More

    ಶ್ರೀ ಚೌಡೇಶ್ವರಿ ಅಮ್ಮನವರ ರಥೋತ್ಸವ

    ಮದ್ದೂರು: ವರ್ಷದಲ್ಲಿ ಕೇವಲ 36 ಗಂಟೆಗಳ ಕಾಲ ದರ್ಶನ ನೀಡುವ ತಾಲೂಕಿನ ಹೆಮ್ಮನಹಳ್ಳಿ ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಹಾಗೂ ಕೊಂಡೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಶುಕ್ರವಾರ ನೆರವೇರಿತು.

    ಬೆಳಗ್ಗೆ 4.30ಕ್ಕೆ ಅಮ್ಮನವರು ಅಗ್ನಿ ಕುಂಡ ಪ್ರವೇಶ ಮಾಡಿದರು. ಈ ವೇಳೆ ದೇವರ ಪಟವನ್ನು ಹೊತ್ತ ಅರ್ಚಕ ಕೊಂಡ ಹಾಯ್ದರು. ಈ ವೇಳೆ ಭಕ್ತಾದಿಗಳ ಉದ್ಘೋಷ ಮುಗಿಲು ಮುಟ್ಟಿತ್ತು. ಕೊಂಡೋತ್ಸವಕ್ಕೆ ಜಿಲ್ಲೆ ಮತ್ತು ರಾಜ್ಯ ವಿವಿಧ ಭಾಗಗಳಿಂದ ಭಾಗವಹಿಸಿದ್ದ ಸಾವಿರಾರು ಭಕ್ತಾದಿಗಳು ಸಾಕ್ಷಿಯಾದರು.

    ಮಧ್ಯಾಹ್ನ 12ಕ್ಕೆ ಶ್ರೀ ಚೌಡೇಶ್ವರಿ ಅಮ್ಮನವರ ರಥೋತ್ಸವ ಅದ್ದೂರಿಯಾಗಿ ನೆರವೇರಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥವನ್ನು ಭಕ್ತಾದಿಗಳು ಎಳೆದು ದೇವರ ಕೃಪೆಗೆ ಒಳಗಾದರು. ಅಂತಿಮವಾಗಿ ದೇವಸ್ಥಾನದ ಆವರಣಕ್ಕೆ ಕರೆ ತರಲಾಯಿತು. ಈ ವೇಳೆ ದಾನಿಗಳು ಭಕ್ತಾದಿಗಳಿಗೆ ಮಜ್ಜಿಗೆ, ಪಾನಕ, ಕೊಸಂಬರಿ ವಿತರಣೆ ಮಾಡಿದರು. ನಂತರ ಬಾಯಿಬೀಗ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಳು ನಡೆಯಿತು. ರಾತ್ರಿ 10ಗಂಟೆಗೆ ದೇವದ್ವಾರವನ್ನು ಅಮೃತ ಮಣ್ಣಿನಿಂದ ಮುಚ್ಚುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬಿತ್ತು. ಶ್ರೀ ಚೌಡೇಶ್ವರಿ ದೇವಸ್ಥಾನದ ಟ್ರಸ್ಟ್ ಹಂಗಾಮಿ ಅಧ್ಯಕ್ಷ ರಾಜಕುಮಾರ್, ಕಾರ್ಯದರ್ಶಿ ಎಚ್.ಎಸ್.ಜಯಶಂಕರ್ ಸೇರಿದಂತೆ ಪದಾಧಿಕಾರಿಗಳು, ಗ್ರಾಮದ ಮುಖಂಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts