ ಹುಸೇನಮ್ಮ ಸುರೇಶ (ಅಧ್ಯಕ್ಷೆ), ಮೌಲಸಾಬ್ (ಉಪಾಧ್ಯಕ್ಷ), ಹೇರೂರು ಗ್ರಾಪಂಗೆ ಮೇಘರಾಣಿ ಮರಕುಂಬಿ (ಅಧ್ಯಕ್ಷೆ), ನಾಗಪ್ಪ ತಳವಾರ್ (ಉಪಾಧ್ಯಕ್ಷ), ವಡ್ಡರಹಟ್ಟಿ ಗ್ರಾಪಂಗೆ ಮಂಜುಳಾ ಶಿವಪ್ಪ (ಅಧ್ಯಕ್ಷೆ), ಟಿ.ಗೌಸಸಾಬ್‌ಹುಸೇನ್‌ಸಾಬ್ (ಉಪಾಧ್ಯಕ್ಷ).

    ಕೇಸರಹಟ್ಟಿ ಗ್ರಾಪಂಗೆ ಮಂಜುಳಾ ಶಿವನಗೌಡ (ಅಧ್ಯಕ್ಷೆ),ನೇತ್ರಾವತಿ (ಉಪಾಧ್ಯಕ್ಷೆ), ಹಣವಾಳ ಗ್ರಾಪಂಗೆ ಕೆ.ಎನ್.ಯಂಕಮ್ಮ (ಅಧ್ಯಕ್ಷೆ), ನಂದಿನಿ ವೆಂಕಟೇಶ(ಉಪಾಧ್ಯಕ್ಷೆ), ಚಿಕ್ಕಬೆಣಕಲ್ ಗ್ರಾಪಂಗೆ ಶಿವಮೂರ್ತಿಗೊಲ್ಲರ್ (ಅಧ್ಯಕ್ಷ), ಗುರಮ್ಮ ಲಿಂಗಪ್ಪ (ಉಪಾಧ್ಯಕ್ಷೆ), ಆನೆಗೊಂದಿ ಗ್ರಾಪಂಗೆ ಮಹಾದೇವಿ ಕೆ.ತಿಮ್ಮಪ್ಪ (ಅಧ್ಯಕ್ಷೆ), ಪೂರ್ಣಿಮಾ ತಿಪ್ಪೇಸ್ವಾಮಿ (ಉಪಾಧ್ಯಕ್ಷೆ).

    ವೆಂಕಟಗಿರಿ ಗ್ರಾಪಂಗೆ ಅಕ್ಕಮ್ಮ ಕಂದಕೂರ (ಅಧ್ಯಕ್ಷೆ), ಕುರಿ ಹುಲಿಗೆಮ್ಮ ತಿರುಪತೆಪ್ಪ (ಉಪಾಧ್ಯಕ್ಷೆ), ಆಗೋಲಿ ಗ್ರಾಪಂಗೆ ರಾಮಣ್ಣ ಸಣ್ಣ ಹನುಮಂತಪ್ಪ (ಅಧ್ಯಕ್ಷ), ಮರಿಯಮ್ಮ ರಾಮಣ್ಣ (ಉಪಾಧ್ಯಕ್ಷೆ), ಬಸಾಪಟ್ಟಣ ಗ್ರಾಪಂಗೆ ಅಂಜನಯ್ಯ ನಿಂಗಪ್ಪ (ಅಧ್ಯಕ್ಷ), ರತ್ನಮ್ಮ ಕೊಡಗೇರಿ (ಉಪಾಧ್ಯಕ್ಷೆ) ಆಗಿ ಆಯ್ಕೆಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts