More

    ಡಿಸೆಂಬರ್ ಮೊದಲ ವಾರದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಶ್ರೀಶಾಂತ್ ವಾಪಸ್

    ಕೊಚ್ಚಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ 7 ವರ್ಷಗಳ ನಿಷೇಧ ಶಿಕ್ಷೆ ಪೂರೈಸಿರುವ ಟೀಮ್ ಇಂಡಿಯಾದ ಮಾಜಿ ವೇಗಿ ಎಸ್. ಶ್ರೀಶಾಂತ್ ಡಿಸೆಂಬರ್ ಮೊದಲ ವಾರದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ಕೇರಳದಲ್ಲಿ ನಡೆಯಲಿರುವ ಪ್ರೆಸಿಡೆಂಟ್ಸ್ ಟಿ20 ಕಪ್ ಮೂಲಕ 37 ವರ್ಷದ ಶ್ರೀಶಾಂತ್ ಮರಳಿ ಕಣಕ್ಕಿಳಿಯಲಿದ್ದಾರೆ.

    ಕಳೆದ ಸೆಪ್ಟೆಂಬರ್‌ನಲ್ಲಿ ಅವರ ನಿಷೇಧ ಶಿಕ್ಷೆ ಮುಕ್ತಾಯ ಕಂಡಿತ್ತು. ಕೇರಳ ಕ್ರಿಕೆಟ್ ಸಂಸ್ಥೆ (ಕೆಸಿಎ) ಆಯೋಜಿಸಲಿರುವ ಟಿ20 ಟೂರ್ನಿಗೆ ಸರ್ಕಾರದಿಂದ ಇನ್ನಷ್ಟೇ ಅನುಮತಿ ಸಿಗಬೇಕಾಗಿದ್ದು, ದಿನಾಂಕವೂ ಅಂತಿಮಗೊಂಡಿಲ್ಲ. ಆದರೆ ಡಿಸೆಂಬರ್ ಮೊದಲ ವಾರದಲ್ಲಿ ಅಲಪುಜಾದಲ್ಲಿ ಟೂರ್ನಿ ಆರಂಭಗೊಳ್ಳುವ ನಿರೀಕ್ಷೆ ಇದೆ.

    ‘ಟೂರ್ನಿಗೆ ಶ್ರೀಶಾಂತ್ ಅವರೇ ತಾರಾ ಆಕರ್ಷಣೆಯಾಗಿರಲಿದ್ದಾರೆ. ಟೂರ್ನಿಗಾಗಿ ಎಲ್ಲರೂ ಅಲಪುಜಾದ ಬಯೋ-ಬಬಲ್‌ನಲ್ಲಿರಲಿದ್ದಾರೆ. ಸರ್ಕಾರದಿಂದ ಟೂರ್ನಿಗೆ ಅನುಮತಿ ಸಿಗುವ ನಿರೀಕ್ಷೆಯಲ್ಲಿದ್ದೇವೆ’ ಎಂದು ಕೆಸಿಎ ಅಧ್ಯಕ್ಷ ಸಂಜಯ್ ಕೆ. ವರ್ಗೀಸ್ ತಿಳಿಸಿದ್ದಾರೆ.

    2013ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಿದ್ದಾಗ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಶ್ರೀಶಾಂತ್, ಬಳಿಕ ಸೆರೆಮನೆಯನ್ನೂ ಸೇರಿ ಆಜೀವ ನಿಷೇಧಕ್ಕೊಳಗಾಗಿದ್ದರು. ಆದರೆ ಬಳಿಕ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಅವರು ಶಿಕ್ಷೆಯ ಪ್ರಮಾಣವನ್ನು ತಗ್ಗಿಸಿಕೊಳ್ಳುವಲ್ಲಿ ಸಲರಾಗಿದ್ದರು.

    2005ರಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದ ಶ್ರೀಶಾಂತ್ 27 ಟೆಸ್ಟ್, 53 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು ಕ್ರಮವಾಗಿ 87, 75, 7 ವಿಕೆಟ್ ಕಬಳಿಸಿದ್ದಾರೆ. 2007ರ ಟಿ20 ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರೂ ಆಗಿದ್ದಾರೆ.

    ಕುಟುಂಬದ ಸದಸ್ಯರಿಗೆ ಆಟಗಾರರ ಜತೆಗಿರಲು ಅವಕಾಶ ನೀಡಿದ್ದೇ ಮುಂಬೈ ಇಂಡಿಯನ್ಸ್ ಯಶಸ್ಸಿಗೆ ಕಾರಣವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts