More

    ಲಂಕಾದಿಂದ ಚೀನಾಕ್ಕೆ 1 ಲಕ್ಷ ಮಂಗಗಳ ರಫ್ತು? ಸಾಲ ತೀರಿಸಲು ಹೊಸ ಮಾರ್ಗೋಪಾಯ ಕಂಡುಕೊಳ್ಳುತ್ತಿರುವ ದ್ವೀಪರಾಷ್ಟ್ರ

    ಕೊಲಂಬೊ: ಸಾಲದ ಸುಳಿಯಲ್ಲಿ ಸಿಲುಕಿರುವ ಶ್ರೀಲಂಕಾ ಹೊಸ ಮಾಗೋಪಾಯಗಳನ್ನು ಹುಡುಕುತ್ತಿದ್ದು, ಚೀನಾಕ್ಕೆ ಅಳಿವಿನಂಚಿನಲ್ಲಿರುವ ಒಂದು ಲಕ್ಷ ಮಂಗಗಳನ್ನು ರವಾನಿಸಲು ಚಿಂತಿಸಿದೆ. ಅಂತಾರಾಷ್ಟ್ರೀಯ ನಿಸರ್ಗ ಸಂರಕ್ಷಣಾ ಒಕ್ಕೂಟ (ಐಯುಸಿಎನ್) ಅಪಾಯದಂಚಿನಲ್ಲಿದೆ ಎಂದು ಗುರುತಿಸಿರುವ ’ಟೋಕ್ ಮಕಾಕ್’ ಹೆಸರಿನ ಮಂಗಗಳನ್ನು ಲಂಕಾದಿಂದ ಖರೀದಿಸಲು ಚೀನಾ ಬಯಸಿದೆ. ತನ್ನ ದೇಶದ ಒಂದು ಸಾವಿರ ಮೃಗಾಲಯಗಳಲ್ಲಿ ಇರಿಸುವುದಾಗಿ ಹೇಳಿದೆ. ಮಂಗಗಳ ಮಾರಾಟವನ್ನು ಸಾಲದ ತಿರುವಳಿಗೆ ಬಳಸಬಹುದು ಎಂದು ಆಲೋಚಿಸಿರುವ ಲಂಕಾ, ಚೀನಾದ ಬೇಡಿಕೆ ಬಗ್ಗೆ ಅಧ್ಯಯನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

    ಮಂಗಗಳ ರವಾನೆ ಬಗ್ಗೆ ಕೃಷಿ ಸಚಿವ ಮಹಿಂದಾ ಅಮರವೀರ ನೇತೃತ್ವದಲ್ಲಿ ಮಂಗಳವಾರ ವಿಶೇಷ ಸಭೆ ನಡೆದಿದ್ದು, ಕೃಷಿ ಸಚಿವಾಲಯ, ರಾಷ್ಟ್ರೀಯ ಪ್ರಾಣಿಶಾಸ್ತ್ರ ಇಲಾಖೆ, ವನ್ಯಜೀವಿ ಸಂಕರಕ್ಷಣಾ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

    ಇದನ್ನೂ ಓದಿ: ಸಿದ್ದರಾಮಯ್ಯ ಸೋಲಿಸಲು ರಣತಂತ್ರ! ಶ್ರೀನಿವಾಸ್ ಪ್ರಸಾದ್-ವಿ.ಸೋಮಣ್ಣ ಮಹತ್ವದ ಚರ್ಚೆ; ಪ್ರತಾಪ್ ಸಿಂಹ ಸಾಥ್

    ಲಂಕಾದಲ್ಲಿ 30 ಲಕ್ಷ ಮಂಗಗಳು: ’ಟೋಕ್ ಮಕಾಕ್’ ಮಂಗಗಳ ಸಂಖ್ಯೆ 30 ಲಕ್ಷ ಇದ್ದು, ಇವು ರೈತರ ಬೆಳೆಗಳನ್ನು ಹಾಳು ಮಾಡುತ್ತಿವೆ. ಇವುಗಳನ್ನು ಚೀನಾಕ್ಕೆ ರವಾನಿಸುವುದರಿಂದ ಮಂಗಗಳ ಉಪಟಳಕ್ಕೂ ಕಡಿವಾಣ ಹಾಕಬಹುದು ಎಂಬ ಅಂಶ ಸಭೆಯಲ್ಲಿ ವ್ಯಕ್ತವಾಯಿತು. ವನ್ಯಜೀವಿಗಳ ರಫ್ತಿಗೆ ಲಂಕಾದಲ್ಲಿ ನಿರ್ಬಂಧ ಇರುವ ಕಾರಣ ಮಂಗಗಳ ರವಾನೆಗೆ ಇರುವ ಕಾನೂನು ಪ್ರಕ್ರಿಯೆ ಬಗ್ಗೆ ಅಧ್ಯಯನ ನಡೆಸಲು ಸಮಿತಿ ನೇಮಿಸಬೇಕೆಂಬ ಸಲಹೆ ಕೂಡ ಕೇಳಿಬಂತು. ದೇಶ ನಷ್ಟದಲ್ಲಿರುವ ಕಾರಣ ಬಿಗಿ ಕ್ರಮಗಳನ್ನು ಸಡಿಲಿಸಲು ನಿರ್ಧರಿಸಿರುವ ಸರ್ಕಾರ. ಹಲವು ಪ್ರಾಣಿ-ಪಕ್ಷಿಗಳನ್ನು ಈ ವರ್ಷ ಸಂರಕ್ಷಣಾ ಪಟ್ಟಿಯಿಂದ ಕೈಬಿಟ್ಟಿದೆ. ಇದರಲ್ಲಿ ರೈತರ ಬೆಳೆ ಹಾಳು ಮಾಡುವ ನವಿಲು, ಕಾಡುಹಂದಿಗಳನ್ನು ಹತ್ಯೆಯನ್ನು ಗಂಭೀರ ಸ್ವರೂಪದ ಪ್ರಕರಣದಿಂದ ಹೊರಗಿಡಲಾಗಿದೆ.

    ಬಾಕಿ, ಬಡ್ಡಿ ಮನ್ನಾ

    ಬಹುದಿನಗಳಿಂದ ಮಂಗಗಳ ಬೇಡಿಕೆ ಇತ್ಯರ್ಥವಾಗಿಲ್ಲ. ಇದನ್ನು ಸ್ನೇಹಪೂರ್ವಕವಾಗಿ ರ್ಚಚಿಸಲು ಚೀನಾ ಕೂಡ ಬಯಸಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಲಂಕಾಗೆ ನೀಡಿರುವ ಸಾಲದ ಬಾಕಿ ಮೊತ್ತ್ತ ಮತ್ತು ಎರಡು ವರ್ಷದ ಬಡ್ಡಿಯನ್ನು ಮನ್ನಾ ಮಾಡಲು ಚೀನಾ ಸಿದ್ಧವಿದೆ ಎಂಬ ಪ್ರಸ್ತಾವನೆಯನ್ನು ಚೀನಾ ವಿದೇಶಾಂಗ ಸಚಿವಾಲಯ ಮಾಡಿದೆ. ಆರ್ಥಿಕ ಸಂಕಷ್ಟದಲ್ಲಿರುವ ಚೀನಾಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) 300 ಕೋಟಿ ಡಾಲರ್ ನೆರವಿಗೆ ಅನುಮತಿ ನೀಡಿದೆ.

    ಲಂಕಾ 2022ರಲ್ಲಿ ತೀವ್ರ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿಗೆ ಸಿಲುಕಿತು. ಗೋತಬಯ ರಾಜಪಕ್ಸೆಯನ್ನು ಅಧ್ಯಕ್ಷ ಸ್ಥಾನದಿಂದ ಇಳಿಸುವ ಮೂಲಕ ರಾಜಕೀಯ ಬಿಕ್ಕಟ್ಟು ತಕ್ಕಮಟ್ಟಿಗೆ ಸರಿಯಾಗಿದೆ. ಆದರೆ, ಆರ್ಥಿಕ ಸಂಕಷ್ಟ ಮುಂದುವರಿದಿದೆ. ಆರ್ಥಿಕತೆಯನ್ನು ಸರಿದಾರಿಗೆ ತರುವ ಪ್ರಯತ್ನವನ್ನು ಲಂಕಾ ಸರ್ಕಾರ ಅವಿರತವಾಗಿ ಮಾಡುತ್ತಿದೆ. ಇದರ ಭಾಗವಾಗಿ ಆದಾಯ ತರುವಂತಹ ಅಥವಾ ಆದಾಯದ ಮಾರ್ಗಕ್ಕೆ ತೊಡಗಿರುವ ವಿಷಯಗಳನ್ನು ಮುಕ್ತವಾಗಿ ಪರಿಶೀಲಿಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts