More

    ‘ಶ್ರೀ ದತ್ತ ಭಾಗವತ’ ಕೃತಿ ಮನೆಮನೆಗೂ ತಲುಪಲಿ: ಡಾ. ವಿಜಯ ಸಂಕೇಶ್ವರ ಆಶಯ

    ಹುಬ್ಬಳ್ಳಿ: ಬೀದರ್​ ಜಿಲ್ಲೆಯ ಸಾಹಿತಿ ಹಣಮಂತ ವಲ್ಲೇಪುರೆ(ಹಂಶಕವಿ) ರಚಿಸಿದ `ಶ್ರೀ ದತ್ತ ಭಾಗವತ’ ಮಹಾಕೃತಿಯನ್ನು ವಿಆರ್‍ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ನಗರದಲ್ಲಿ ಸೋಮವಾರ ಲೋಕಾರ್ಪಣೆಗೊಳಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಡಾ. ವಿಜಯ ಸಂಕೇಶ್ವರ, ಈ ಕೃತಿ ಮನೆ ಮನೆಗೂ ತಲುಪಬೇಕು ಎಂಬ ಉದ್ದೇಶದಿಂದ ಶ್ರೀಮತಿ ಲಲಿತಾ ಸಂಕೇಶ್ವರ ಅವರು ಸುಮಾರು 2 ಲಕ್ಷ ಪ್ರತಿ ಮುದ್ರಿಸುವ ಸಂಕಲ್ಪ ಹೊಂದಿದ್ದಾರೆ. 1,100 ರೂ. ಮೂಲ ಮುಖಬೆಲೆಯನ್ನು 200 ರೂ.ಗೆ ಇಳಿಸುವ ಮೂಲಕ ಪ್ರತಿಯೊಬ್ಬರೂ ಕೃತಿ ಖರೀದಿಸಲು ಅನುಕೂಲ ಮಾಡಿಕೊಡಲಿದ್ದಾರೆ ಎಂದು ಹೇಳಿದರು.

    ಪೊಲೀಸ್ ಇಲಾಖೆಯ ಬಿಡುವಿಲ್ಲದ ಕೆಲಸದ ನಡುವೆಯೂ ಹಣಮಂತ ವಲ್ಲೇಪುರೆ ಅವರು ಸಾಹಿತ್ಯ ಕೃಷಿ ಮಾಡಿದ್ದು ಶ್ಲಾಘನೀಯ. ಹಿಂದು ಸಂಪ್ರದಾಯದಲ್ಲಿ ಶ್ರೀ ದತ್ತ ದೇವರಿಗೆ ಬಹಳ ಮಹತ್ವ ಇದೆ. ಅವರ ಕೃತಿಯಿಂದ ಶ್ರೀ ದತ್ತರ ಚರಿತ್ರೆಯನ್ನು ಪ್ರತಿಯೊಬ್ಬರೂ ಅರಿಯಲು ಸಹಾಯವಾಗಲಿದೆ. ಭಗವಾನ್ ಶ್ರೀ ದತ್ತಾತ್ರೇಯ ಅವರು ಜಾತ್ಯತೀತ ಹಾಗೂ ಧರ್ಮಾತೀತ ತತ್ವಗಳನ್ನು ಅಳವಡಿಸಿಕೊಂಡವರು ಎಂಬುದನ್ನು ಜಗತ್ತಿಗೆ ತಿಳಿಸಬೇಕಾಗಿದೆ. ಶ್ರೀ ದತ್ತ ದೇವರು ಅನೇಕರ ಆರಾಧ್ಯರಾಗಿದ್ದಾರೆ. ಅವರ ಕುರಿತಾಗಿ ಇಂತಹ ಮಹತ್ವವಾದ ಕೃತಿ ಪ್ರಕಟವಾಗುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಡಾ. ವಿಜಯ ಸಂಕೇಶ್ವರ ಹೇಳಿದರು. ಇದನ್ನೂ ಓದಿರಿ ಮೂರುಸಾವಿರ ಮಠ ವಿವಾದ: ಸಮಸ್ಯೆ ಇತ್ಯರ್ಥಕ್ಕೆ ಡಾ.ವಿಜಯ ಸಂಕೇಶ್ವರರ ಮಹತ್ವದ ಸಲಹೆ ಇಲ್ಲಿದೆ

    'ಶ್ರೀ ದತ್ತ ಭಾಗವತ' ಕೃತಿ ಮನೆಮನೆಗೂ ತಲುಪಲಿ: ಡಾ. ವಿಜಯ ಸಂಕೇಶ್ವರ ಆಶಯಸಾಹಿತಿ ಹನಮಂತ ವಲ್ಲೇಪುರೆ ಮಾತನಾಡಿ, ಭಗವಾನ್ ಶ್ರೀ ದತ್ತಾತ್ರೇಯ ಮಹಾಪುರಾಣವನ್ನು ಈ ಕೃತಿ ಹೊಂದಿದೆ. ಶ್ರೀಪಾದ ಶ್ರೀವಲ್ಲಭ, ನರಸಿಂಹ ಸರಸ್ವತಿ, ಸ್ವಾಮಿ ಸಮರ್ಥ ಮಾಣಿಕ್ಯಪ್ರಭು, ಶಿರಡಿ ಸಾಯಿಬಾಬಾ, ಗಜಾನನ ಮಹಾರಾಜರು ಹೀಗೆ 36 ಅಂಶಿಕ ಅವತಾರಗಳನ್ನು ಶ್ರೀ ದತ್ತಾತ್ರೇಯರು ಹೊಂದಿದ್ದಾರೆ. ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ಅವರೂ ಈ ಅವತಾರಗಳಲ್ಲಿ ಒಬ್ಬರು ಎಂದು ತಿಳಿಸಿದರು.

    ಹಲವು ಭಾಷೆಗಳಲ್ಲಿ ಅನುವಾದ: ಈ ಕೃತಿ 168 ಅಧ್ಯಾಯ ಹೊಂದಿದ್ದು, 9 ಭಾಗಗಳಲ್ಲಿ ವಿಂಗಡಣೆ ಮಾಡಲಾಗಿದೆ. ಇದುವರೆಗೆ 125ಕ್ಕೂ ಹೆಚ್ಚು ಕೃತಿ ರಚಿಸಿದ್ದು, ಇದು ಲೋಕಾರ್ಪಣೆಗೊಳ್ಳುತ್ತಿರುವ 108ನೇ ಕೃತಿ. ಜಗತ್ತಿನ 52 ಭಾಷೆಗಳಲ್ಲಿ ಈ ಕೃತಿಯನ್ನು ಅನುವಾದಗೊಳಿಸುವ ಸಂಕಲ್ಪ ಹೊಂದಿದ್ದು, ಈಗಾಗಲೇ ಮರಾಠಿ, ತೆಲಗು, ಇಂಗ್ಲಿಷ್, ನೇಪಾಳಿ, ಹಿಂದಿ, ಉರ್ದು ಭಾಷೆಗಳಲ್ಲಿ ಅನುವಾದಿಸುವ ಕಾರ್ಯ ನಡೆದಿದೆ ಎಂದು ಹನಮಂತ ವಲ್ಲೇಪುರೆ ವಿವರಿಸಿದರು. ಇದನ್ನೂ ಓದಿರಿ ಅಲ್ಹಾನನ್ನು ಮೆಚ್ಚಿಸಲು ಆರು ವರ್ಷದ ಸ್ವಂತ ಮಗುವನ್ನು ಭೀಕರವಾಗಿ ಕೊಂದ ಗರ್ಭಿಣಿ ಶಿಕ್ಷಕಿ!

    ಧಾರವಾಡದ ಸಾಹಿತಿ ಡಾ. ಆರ್.ಬಿ. ಚಿಲುಮಿ ಅವರ ಸರ್ವಜ್ಞ ಕವಿ ಚರಿತಾಮೃತ, ಡಾ. ಪುಟ್ಟರಾಜ ಗವಾಯಿಗಳ ಚರಿತಾಮೃತ ಹಾಗೂ ವಚನ ವೈಭವ ಕೃತಿಗಳ ಬಿಡುಗಡೆ ಇದೇ ಸಂದರ್ಭದಲ್ಲಿ ನೆರವೇರಿತು.

    ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ, ಶ್ರೀಮತಿ ವಾಣಿ ಆನಂದ ಸಂಕೇಶ್ವರ, ಉದ್ಯಮಿಗಳಾದ ಮಹೇಶಸ್ವಾಮಿ, ಗುರುಸಿದ್ದಪ್ಪ ಬಿರಾದಾರ, ಅಲ್ಲಮಪ್ರಭು ಹೊನವಾಡ, ನ್ಯಾಯವಾದಿ ಶೇಷಾದ್ರಿ ಜಯಶಂಕರ, ಪೊಲೀಸ್ ಸಾಹಿತಿ ಸೋಮುರಡ್ಡಿ ಹಾಗೂ ಇತರರಿದ್ದರು.

    ಮೂರುಸಾವಿರ ಮಠ ವಿವಾದ: ಸಮಸ್ಯೆ ಇತ್ಯರ್ಥಕ್ಕೆ ಡಾ.ವಿಜಯ ಸಂಕೇಶ್ವರರ ಮಹತ್ವದ ಸಲಹೆ ಇಲ್ಲಿದೆ

    ಡಾ.ರಾಜ್​ ಅಪಹರಣ: ರಾಜ್ಯ ಸರ್ಕಾರ ಮುಚ್ಚಿಟ್ಟಿದ್ದ ಸ್ಫೋಟಕ ರಹಸ್ಯ ಬಯಲು

    ಶ್ರೀಮೈಲಾರ ಜಾತ್ರೆ ರದ್ದು: ಕಾರ್ಣಿಕ ಭವಿಷ್ಯ ಹೇಳೋಕೂ ಅಡ್ಡಿ! ಕಾರಣ ಇಲ್ಲಿದೆ

    ರಾಣೆಬೆನ್ನೂರಿನ ಹುಲಿ ಸಾವು, ಬಿಟ್ಟೋಗ್ಬೇಡ ನನ್ನಾ… ಎಂದು ಬಿಕ್ಕಿಬಿಕ್ಕಿ ಅತ್ತ ಬಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts