More

    ಜನರನ್ನುದ್ದೇಶಿಸಿ ಮಾತನಾಡಲು ತೆಂಗಿನ ಮರ ಏರಿದ ಸಚಿವ…!

    ಕೊಲಂಬೋ: ಶ್ರೀಲಂಕಾದ ಸಚಿವರೋರ್ವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲು ತೆಂಗಿನ ಮರ ಹತ್ತಿದ ಘಟನೆ ನಡೆದಿದೆ.

    ಅರೆ ಇದೆಂತಾ ವಿಚಿತ್ರ ಎನ್ನಬೇಡಿ..ಸಚಿವ ಅರುಂಡಿಕಾ ಫರ್ನಾಂಡೋ ಅವರು ಹೀಗೊಂದು ಪ್ರಯೋಗ ಮಾಡಿದ್ದಾರೆ. ಶ್ರೀಲಂಕಾ ತೆಂಗಿನ ಕಾಯಿ ಕೊರತೆ ಎದುರಿಸುತ್ತಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ.
    ಶ್ರೀಲಂಕಾದಲ್ಲಿ ತೆಂಗು ಪ್ರಮುಖ ಬೆಳೆಗಳಲ್ಲಿ ಒಂದು. ಈಗ ಬೇಡಿಕೆಗೆ ತಕ್ಕಂತೆ ಉತ್ಪಾದನೆಯಾಗುತ್ತಿಲ್ಲ. ಸ್ಥಳೀಯ ಕೈಗಾರಿಕೆಗಳು ಮತ್ತು ಖಾಸಗಿ ಬಳಕೆಗಾಗಿ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸುಮಾರು 700 ದಶಲಕ್ಷ ತೆಂಗಿನಕಾಯಿಗಳ ಕೊರತೆ ಉಂಟಾಗಿದೆ ಎಂದು ಸಚಿವರು ಈ ವೇಳೆ ತಿಳಿಸಿದ್ದಾರೆ. ಇದನ್ನೂ ಓದಿ:ರವಿಕಿಶನ್​ ದಿನ ಶುರುವಾಗ್ತಿದ್ದೇ ಮಾದಕವಸ್ತುಗಳಿಂದ … ಅನುರಾಗ್​ ಸ್ಫೋಟಕ ಹೇಳಿಕೆ

    ದೇಶದಲ್ಲಿ ತೆಂಗು ಬೆಳೆ ಪ್ರಮಾಣ ಹೆಚ್ಚಬೇಕು. ಲಭ್ಯವಿರುವ ಜಾಗಗಳಲ್ಲಿ ತೆಂಗಿನ ಕೃಷಿ ನಡೆಸಬೇಕು. ನಮ್ಮ ಸ್ಥಳೀಯ ತೆಂಗು ಉದ್ಯಮಗಳನ್ನು ಉತ್ತೇಜಿಸಿ, ವಿದೇಶಿ ವಿನಿಮಯ ಪ್ರಮಾಣ ಜಾಸ್ತಿ ಮಾಡಬೇಕು ಎಂದೂ ಹೇಳಿದ್ದಾರೆ. ಹಾಗೇ, ತೆಂಗಿನ ಕಾಯಿ ಕೊರತೆ ಮಧ್ಯೆ ಅದರ ಬೆಲೆ ಕಡಿತಗೊಳಿಸುವ ಯೋಚನೆಯನ್ನೂ ಸರ್ಕಾರ ಮಾಡಿದ್ದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)

    ‘ಪಶ್ಚಿಮ ಬಂಗಾಳವೇ ಬಾಂಬ್​ ಅಡ್ಡೆ..’ ಹೀಗಂದಿದ್ದು ಬೇರಾರೂ ಅಲ್ಲ, ರಾಜ್ಯಪಾಲರೇ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts