More

    ಪ್ರಾಣಿ-ಪಕ್ಷಿಗಳ ದಾಹ ನೀಗಿಸುತ್ತಿರುವ ಪೌರ ಕಾರ್ಮಿಕ

    ಮದ್ದೂರು: ಪ್ರಸ್ತುತ ಬರ ಹೆಚ್ಚಾಗಿರುವುದರಿಂದ ಪ್ರಾಣಿ-ಪಕ್ಷಿಗಳು ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಪಟ್ಟಣದ ಪೌರ ಕಾರ್ಮಿಕನೊಬ್ಬ ನೀರಿನ ದಾಹ ನೀಗಿಸುವ ಮೂಲಕ ಮಾದರಿಯಾಗಿದ್ದಾರೆ.

    ಪಟ್ಟಣದ ಸಿದ್ಧಾರ್ಥ ನಗರದ ನಿವಾಸಿ ಪೌರ ಕಾರ್ಮಿಕ ರಘು ಪ್ರಾಣಿ-ಪಕ್ಷಿಗಳಿಗೆ ನೀರು ಒದಗಿಸುವ ಮೂಲಕ ಮಾನವೀಯತೆ ಮರೆದಿದ್ದಾರೆ. ಇವರ ಈ ಕೈಂಕರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಉಗ್ರ ನರಸಿಂಹಸ್ವಾಮಿ ದೇಗುಲ ಆವರಣ, ಬಿಎಸ್‌ಎನ್‌ಎಲ್‌ಕಚೇರಿ ಎದುರು, ಸಿದ್ದಾರ್ಥನಗರ ಡಾ.ಬಿ.ಆರ್.ಅಂಬೇಡ್ಕರ್ ಪಾರ್ಕ್ ಬಳಿ ಹಾಗೂ ಗರಿಬಿ ಸೈಟ್ ಬಳಿ 2 ಚಿಕ್ಕದಾದ ತೊಟ್ಟಿಗಳನ್ನು ದಾನಿಗಳ ಸಹಾಯದಿಂದ ನಿರ್ಮಿಸಿ ನಿತ್ಯ ನೀರು ಹಾಕುವ ಮೂಲಕ ಪ್ರಾಣಿ ಪಕ್ಷಿಗಳ ದಾಹ ನೀಗಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪೊಲೀಸ್ ಸ್ಟೇಷನ್, ಸರ್ಕಾರಿ ಬಸ್ ನಿಲ್ದಾಣ, ಮಹಾವೀರ್ ಚಿತ್ರಮಂದಿರ ಬಳಿ ಹಾಗೂ ಉಗ್ರ ನರಸಿಂಹಸ್ವಾಮಿ ಗೋಪುರ ಮೇಲ್ಭಾಗದಲ್ಲಿ ತೊಟ್ಟಿಗಳನ್ನು ಇಡಲು ರಘು ಚಿಂತನೆ ನಡೆಸಿದ್ದಾರೆ.

    ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಬೇಸಿಗೆ ಬಂದಿದೆ. ಇದರಿಂದ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಮೂಕ ಪ್ರಾಣಿಗಳು ದಾಹವನ್ನು ಯಾರ ಬಳಿಯೂ ಹೇಳಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ದಾನಿಗಳ ಸಹಾಯದಿಂದ 6 ಕಡೆ ನೀರಿನ ತೊಟ್ಟಿಗಳನ್ನು ಇಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 4 ತೊಟ್ಟಿಗಳನ್ನು ಇಡಲಾಗುವುದು. ಸಾರ್ವಜನಿಕರು ಮನೆ ಮುಂಭಾಗ, ಬಿಲ್ಡಿಂಗ್ ಮೇಲೆ ಹಾಗೂ ಇತರ ಕಡೆಗಳಲ್ಲಿ ಕುಡಿಯುವ ನೀರನ್ನು ಇಡುವ ಮೂಲಕ ಪ್ರಾಣಿ-ಪಕ್ಷಿಗಳ ನೀರಿನ ದಾಹ ಇಂಗಿಸಬೇಕು.
    ರಘು ಪೌರಕಾರ್ಮಿಕ, ಮದ್ದೂರು.

    ಪೌರ ಕಾರ್ಮಿಕ ರಘು ಅವರು ಪ್ರಾಣಿ-ಪಕ್ಷಿಗಳ ದಾಹ ನೀಗಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮ ಶ್ಲಾಘನೀಯ. ಈ ರೀತಿ ಪ್ರತಿಯೊಬ್ಬರೂ ಮಾಡಬೇಕು. ಇದರಿಂದ ಪ್ರಾಣಿ-ಪಕ್ಷಿಗಳಿಗೆ ನೀರಿನ ದಾಹ ನೀಗಲಿದೆ. ರಘು ಅವರ ಈ ಕೈಂಕರ್ಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
    ಸುಮಿತ್ರಾ ರಮೇಶ್, ಪುರಸಭಾ ಮಾಜಿ ಉಪಾಧ್ಯಕ್ಷೆ, ಮದ್ದೂರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts