More

    ಗಾಣಗಾಪುರದಲ್ಲಿ ದತ್ತ ಜಯಂತಿ ವೈಭವ

    ದೇವಲಗಾಣಗಾಪುರ: ಶಕ್ತಿ ಕ್ಷೇತ್ರ ದೇವಲ ಗಾಣಗಾಪುರದಲ್ಲಿ ಅಪಾರ ಭಕ್ತರ ಜೈ ಘೋಷದ ಮಧ್ಯೆ ಶ್ರೀ ದತ್ತ ಜಯಂತ್ಯುತ್ಸವ ಸೋಮವಾರ ಸಂಭ್ರಮದಿಂದ ನಡೆಯಿತು.

    ಶ್ರೀ ದತ್ತ ಮಹಾರಾಜರಿಗೆ ನಸುಕಿನ ಜಾವ ೨ರಿಂದಲೇ ವಿಶೇಷ ಪೂಜೆ, ಕಾಕಡಾರತಿ, ಅಲಂಕಾರ, ರುದ್ರಾಭಿಷೇಕ, ಮಹಾ ಮಂಗಳಾರತಿ ನೆರವೇರಿತು. ಬಳಿಕ ದೇವಸ್ಥಾನದ ಪ್ರಾಂಗಣದಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿತು. ಮಧ್ಯಾಹ್ನ ೧೨ಕ್ಕೆ ಅಪಾರ ಭಕ್ತರ ಜೈಘೋಷದ ಮಧ್ಯೆ ತೊಟ್ಟಿಲೋತ್ಸವ ಜರುಗಿತು. ಭಜನಾ ಮಂಡಳಿ ಸದಸ್ಯರು ದತ್ತಾತ್ರೇಯನ ಹಾಡುಗಳನ್ನು ಹಾಡಿ ಭಕ್ತಿಸೇವೆ ಸಲ್ಲಿಸಿದರು.

    ರಾಜ್ಯ ಮಾತ್ರವಲ್ಲದೆ ಮಹಾರಾಷ್ಟ್ರ , ಆಂಧ್ರ, ತಮಿಳುನಾಡು, ತೆಲಂಗಾಣ ಸೇರಿ ವಿವಿಧೆಡೆಯ ಸಹಸ್ರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಭೀಮಾ ನದಿಯಲ್ಲಿ ಸ್ನಾನ ಮಾಡಿ, ಸರದಿಯಲ್ಲಿ ನಿಂತು ದತ್ತನ ದರ್ಶನ ಪಡೆದು ಕೃತಾರ್ಥರಾದರು.

    ದೇವಸ್ಥಾನದ ಮಂಡಳಿಯ ಆಡಳಿತ ಅಧಿಕಾರಿ ಸದಾಶಿವ, ಕಾರ್ಯನಿರ್ವಾಹಕ ಅಧಿಕಾರಿ ನಾಮದೇವ, ದೇವಸ್ಥಾನ ಮಂಡಳಿ ಸಿಬ್ಬಂದಿ ದತ್ತು ಎಲ್. ಸಿಂದೆ, ಪ್ರಮುಖರಾದ ಸತೀಶ, ಶ್ರೀಕಾಂತ ಭಟ್ ಪೂಜಾರಿ, ಪ್ರಸನ್ನ ಭಟ್ ಪೂಜಾರಿ, ಸಚಿನ್ ಭಟ್ ಪೂಜಾರಿ, ವಿನಾಯಕ ಭಟ್, ಪ್ರಿಯಾಂಕ್ ಭಟ್, ಪ್ರಖ್ಯಾತ ಭಟ್, ಗುರುರಾಜ ಕುಲಕರ್ಣಿ, ನರಸಿಂಹ ಭಟ್ ಪೂಜಾರಿ ಇತರರಿದ್ದರು.

    ಕೆಲಕಾಲ ಟ್ರಾಫಿಕ್ ಜಾಮ್: ಮಹಾರಾಷ್ಟ್ರ, ಆಂಧ್ರ ಹಾಗೂ ತೆಲಂಗಾಣ ಸೇರಿ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಖಾಸಗಿ ವಾಹನಗಳ ಮೂಲಕ ಗಾಣಗಾಪುರಕ್ಕೆ ಬಂದಿದ್ದರಿಂದ ಪ್ರಮುಖ ರಸ್ತೆಗಳಲ್ಲಿ ಕೆಲಕಾಲ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಪೊಲೀಸರು ಸಂಚಾರ ನಿಯಂತ್ರಣಕ್ಕೆ ಹರಸಾಹಸಪಟ್ಟರು. ಮಧ್ಯಾಹ್ನದ ಬಳಿಕ ನಿಧಾನವಾಗಿ ಒಂದೊಂದೆ ವಾಹನಗಳು ಕ್ಷೇತ್ರದಿಂದ ಹೊರನಡೆದವು.

    ಇಂದು ರಥೋತ್ಸವ: ದೇವಲ ಗಾಣಗಾಪುರದ ಶ್ರೀ ದತ್ತಾತ್ರೇಯನ ಸನ್ನಿಧಿಯಲ್ಲಿ ಮಂಗಳವಾರ ಸಂಭ್ರಮದಿAದ ರಥೋತ್ಸವ ನಡೆಯಲಿದೆ. ನಸುಕಿನ ಜಾವ ೩ ಗಂಟೆಗೆ ಕಾಕಡಾರತಿ, ರುದ್ರಾಭಿಷೇಕ, ನಿರ್ಗುಣ ಪಾದುಕೆಗೆ ವಿಶೇಷ ಪೂಜೆ ಜರುಗಲಿದೆ. ಸಂಜೆ ೬ಕ್ಕೆ ಅಪಾರ ಭಕ್ತರ ಜೈಘೋಷದ ಮಧ್ಯೆ ಸಂಭ್ರಮದಿAದ ರಥೋತ್ಸವ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts